New Delhi

ಬ್ರಿಟಿಷ್‌ ಕರೆನ್ಸಿಯಲ್ಲಿ ಕಾಣಿಸಿಕೊಳ್ಳಲಿರುವ ಮಹಾತ್ಮಾ ಗಾಂಧಿ

ನವದೆಹಲಿ, ಅ 2- ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರು ಶೀಘ್ರದಲ್ಲೇ ಬ್ರಿಟನ್‌ನ ಕರೆನ್ಸಿಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಕುರಿತು ಬ್ರಿಟನ್‌ ಸರ್ಕಾರ ಭಾರತಕ್ಕೆ ಪ್ರಸ್ತಾವನೆ ಸಲ್ಲಿಸಿದೆ.

ಗಾಂಧೀಜಿ ಅವರು 121ನೇ ಜನ್ಮ ವರ್ಷಾಚರಣೆ ಸಂದರ್ಭದಲ್ಲಿ ಎನ್‌ಡಿಎ, ಯುಪಿಎ ಮತ್ತು ಇತರ ರಾಜಕೀಯ ಪಕ್ಷದ ನಾಯಕರು ಈ ಪ್ರಸ್ತಾವನೆಗೆ ಬಹುತೇಕ ಸಮ್ಮತಿ ಸೂಚಿಸಿದ್ದಾರೆ.

ಈ ಕುರಿತು ಬಿಜೆಪಿ ನಾಯಕರೊಬ್ಬರು ಪ್ರತಿಕ್ರಿಯೆ ನೀಡಿದ್ದು, ಮೋಹನ ದಾಸ ಕರಮಚಂದ ಗಾಂಧಿ ಅವರು ವಿಶ್ವಕ್ಕೆ ಸಮಾನತೆ ಮತ್ತು ಮಾನವೀಯತೆಯ ಸಂಕೇತವಾಗಿದ್ದಾರೆ. ಅವರು ಸ್ವಾತಂತ್ರ್ಯ ಹೋರಾಟದ ಸಂಕೇತ. ಅವರಿಗೆ ವಿಶ್ವಾದ್ಯಂತ ಗುರುತು ನೀಡುವ ಬ್ರಿಟನ್‌ ಪ್ರಸ್ತಾವನೆ ಸ್ವೀಕಾರಾರ್ಹವಾಗಿದೆ ಎಂದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!