Belagavi

ರಾಜ್ಯದಲ್ಲಿ ಯಥಾಸ್ಥಿತಿ, ಜಿಲ್ಲೆಯಲ್ಲಿ ದಿಢೀರ್ ಕುಸಿದ ಕೊರೋನಾ

ಬೆಳಗಾವಿ : ರಾಜ್ಯದಲ್ಲಿ ಕೊರೋನಾ ವೈರಸ್ ಅಟ್ಟಹಾಸ ಮುಂದುವರೆದಿದ್ದು 8793 ಜನ ಶುಕ್ರವಾರ ಸೋಂಕಿತರಾಗಿದ್ದಾರೆ ಹಾಗು 125 ಜನ ಸೋಂಕಿತರು ಅಸುನೀಗಿದ್ದಾರೆ.

ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 620630 ಕ್ಕೆ ಏರಿಕೆಯಾಗಿದೆ. ಇಂದಿನ ಸಾವಿನಿಂದ ಒಟ್ಟು ಅಸುನೀಗಿದವರ ಸಂಖ್ಯೆ 9119 ಕ್ಕೆ ಏರಿಕೆಯಾಗಿದೆ.
ಬೆಂಗಳೂರೊಂದರಲ್ಲೇ ವೈರಸ್ ಗೆ ಕಳೆದ 24 ಗಂಟೆಯಲ್ಲಿ 47 ಜನ ಬಲಿಯಾಗಿದ್ದಾರೆ ಎಂದು ಹೆಲ್ತ್ ಬುಲೆಟಿನ್ ತಿಳಿಸಿದೆ.

ಕಳೆದ ಹಲವಾರು ದಿನಗಳಿಂದ ನಿತ್ಯ ನೂರಾರು ಸಂಖ್ಯೆಯಲ್ಲಿ ಸೋಂಕಿತರನಾಗಿ ಮಾಡುತ್ತಿದ್ದ ಕೊರೋನಾ ಬೆಳಗಾವಿ ಜಿಲ್ಲೆಯಲ್ಲಿ ಶುಕ್ರವಾರ ದಿಢೀರ್ ಕುಸಿತ ಕಂಡಿದ್ದು 40 ಜನರಲ್ಲಿ ಹೊಸದಾಗಿ ಕಂಡುಬಂದಿದೆ, ಆದರೆ ಏಳು ಸೋಂಕಿತರು ಕೊನೆಯುಸಿರೆಳೆದಿದ್ದಾರೆ.

ಜಿಲ್ಲಾ ಆರೋಗ್ಯ ಇಲಾಖೆಯ ಹೆಲ್ತ್ ಬುಲೆಟಿನ್‍ ಪ್ರಕಾರ ಜಿಲ್ಲೆಯಲ್ಲಿ ಈ ವರೆಗೂ 19612 ಜನರಲ್ಲಿ ಸೋಂಕು ಕಂಡುಬಂದಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!