Colombo

ಮಹಾತ್ಮಗಾಂಧಿಗೆ ಶ್ರೀಲಂಕಾ ಪ್ರಧಾನಿ ಗೌರವ ನಮನ

ಕೊಲಂಬೊ, ಅ 2- ಭಾರತದ ರಾಷ್ಟ್ರಪಿತ ಮಹಾತ್ಮ ಗಾಂಧಿ 151ನೇ ಜಯಂತಿ ಅಂಗವಾಗಿ ಶ್ರೀಲಂಕಾ ಪ್ರಧಾನ ಮಂತ್ರಿ ಮಹಿಂದ ರಾಜಪಕ್ಸ ಗಾಂಧಿ ಪ್ರತಿಮೆಗೆ ಶುಕ್ರವಾರ ಪುಷ್ಪನಮನ ಸಲ್ಲಿಸಿದರು.

ಶ್ರೀಲಂಕಾ ರಾಜಧಾನಿ ಕೊಲಂಬೊದ ಟೆಂಪಲ್ ಟ್ರೀಸ್ ನಲ್ಲಿರುವ ಭಾರತ ಹೈಕಮೀಷನರ್ ಕಛೇರಿಯಲ್ಲಿರುವ ಗಾಂಧಿ ಪ್ರತಿಮೆಗೆ ಪುಷ್ಟ ನಮನ ಸಲ್ಲಿಸಿದರು. ಅವರೊಂದಿಗೆ ಶ್ರೀಲಂಕಾ ಹಲವು ಹಿರಿಯ ಅಧಿಕಾರಿಗಳು ಈಸಂದರ್ಭದಲ್ಲಿ ಉಪಸ್ಥಿತರಿದ್ದರು.

ಮಹಾತ್ಮ ಗಾಂಧಿ ಜಯಂತಿಯನ್ನು ಭಾರತದೊಂದಿಗೆ ಪ್ರಪಂಚದೆಲ್ಲೆಡೆ ಆಚರಿಸುತ್ತಿದ್ದಾರೆ. ದಕ್ಷಿಣ ಆಫ್ರಿಕಾ,ಅಮೆರಿಕಾ,ಬ್ರಿಟನ್ ನಂತಹ ದೇಶಗಳಲ್ಲಿ ಮಹಾತ್ಮಗಾಂಧಿ ಜಯಂತಿಯನ್ನು ಭಾರತದಲ್ಲಿ ಆಚರಿಸಿದಂತೆ ಶ್ರದ್ದಾ ಭಕ್ತಿಯಿಂದ ಆಚರಿಸಲಾಗುತ್ತಿದೆ. ಆಯಾ ದೇಶಗಳೊಂದಿಗೆ ಮಹಾತ್ಮ ಗಾಂಧಿಗೆ ಇರುವ ಸಂಬಂಧಗಳು ಒಂದು ಕಾರಣವಾದರೆ, ಈ ದೇಶಗಳಲ್ಲಿ ಭಾರತೀಯರ ಸಂಖ್ಯೆ ಹೆಚ್ಚು ಎಂಬುದು ಗಮನಾರ್ಹ.

Leave a Reply

Your email address will not be published. Required fields are marked *

Back to top button
error: Content is protected !!