New Delhi

ಭಾರತದಲ್ಲಿ 1 ಲಕ್ಷ ದಾಟಿದ ಕೊರೋನಾ ಸಾವಿನ ಸಂಖ್ಯೆ

ನವದೆಹಲಿ, ಅ 2- ಕಳೆದ 24 ಗಂಟೆಗಳಲ್ಲಿ 1069 ಜನರು ಕೊವಿಡ್ ಗೆ ಬಲಿಯಾದ ನಂತರ ಸಾವಿನ ಒಟ್ಟು ಸಂಖ್ಯೆ 1 ಲಕ್ಷ ದಾಟುವುದರೊಂದಿಗೆ ಭಾರತ, ವಿಶ್ವದಲ್ಲೇ ಈ ಸಂಖ್ಯೆ ದಾಟಿದ ಮೂರನೇ ದೇಶವಾಗಿದೆ.

ಇದೇ ಅವಧಿಯಲ್ಲಿ ದೇಶದಲ್ಲಿ 79,476 ಹೊಸ ಪ್ರಕರಣಗಳು ವರದಿಯಾಗುವುದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 64,73,545 ಕ್ಕೆ ಏರಿದೆ.
ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳಂತೆ, ಕಳೆದ ಒಂದು ದಿನದಲ್ಲಿ ಒಟ್ಟು 75,628 ಜನರು ಚೇತರಿಸಿಕೊಳ್ಳುವುದರೊಂದಿಗೆ ಈ ವರೆಗೆ ಸೋಂಕಿನಿಂದ ಗುಣಮುಖರಾದವರ ಒಟ್ಟು ಸಂಖ್ಯೆ 54,27,706 ಕ್ಕೆ ತಲುಪಿದೆ. ಸದ್ಯ, ಚೇತರಿಕೆ ಪ್ರಮಾಣ ಶೇ 83.70 ರಷ್ಟಿದೆ. ದೇಶದಲ್ಲಿ 9,44,996 ಸಕ್ರಿಯ ಪ್ರಕರಣಗಳಿದ್ದು, ಇವು ಒಟ್ಟು ಪ್ರಕರಣಗಳ ಪೈಕಿ ಶೇ 14.74 ರಷ್ಟಿವೆ. ಸಾವಿನ ಪ್ರಮಾಣ ಶೇ 1.56 ರಷ್ಟಿದೆ.

ಚೇತರಿಸಿಕೊಂಡ ಪ್ರಕರಣಗಳು ಮತ್ತು ಸಕ್ರಿಯ ಪ್ರಕರಣಗಳ ನಡುವಿನ ಅಂತರ 44 ಲಕ್ಷ (44,82,710) ದಾಟಿದೆ.
ಕಳೆದ 24 ಗಂಟೆಗಳಲ್ಲಿ 11,32,675 ಕೊವಿಡ್‍ ಮಾದರಿಗಳನ್ನು ಪರೀಕ್ಷಿಸಲಾಗಿದೆ. ಸಾಂಕ್ರಾಮಿಕ ರೋಗ ಉಲ್ಬಣಗೊಂಡಾಗಿನಿಂದ ದೇಶದಲ್ಲಿ ಶುಕ್ರವಾರದವರೆಗೆ ಪರೀಕ್ಷಿಸಿದ ಒಟ್ಟು ಮಾದರಿಗಳ ಸಂಖ್ಯೆ 7,78,50,403 ಕ್ಕೆ ತಲುಪಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ತಿಳಿಸಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!