New Delhi

ಹತ್ರಾಸ್ ಸಂತ್ರಸ್ಥೆಗಾಗಿ ಆಯೋಜಿಸಿದ್ದ ಪ್ರಾರ್ಥನೆಯಲ್ಲಿ ಪ್ರಿಯಾಂಕಾ ಗಾಂಧಿ ಭಾಗಿ

ನವದೆಹಲಿ, ಅ 2- ಹತ್ರಾಸ್ ಬಾಧಿತೆ ಗಾಗಿ ಪ್ರಾಚೀನ್ ಭಗವಾನ್ ವಾಲ್ಮೀಕಿ ಮಂದಿರದಲ್ಲಿ ಆಯೋಜಿಸಲಾಗಿದ್ದ ಪ್ರಾರ್ಥನಾ ಸಭೆಯಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಪಾಲ್ಗೊಂಡು, ಸಮುದಾಯದ ಕಳವಳಕ್ಕೆ ದ್ವನಿಯಾಗುವ ಜೊತೆಗೆ ಸಂತ್ರಸ್ಥ ಕುಟುಂಬಕ್ಕೆ ನ್ಯಾಯ ಕಲ್ಪಿಸುವ ಭರವಸೆ ನೀಡಿದರು.

ಸಂತ್ರಸ್ಥೆಯ ಕುಟುಂಬಕ್ಕೆ ಯಾವುದೇ ರೀತಿಯ ಬೆಂಬಲ ನೀಡಲು ಉತ್ತರ ಪ್ರದೇಶ ನಿರಾಕರಿಸಿದೆ ಎಂದು ಆರೋಪಿಸಿರುವ ಪ್ರಿಯಾಂಕಗಾಂಧಿ ಕುಟುಂಬಕ್ಕೆ ಏಕಾಂಗಿ ಎಂಬ ಬರದಿರಲಿ ಎಂದು ತಾವು ಸಮುದಾಯ ಹಾಗೂ ಕುಟುಂಬದ ಬೆಂಬಲಕ್ಕೆ ನಿಂತಿರುವುದಾಗಿ ವಾದ್ರಾ ಹೇಳಿದರು.

ಘಟನೆ ಸಂಬಂಧ ಜನರು ದೊಡ್ಡ ರೀತಿಯಲ್ಲಿ ದ್ವನಿ ಎತ್ತಬೇಕು ಈ ವಿಷಯದಲ್ಲಿ ಸರ್ಕಾರಕ್ಕೆ ಅದರ ತಪ್ಪನ್ನು ಮನವರಿಕೆ ಮಾಡಿಕೊಡಬೇಕು. ಸಮುದಾಯದ ಪ್ರತಿಯೊಬ್ಬರು ಪ್ರಯತ್ನ ನಡೆಸಿದರೆ ಈ ವಿಷಯದಲ್ಲಿ ನ್ಯಾಯ ಪಡೆಯಬಹುದು ಎಂದು ಹೇಳಿದರು.

ಕುಟುಂಬ ಸದಸ್ಯರನ್ನು ದೂರ ಇರಿಸಿ ಬಾಧಿತೆಯ ಅಂತ್ಯಕ್ರಿಯೆ ನಡೆಸಿದ ಉತ್ತರ ಪ್ರದೇಶ ಸರ್ಕಾರದ ನಡೆಯನ್ನು ಖಂಡಿಸಿದ ಅವರು, ಮಗಳ ಅಂತ್ಯಕ್ರಿಯೆಗೆ ತಂದೆ ಅವಕಾಶ ನಿರಾಕರಿಸುವ ಮೂಲಕ ನಮ್ಮ ಸಂಸ್ಕೃತಿಗೆ ಅಪಮಾನ ಮಾಡಿದ್ದಾರೆ ಎಂದು ವಾದ್ರಾ ಆರೋಪಿಸಿದರು.

ವಾಲ್ಮೀಕಿ ಮಂದಿರ ಅತ್ಯಂತ ಪುರಾತನ ದೇಗುಲವಾಗಿದ್ದು, ಸ್ವಾತಂತ್ರ ಚಳವಳಿಯ ವೇಳೆ ಮಹಾತ್ಮಾಗಾಂಧಿ 214 ದಿನಗಳ ಕಾಲ ಈ ದೇಗುಲದಲ್ಲಿ ತಂಗಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!