Bengaluru

ಸಿಎಂ ಪುತ್ರ ವಿಜಯೇಂದ್ರ ಕೊರೋನಾ ಸೋಂಕಿತ

 

ಬೆಂಗಳೂರು : ಮುಖ್ಯಮಂತ್ರಿ ಯಡಿಯೂರಪ್ಪನವರ ಪುತ್ರ, ರಾಜ್ಯ ಬಿಜೆಪಿ ಉಪಾಧ್ಯಕ್ಷ ವಿಜಯೆಂದ್ರ ಅವರು ಕೊರೋನಾ ಸೋಂಕು ಬಾಧಿತರಾಗಿದ್ದಾರೆ.

ರಾಜರಾಜೇಶ್ವರಿ ನಗರ ಹಾಗು ಶಿರಾ ಉಪಚುನಾವಣೆಗಳನ್ನು ಅದರಲ್ಲೂ ಶಿರಾ ಕ್ಷೇತ್ರ ಗೇಳಲೇಬೇಕೆಂಬ ಛಲ ತೊಟ್ಟಿರುವ ಅವರು ಕೋವಿಡ್ ನೊರ್ಮ್ಸ್ ಪಾಲಿಸದೇ ಎಲ್ಲರೊಂದಿಗೂ ಮುಕ್ತವಾಗಿ ಬೆರೆಯುತ್ತಿದ್ದರು, ಆ ತಪ್ಪೇ ಅವರನ್ನು ಸೋಂಕಿತರನಾಗಿ ಮಾಡಿರಬಹುದು.

ಟ್ವೀಟ್ ಮಾಡುವ ಮೂಲಕ ತಮ್ಮ ಸೋಂಕಿನ ಕುರಿತು ಮಾಹಿತಿ ನೀಡಿರುವ ಅವರು ತಮ್ಮಗೆ ಸೋಂಕಿನ ಯಾವುದೇ ಲಕ್ಷಣಗಳಿರಲಿಲ್ಲ, ಆದರೆ ಸೋಂಕು ಪರೀಕ್ಷೆ ವರದಿ ಪಾಸಿಟಿವ್ ಬಂದಿದೆ, ಹಾಗಾಗಿ ತಮ್ಮನು ದೈಹಿಕವಾಗಿ ಸಮೀಪಿಸಿರುವವರು ಪರೀಕ್ಷೆಗೊಳಗಾಗುವದು ಒಳ್ಳೇದೆಂದು ವಿನಂತಿಸಿಕೊಂಡಿದ್ದಾರೆ.

ವಿಜಯೇಂದ್ರ ತಂದೆ ಮುಖ್ಯಮಂತ್ರಿ ಯಡಿಯೂರಪ್ಪ ಇತ್ತೀಚಿಗಷ್ಟೇ ಸೋಂಕಿನಿಂದ ಗುಣವಾಗಿದ್ದರೆ.

ವಿಜಯೇಂದ್ರ ಅವರ ಶೀಘ್ರ ಚೇತರಿಕೆಗೆ ಪ್ರಾರ್ಥಿಸಿ ಆರೋಗ್ಯ ಸಚಿವ ಶ್ರೀರಾಮುಲು ಟ್ವೀಟ್ ಮಾಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!