Belagavi

ಸವದತ್ತಿಯಲ್ಲಿ ಭೀಕರ ರಸ್ತೆ ಅಪಘಾತ; 6 ಕೂಲಿಕಾರ್ಮಿಕರ ಸಾವು, 10 ಜನರಿಗೆ ಗಾಯ

ಸವದತ್ತಿ, 2- ತಾಲೂಕಿನ ಸವದತ್ತಿ – ಧಾರವಾಡ ರಸ್ತೆಯಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ ರಸ್ತೆ ಅಪಘಾತದಲ್ಲಿ 6 ಜನ ಅಸುನೀಗಿದ್ದು 10 ಜನ ಗಾಯಗೊಂಡಿದ್ದಾರೆ.

ಅಪಘಾತ ಬೊಲೆರೋ ಜೀಪ್ ಮತ್ತು ಟಾಟಾ ಆಸ್ ವಾಹನಗಳ ಮಧ್ಯೆ ಸಂಭವಿಸಿದೆ. ಮೃತರೆಲ್ಲರೂ ಟಾಟಾ ಆಸ್ ನಲ್ಲಿ ಪ್ರಯಾಣಿಸುತ್ತಿದ್ದರು. ಎಲ್ಲರೂ ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಚಿಂಚನೂರು ಗ್ರಾಮದವರು ಎಂದು ತಿಳಿದು ಬಂದಿದೆ.

ಧಾರವಾಡ ಹೊರವಲಯದ ಮೊರಬ್ ಗ್ರಾಮಕ್ಕೆ ಕೂಲಿ ಕೆಲಸಕ್ಕೆ ತೆರಳಿದ್ದ ಇವರು, ಕೆಲಸ ಮುಗಿಸಿ ಮನೆಗೆ ಮರಳುತ್ತಿದಾಗ ಈ ದುರ್ಘಟನೆ ಸಂಭವಿಸಿದೆ.

ಬೊಲೆರೋ ಧಾರವಾಡ ಕಡೆಗೆ ಹಾಗು ಟಾಟಾ ಆಸ್ ಸವದತ್ತಿ ಕಡೆಗೆ ತೆರಳುತ್ತಿತ್ತು. ಮೃತಪಟ್ವವರಲ್ಲಿ ಐವರು ಮಹಿಳೆಯರು ಹಾಗೂ ಓರ್ವ ಪುರುಷ ಮೃತಪಟ್ಟಿದ್ದಾರೆ. ಮೃತರ ಬಗ್ಗೆ ಹೆಚ್ಚಿನ ವಿವರ ತಿಳಿದು ಬಂದಿಲ್ಲ.

ಗಂಭೀರವಾಗಿ ಗಾಯಗೊಂಡವರನ್ನು ಸವದತ್ತಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಹೆಚ್ಚುವರಿ ಎಸ್ಪಿ ಅಮರನಾಥ ರೆಡ್ಡಿ, ಸವದತ್ತಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸವದತ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!