Ghataprabha

ಸಮಾಜ ಒಡೆಯುವುದೇ ಬಿಜೆಪಿ ಕೆಲಸ -ಸಿದ್ದರಾಮಯ್ಯ

ಘಟಪ್ರಭಾ, ೨- ದೇಶದಲ್ಲಿ ಅಶಾಂತಿ ನಿರ್ಮಾಣ, ಹಿಂದು-ಮುಸ್ಲಿಂರ ನಡುವೆ ಬೆಂಕಿ ಹಚ್ಚುವ ಕೆಲಸವನ್ನು ಮಾಡುವದೇ ಬಿಜೆಪಿಯ ಕೆಲಸ ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಗೋಕಾಕ ತಾಲೂಕಿನ ಘಟಪ್ರಭಾದಲ್ಲಿ ಸೇವಾದಳ ತರಬೇತಿ ಕೇಂದ್ರ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಬಿಜೆಪಿಯಾಗಲಿ, ಸಂಘ ಪರಿವಾರವಾಗಲಿ ದೇಶದ ಸ್ವಾತಂತ್ರ್ಯಕ್ಕಾಗಿ ಯಾವುದೇ ರೀತಿ ತ್ಯಾಗ ಬಲಿದಾನ ಮಾಡಿಲ್ಲ. ಬದಲಿಗೆ ಸಮಾಜ ಒಡೆಯುವದು, ಜಾತಿ-ಜಾತಿಗಳ ನಡುವೆ ವೈಷಮ್ಯ ಬಿತ್ತುವದೇ ಅದರ ಕೆಲಸ ಮತ್ತು ಉದ್ದೇಶವೆಂದರು.

1925ರಲ್ಲಿ ಆರ್‍ಎಸ್‍ಎಸ್ ಹುಟ್ಟಿಕೊಂಡಿದೆ, 1950ರಲ್ಲಿ ಜನಸಂಘ ಸ್ಥಾಪನೆಯಾಗಿದೆ. ಅದೇ ರೀತಿ ಬಿಜೆಪಿ ಪಕ್ಷ ಹುಟ್ಟಿಕೊಂಡಿದ್ದು 1980ರಲ್ಲಿ. ಹೀಗಾಗಿ ದೇಶದ ಸ್ವಾತಂತ್ರ್ಯಕ್ಕೆ ಇವರ ಕೊಡುಗೆ ಏನೂ ಇಲ್ಲ. ಇವರು ಯಾವುದೇ ರೀತಿ ತ್ಯಾಗ, ಬಲಿದಾನವನ್ನು ಮಾಡಿಲವೆಂದು ಅವರು ಹೇಳಿದರು.

ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯುವದೇ ಕಾಂಗ್ರೆಸ್ ನ ಗುರಿ ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಪಕ್ಷ ಸ್ಥಾಪನೆಯಾಗಿರುವುದೇ ಮಹಾತ್ಮಾ ಗಾಂಧಿಜಿ ಅವರ ತತ್ವ, ಆದರ್ಶಗಳ ಆಧಾರದ ಮೇಲೆ. ಸ್ವಾತಂತ್ರ್ಯ ಪೂರ್ವದಲ್ಲಿ ದೇಶಕ್ಕೆ ಕಾಂಗ್ರೆಸ್ ಕೊಡುಗೆ ಏನು, ಸ್ವಾತಂತ್ರ್ಯ ನಂತರ ನೆಹರು ಅವರ ಆಡಳಿತ ವಿವರಿಸಿ ದೇಶದಲ್ಲಿ ಕಾಂಗ್ರೆಸ್ ಪಕ್ಷದ ವೈಭವ ದಿನಗಳನ್ನು ಮತ್ತೆ ತರುವ ಉದ್ದೇಶದಿಂದ ಯುವ ಜನರು, ಕಾಂಗ್ರೆಸ್ ಕಾರ್ಯಕರ್ತರಲ್ಲಿ ತತ್ವ ಸಿದ್ದಾಂತಗಳ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಈ ಸೇವಾದಳದ ತರಬೇತಿ ಕೇಂದ್ರ ಮಾಡಲಿದೆ ಎಂದರು.

Leave a Reply

Your email address will not be published. Required fields are marked *

Back to top button
error: Content is protected !!