New Delhi

ಗಾಂಧಿ ಜಯಂತಿ ಪ್ರಾರ್ಥನಾ ಸಭೆಯಲ್ಲಿ ಪ್ರಧಾನಿ ಭಾಗಿ

ನವದೆಹಲಿ, ಅ 2- ಮಹಾತ್ಮಗಾಂಧಿಯವರ 151 ಜನ್ಮವಾರ್ಷಿಕೋತ್ಸವ ಅಂಗವಾಗಿ ಇಲ್ಲಿನ ಗಾಂಧಿ ಸ್ಮೃತಿಯಲ್ಲಿ ಶುಕ್ರವಾರ ಸಂಜೆ ಆಯೋಜಿಸಲಾಗಿದ್ದ ರಾಷ್ಟ್ರಪಿತನ ಪ್ರಾರ್ಥನಾ ಸಭೆಯಲ್ಲಿ ಪ್ರಧಾನಿ ನರೇಂದ್ರಮೋದಿ ಪಾಲ್ಗೊಂಡಿದ್ದರು.

ಇದಕ್ಕೂ ಮುನ್ನ ಶುಕ್ರವಾರ ಬೆಳಿಗ್ಗೆ ಪ್ರಧಾನ ಮಂತ್ರಿ ರಾಜ್ ಘಾಟ್‌ನಲ್ಲಿರುವ ಮಹಾತ್ಮ ಗಾಂಧಿಯವರ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದರು.

ಗಾಂಧಿ ಜಯಂತಿ ಸಂದರ್ಭದಲ್ಲಿ ಬಾಪು ಅವರನ್ನು ಸ್ಮರಿಸಿದ ಪ್ರಧಾನಿ,’ ನಾವು ಗಾಂಧಿ ಜಯಂತಿಯಂದು ಪ್ರೀತಿಯ ಬಾಪುಗೆ ನಮಸ್ಕರಿಸುತ್ತೇವೆ. ಅವರ ಜೀವನ ಮತ್ತು ಉದಾತ್ತ ಆಲೋಚನೆಗಳಿಂದ ಕಲಿಯಬೇಕಾದದ್ದು ಬಹಳಷ್ಟಿದೆ. ಸಮೃದ್ಧ ಮತ್ತು ಸಹಾನುಭೂತಿಯ ಭಾರತವನ್ನು ಸೃಷ್ಟಿಸಲು ಬಾಪು ಅವರ ಆದರ್ಶಗಳು ನಮಗೆ ಮಾರ್ಗದರ್ಶನ ನೀಡುವಂತಾಗಲಿ.’ ಎಂದು ಹೇಳಿದ್ದಾರೆ.

ಬಾಪು ಅವರ ಬದುಕು ಮತ್ತು ಕಾರ್ಯಗಳ ಪ್ರಮುಖ ಕ್ಷಣಗಳನ್ನು ಬಿಂಬಿಸುವ ಕಿರು ವೀಡಿಯೊ ಕ್ಲಿಪ್ ಅನ್ನು ಪ್ರಧಾನಿ ಅಪ್‍ ಲೋಡ್ ಮಾಡಿದ್ದಾರೆ. ಇತರ ಹಲವು ರಾಜಕೀಯ ನಾಯಕರು ರಾಜಘಾಟ್ ಗೆ ತೆರಳಿ ಗಾಂಧಿ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!