Vijayapur

ವಿಜಯಪುರದಲ್ಲಿ ಎರಡು ಬೈಕ್ ಗಳ ಮಧ್ಯೆ ಅಪಘಾತ; ಮೂವರ ಸಾವು

ವಿಜಯಪುರ, 2- ಎರಡು ಬೈಕ್ ಗಳ ಮಧ್ಯೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಮೂವರು ಅಸುನೀಗಿದ್ದು ಓರ್ವ ಗಾಯಗೊಂಡ ಘಟನೆ ಬಸವನಬಾಗೇವಾಡಿ ತಾಲೂಕಿನ ದಿಂಡಾವರ ಗ್ರಾಮದಲ್ಲಿ ಶನಿವಾರ ನಸುಕಿನಜಾವ ಸಂಭವಿಸಿದೆ.

ಸ್ಥಳದಲ್ಲಿ ಇಬ್ಬರು ಸಾವನ್ನಪ್ಪಿದ್ದು, ಮತ್ತೋರ್ವ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾನೆ. ಅಪಘಾತದಲ್ಲಿ ಬೈಕ್ ಒಂದರ ಪೆಟ್ರೋಲ್ ಟ್ಯಾಂಕ್ ನಿಂದ ಪೆಟ್ರೋಲ್ ಸೋರಿಕೆಯಾಗಿ ಬೆಂಕಿ ತಗುಲಿ ಎರಡೂ ಬೈಕ್ ಗಳು ಹೊತ್ತಿ ಉರಿದಿವೆ.

ಕಲಬುರಗಿ ಜಿಲ್ಲೆ ಅಫ್ಜಲಪುರ ಮೂಲದ ಬೈಕ್ ಸವಾರರು ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟಕ್ಕೆ ಬೈಕ್ ನಲ್ಲಿ ಹೋಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಮೃತರನ್ನು ಗುಲಬುರ್ಗಾ ಜಿಲ್ಲೆಯ ಅಫಜಲ್ ಪುರದ
ಕುಮಾರ ಬಾಲಕುಂದಿ ( 22) ಎಂದು ಗುರುತಿಸಲಾಗಿದೆ. ಸಾವನ್ನಪ್ಪಿರುವ ಇನ್ನಿಬ್ಬರ ಹೆಸರು ಪತ್ತೆಯಾಗಿಲ್ಲ.

ಆರು ಜನ ಸ್ನೇಹಿತರು ಬೈಕ್ ನಲ್ಲಿ ಕೊಪ್ಪಳದ ಅಂಜನಾದ್ರಿ ಬೆಟ್ಟಕ್ಕೆ ಆಂಜನೇಯನ ದರ್ಶನ ಪಡೆಯಲು ಹೋಗುತ್ತಿದ್ದರು. ದಿಂಡವಾರ ಬಳಿ ಎದುರಿನಿಂದ ಬರುತ್ತಿದ್ದ ಇನ್ನೊಂದು ಬೈಕ್ ಗೆ ಮುಖಾಮುಖ ಡಿಕ್ಕಿಯಾಗಿ ಏಕಾಏಕಿ ಪೆಟ್ರೋಲ್ ಚೆಲ್ಲಿ ಎರಡು ಬೈಕ್ ಗಳು ಕ್ಷರ್ಣಾಧದಲ್ಲಿ ಸುಟ್ಟು ಭಸ್ಮವಾಗಿವೆ.

Leave a Reply

Your email address will not be published. Required fields are marked *

Back to top button
error: Content is protected !!