Belagavi

ಡಿಕೆಶಿ ಮೇಲಿನ ಜಾರಕಿಹೊಳಿ ವೈಷಮ್ಯ ಇನ್ನೂ ತಣ್ಣಗಾಗಿಲ್ಲ

 

ಬೆಳಗಾವಿ, 2- ನೀರಾವರಿ ಸಚಿವ ರಮೇಶ ಜಾರಕಿಹೊಳಿ ಅವರಿಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ ಮೇಲಿನ ಕೋಪ ಇನ್ನೂ ಕಡಿಮೆಯಾಗಿಲ್ಲವೆಂಬುವದು ಇಂದು ಪುನಃ ಕಂಡುಬಂದಿದೆ.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು ಶಿವಕುಮಾರ ಕುರಿತು ಕೇಳಿದ ಪ್ರಶ್ನೆಗಳಿಗೆ ಸಿಟ್ಟಿನಿಂದಲೇ ಉತ್ತರಿಸಿ “ಅವನ್ಯಾವನರಿ, ಅಂಗಡಿ ಕುಟುಂಬದ ಕುರಿತು ಮಾತನಾಡುವಷ್ಟು ಯೋಗ್ಯತೆ ಅವನಿಗೆ ಇದೆಯಾ” ಎಂದು ಹೇಳಿ ಅವರ ಕುರಿತು ಏಕವಚನದಲ್ಲೇ “ತನ್ನ ಪಕ್ಷದ ಕುರಿತು ನೋಡಿಕೊಳ್ಳಲಿ, ನಮ್ಮ ಪಕ್ಷದ ಕುರಿತು ಬೇಡ, ಕೀಳುಮಟ್ಟದ ರಾಜಕಾರಣ ಬಿಟ್ಟು ರಾಜ್ಯದ ಅಭಿವೃದ್ಧಿಗೆ ನೆರವಾಗಲಿ” ಎಂದರು.

ದೆಹಲಿಯಲ್ಲಿ ನಿಧನರಾಗಿದ್ದ ಕೇಂದ್ರ ಸಚಿವ ಸುರೇಶ ಅಂಗಡಿ ಅವರ ಪಾರ್ಥಿವ ಶರೀರ ಬೆಳಗಾವಿಗೆ ತರದೇ ಅಲ್ಲಿಯೇ ಸಂಸ್ಕಾರ ಮಾಡಿದ್ದ ಹಿನ್ನೆಲೆಯಲ್ಲಿ, ಶಿವಕುಮಾರ ಅಂಗಡಿ ಕುಟುಂಬಕ್ಕೆ ಅನ್ಯಾಯವಾಗಿದೆ ಎಂದು ಹೇಳಿದ್ದರು. ಅದಕ್ಕೆ ಪ್ರತಿಕ್ರಿಯಿಸಿರುವ ಜಾರಕಿಹೊಳಿ ಈ ವಿಷಯದಲ್ಲಿ ಕೋವಿಡ್ ನಾಮ್ಸ೯ ಅನುಸರಿಸಲಾಗಿದೆ ಹಾಗು ಪ್ರಧಾನಿ ನರೇಂದ್ರ ಮೋದಿಯವರ ಸಲಹೆಯನ್ನೂ ಪಾಲಿಸಲಾಗಿದೆ ಎಂದರು.

ಅಂಗಡಿ ನಿಧನದಿಂದ ತೆರವಾಗಿರುವ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಅಭ್ಯರ್ಥಿ ಆಯ್ಕೆ ಹೈಕಮಾಂಡ್ ಮಾಡಲಿದೆಯೆಂದು ಜಾರಕಿಹೊಳಿ ತಿಳಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!