Entertainment

‘ಸೆ. 24 ಮರೆಯಲಾಗದ ದಿನ’ ; ವಿಡಿಯೋದಲ್ಲಿ ಕಣ್ಣೀರಿಟ್ಟ ಅನುಶ್ರೀ

 

ಬೆಂಗಳೂರು, ಅ 02- ಇತ್ತೀಚೆಗೆ ಸಿಸಿಬಿ ವಿಚಾರಣೆಗೆ ಹಾಜರಾಗಿ ಬಂದಿರುವ ಅನುಶ್ರೀ ಆ ಕುರಿತು ನಡೆಯುತ್ತಿರುವ ಚರ್ಚೆಗೆ ಬೇಸರ ವ್ಯಕ್ತಪಡಿಸಿ ಕಣ್ಣೀರಿಟ್ಟಿದ್ದಾರೆ ಹಾಗೂ ತಮ್ಮ ಬೆಂಬಲಕ್ಕೆ ನಿಂತವರಿಗೆ ಧನ್ಯವಾದವನ್ನೂ ಅರ್ಪಿಸಿದ್ದಾರೆ.

ನನ್ನ ಜೀವನದ ಕರಾಳ ದಿನ ”ಸೆಪ್ಟೆಂಬರ್ 24, 2020….ನನ್ನ ಜೀವನದಲ್ಲಿ ಮತ್ತೆ ಎಂದಿಗೂ ನೆನಪಿಸಿಕೊಳ್ಳಲು ಇಷ್ಟ ಪಡದ ದಿನ. 12 ವರ್ಷಗಳ ಹಿಂದೆ ನಾನು ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಗೆದ್ದಾಗ ಅಂದುಕೊಂಡಿರಲಿಲ್ಲ. ಮತ್ತೆ ಅದೇ ದಿನ ನನಗೆ ಜೀವನದಲ್ಲಿ ಮುಳ್ಳಾಗಿ ಬರುತ್ತೆ ಅಂತ. ಈ ವಿಡಿಯೋವನ್ನು ನನ್ನನ್ನು ನಾನು ಸಮರ್ಥನೆ ಮಾಡಿಕೊಳ್ಳುವುದಕ್ಕೋ ಅಥವಾ ಕರುಣೆಗಾಗಿ ಮಾಡ್ತಿಲ್ಲ. ನನ್ನ ಸುತ್ತ ಹಲವು ಚರ್ಚೆಗಳು ಆಗ್ತಿರುವ ಕಾರಣ ಈ ವಿಡಿಯೋ ಮಾಡ್ತಿದ್ದೀನಿ” ಎಂದು ನೋವು ಹಂಚಿಕೊಂಡಿದ್ದಾರೆ ಅನುಶ್ರೀ.

”ಸಿಸಿಬಿ ನೋಟಿಸ್ ಬಂದಿದ್ದು ಬೇಜಾರಾಗಿಲ್ಲ. ವಿಚಾರಣೆಗಾಗಿ ನಾನು ಹೋದ ಮಾತ್ರಕ್ಕೆ ಅಪರಾಧಿ ಅಥವಾ ಆರೋಪಿಯಾಗಲ್ಲ. ಈ ವಿಚಾರದಲ್ಲಿ ನನ್ನನ್ನು ಬಿಂಬಿಸಿದ ರೀತಿ ತುಂಬಾ ನೋವು ಉಂಟು ಮಾಡಿದೆ. ನೋವು ಎನ್ನುವುದು ತುಂಬ ಸಣ್ಣ ಪದ. ಕಳೆದ ಒಂದು ವಾರದಿಂದ ನಮ್ಮ ಮನೆಯವರ ನೆಮ್ಮದಿ ಹಾಳು ಮಾಡಿದೆ” ಎಂದು ಕಣ್ಣೀರಿಟ್ಟಿದ್ದಾರೆ.

‘ಈ ಕಷ್ಟ ಕಾಲದಲ್ಲಿ ಏನೂ ಕೇಳದೆ, ಅನುಶ್ರೀ ನೀವು ಏನು ಅಂತ ನಮಗೆ ಚೆನ್ನಾಗಿ ಗೊತ್ತು. ನಿಮ್ಮ ಮೇಲೆ ಅಪಾರವಾದ ನಂಬಿಕೆ ಇದೆ ಅಂತ ಧೈರ್ಯ ತುಂಬಿದ ಎಲ್ಲ ಕನ್ನಡಿಗರಿಗೆ ತುಂಬ ಹೃದಯ ಧನ್ಯವಾದಗಳು” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!