Belagavi

ಮಚ್ಛೆ ಬಳಿ ಹತ್ಯೆಯಾಗಿದ್ದ ಮಹಿಳೆಯರಿಬ್ಬರ ಕೊಲೆ ಪ್ರಕರಣ ಭೇದಿಸಿದ ಪೊಲೀಸರು

ಬೆಳಗಾವಿ, ೨- ಬೆಳಗಾವಿ ತಾಲೂಕಿನ ಮಚ್ಛೆ ಗ್ರಾಮದ ಬ್ರಹ್ಮಲಿಂಗ ನಗರದ ಹೊರವಲಯದಲ್ಲಿ ಕಳೆದವಾರ ನಡೆದಿದ್ದ ಇಬ್ಬರು ವಿವಾಹಿತ ಮಹಿಳೆಯರ ಕೊಲೆ ಪ್ರಕರಣವನ್ನು ಬೆಳಗಾವಿ ಪೊಲೀಸರು ಬೇಧಿಸಿ, ಓವ೯ ಮಹಿಳೆ ಸೇರಿ ಐವರನ್ನು ಬಂಧಿಸಿದ್ದಾರೆ.

ಬೆಳಗಾವಿ ತಾಲೂಕಿನ ಕಾಳ್ಯಾನಟ್ಟಿಯ ಕಲ್ಪನಾ ಮಲ್ಲೇಶ ಬಸರಿಮರದ (35), ಚಂದಗಡ ತಾಲೂಕಿನ ಸುರತೆ ಗ್ರಾಮದ ಮಹೇಶ ಮೊನಪ್ಪ ನಾಯಿಕ (20), ಬೆಳಗುಂದಿ ಗ್ರಾಮದ ರಾಹುಲ್ ಮಾರುತಿ ಪಾಟೀಲ (19), ಗಣೇಪುರದ ರೋಹಿತ ನಾಗಪ್ಪ ವಡ್ಡರ (21) ಹಾಗೂ ಕಾಳ್ಯಾನಟ್ಟಿಯ ಶಾನೂರ ನಾಗಪ್ಪ ಬನ್ನಾರ (18) ಬಂಧಿತರು.

ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಡಿಸಿಪಿ ವಿಕ್ರಮ ಅಮಟೆ, ತನ್ನ ಪ್ರಿಯಕರ ಬೇರೊಂದು ಮದುವೆಯಾಗಿದ್ದಕ್ಕೆ ಕುಪಿತಗೊಂಡಿದ್ದ ಕಲ್ಪನಾ ಬಸರಿಮರದ ತನ್ನ ಅಕ್ಕನ ಮಗನ ನೆರವಿನಿಂದ ಪ್ರಿಯಕರನ ಪತ್ನಿ ರೋಹಿಣಿಯನ್ನು ಕೊಲೆ ಮಾಡಿ ಪ್ರಿಯಕರನನ್ನು ಮರಳಿ ಪಡೆಯುವ ಉದ್ದೇಶದಿಂದ ಹೊಂದಿದ್ದಳು. 5 ತಿಂಗಳು ಗರ್ಭಿಣಿಯಾಗಿದ್ದ ರೋಹಿಣಿ ತಮ್ಮ ಸೇಹಿತೆ ರಾಜಶ್ರೀ ಬನ್ನೂರ ಎಂಬವರೊಂದಿಗೆ ಕಳೆದ ತಿಂಗಳ ಸೆಪ್ಟೆಂಬರ್ 26 ರಂದು ಸಾಯಂಕಾಲ 4 ಗಂಟೆಯ ಸುಮಾರಿಗೆ ಮಚ್ಛೆ ಗ್ರಾಮದ ಬ್ರಹ್ಮಲಿಂಗ ನಗರದ ಹೊರವಲಯದಲ್ಲಿ ವಾಯು ವಿಹಾರ ಮಾಡುತ್ತಿದ್ದಾಗ ಎರಡು ಬೈಕ್ ಗಳಲ್ಲಿ ಬಂದ ನಾಲ್ಕು ಜನರು ಇವರ ಕಣ್ಣಿಗೆ ಮೆಣಸಿನಪುಡಿ ಎರಚಿ ಚಾಕುವಿನಿಂದ ಕುತ್ತಿಗೆ ಸೀಳಿ ಹತ್ಯೆ ಮಾಡಿದ್ದರು. ಈ ಘಟನೆಯಿಂದ ಬೆಳಗಾವಿಯ ಜನ ಬೆಚ್ಚಿಬಿದ್ದಿದ್ದರು.

ಪೋಲೀಸರು ಹಂತಕರ ಪತ್ತೆಗೆ ಮೂರು ತಂಡ ರಚಿಸಿದ್ದರು. ಕಾಳ್ಯಾನಟ್ಟಿಯ ಗಂಗಪ್ಪ ಪ್ರಶಾಂತ ಹುಲಮಣಿ ಹಾಗೂ ಆರೋಪಿ ಅದೇ ಗ್ರಾಮದ ಕಲ್ಪನಾ ಬಸರಿಮರದ ಮಧ್ಯೆ ಅನೈತಿಕ ಸಂಬಂಧವಿತ್ತು. ಕಲ್ಪನಾ ಗಂಗಪ್ಪನಿಗೆ ಕೇಳಿದಾಗೆಲ್ಲ ಹಣ ಕೊಡುತ್ತಿದ್ದಳು. ಈಚೆಗೆ ಗಂಗಪ್ಪನು ರೋಹಿಣಿ ಎಂಬವರನ್ನು ವಿವಾಹ ವಾಗಿ ಕಲ್ಪನಾಳಿಂದ ದೂರಾಗಿದ್ದ. ಹೀಗಾಗಿ ಕಲ್ಪನಾ ಕೋಪಗೊಂಡು ತಾನು ಕೊಟ್ಟ ಹಣ ವಾಪಸ್ ಮರಳಿಸುವಂತೆ ದುಂಬಾಲು ಬಿದ್ದಿದ್ದಳು. ಆದರೆ, ಗಂಗಪ್ಪ ಹಣ ಕೊಡದೆ ಸತಾಯಿಸುತ್ತಿದ್ದ.

ಕಲ್ಪನಾ ತನಗಾದ ಅನ್ಯಾಯವನ್ನು ತನ್ನ ಅಕ್ಕನ ಮಗನಾದ ಮಹೇಶನ ಬಳಿ ತೋಡಿಕೊಂಡಿದ್ದು, ಮಹೇಶನ ಜೊತೆಗೆ ಸೇರಿ ಕಲ್ಪನಾ ರೋಹಿಣಿಯ ಕೊಲೆಗೆ ಸಂಚು ರೂಪಿಸಿದ್ದಳು.

ಸೆ.26ರಂದು ಸಂಜೆ 4 ಗಂಟೆಯ ಸುಮಾರಿಗೆ 5 ತಿಂಗಳ ಗರ್ಭಿಣಿ ರೋಹಿಣಿ ಹಾಗೂ ಅವರ ಸ್ನೇಹಿತೆ ರಾಜಶ್ರೀ ಬನ್ನಾರ ವಾಕಿಂಗ್ ಹೊರಟಿದ್ದ ವೇಳೆ ನಾಲ್ವರು ಆರೋಪಿಗಳು ಬೈಕ್ ಮೇಲೆ ಬಂದು ಕಣ್ಣಿಗೆ ಕಾರದ ಪುಡಿ ಎರಚಿ ಮಚ್ಚು ಹಾಗೂ ರಾಡ್ ನಿಂದ ಹಲ್ಲೆ ನಡೆಸಿ ಹತ್ಯೆಗೈದಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!