Lucknow

ಉತ್ತರ ಪ್ರದೇಶದಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣಗಳು ಏರಿಕೆ: ಆದಿತ್ಯನಾಥ ರಾಜೀನಾಮೆಗೆ ಎಡಪಕ್ಷಗಳ ಒತ್ತಾಯ

ಲಖನೌ, ಅ 2- ಉತ್ತರ ಪ್ರದೇಶದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣಗಳು ಏರಿಕೆಯಾಗುತ್ತಿರುವುದನ್ನು ವಿರೋಧಿಸಿ ಪ್ರತಿಭಟಿಸುತ್ತಿದ್ದ ಎಡಪಂಥೀಯ ನಾಯಕರು ಮತ್ತು ಕಾರ್ಯಕರ್ತರ ಬಂಧನವನ್ನು ಸಿಪಿಐ-ಎಂಎಲ್‌ ರಾಜ್ಯ ಘಟಕ ಶುಕ್ರವಾರ ತೀವ್ರವಾಗಿ ಖಂಡಿಸಿದೆ.

ಮಹಿಳೆಯರನ್ನು ರಕ್ಷಿಸುವಲ್ಲಿ ವಿಫಲವಾಗಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಾಜೀನಾಮೆ ನೀಡಬೇಕೆಂದು ಎಡಪಂಥೀಯ ನಾಯಕರು ಗಾಂಧಿ ಜಯಂತಿ ಸಂದರ್ಭದಲ್ಲಿ ಹಜರತ್‌ಗಂಜ್ ಕ್ರಾಸಿಂಗ್‌ನ ಗಾಂಧಿ ಪ್ರತಿಮೆ ಬಳಿ ನಡೆದ ಪ್ರತಿಭಟನೆಯ ವೇಳೆ ಒತ್ತಾಯಿಸಿದ್ದಾರೆ.

ಬಂಧಿತ ಎಡಪಂಥೀಯ ನಾಯಕರನ್ನು ನಗರದ ಪರಿಸರ ಉದ್ಯಾನ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು. ಪ್ರತಿಭಟನಾಕಾರರು ಪೊಲೀಸ್ ಕಸ್ಟಡಿಯಲ್ಲೇ ಧರಣಿ ನಡೆಸಿದರು. ನಾಯಕರನ್ನು ಬೇಷರತ್ ಆಗಿ ಬಿಡುಗಡೆ ಮಾಡುವಂತೆ

ಹತ್ರಾಸ್ ಮತ್ತು ಬಲರಾಂಪುರ್ ಘಟನೆಗಳ ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗಬೇಕು. ಕುಟುಂಬದ ಅನುಮತಿಯಿಲ್ಲದೆ ಅತ್ಯಾಚಾರಕ್ಕೊಳಗಾದ 19 ವರ್ಷದ ಸಂತ್ರಸ್ತೆಯ ಮೃತದೇಹವನ್ನು ಮಧ್ಯರಾತ್ರಿ ಅಂತ್ಯಕ್ರಿಯೆ ನಡೆಸಲು ಕ್ರಮಕೈಗೊಂಡ ಅಧಿಕಾರಿಗಳಿಗೆ ಮತ್ತು, ಹುಡುಗಿಯ ತಂದೆಗೆ ಬೆದರಿಕೆ ಹಾಕಿದ ಹತ್ರಾಸ್ ಡಿಎಂ ಮತ್ತು ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸಿದ ಎಸ್ ಪಿ ವಿರುದ್ಧವೂ ಕ್ರಮತೆಗೆದುಕೊಳ್ಳಬೇಕು ಎಂದು ಸಿಪಿಎಂ-ಎಂಎಲ್‍ ಒತ್ತಾಯಿಸಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!