Entertainment

ಅಕ್ಟೋಬರ್ 15ಕ್ಕೆ ‘ರಣಂ’ ರಿಲೀಸ್‍

ಬೆಂಗಳೂರು, ೨-
ಕೊರೋನಾ ಲಾಕ್ ಡೌನ್ ನಂತರ ಚಿತ್ರಮಂದಿರಗಳನ್ನು ತೆರೆಯಲು ಇದೇ 15ರಿಂದ ಕೇಂದ್ರ ಸರ್ಕಾರ ಅನುಮತಿ ನೀಡಿದ್ದು, ಎಲ್ಲೆಡೆ ಚಿತ್ರಗಳನ್ನು ತೆರೆಗೆ ತರಲು ನಿರ್ಮಾಪಕರು ಸಿದ್ಧರಾಗುತ್ತಿದ್ದಾರೆ.

ಕೊರೋನಾ ಬಳಿಕ ಕನ್ನಡದಲ್ಲಿ ರಿಲೀಸ್ ಆಗುತ್ತಿರುವ ಚಿತ್ರಗಳಲ್ಲಿ ‘ರಣಂ’ ಚಿತ್ರವೂ ಒಂದು. ಚಿರಂಜೀವಿ ಸರ್ಜಾ ಮತ್ತು ಚೇತನ್ ಕುಮಾರ್ ಅಭಿನಯದ ಈ ಸಿನಿಮಾ ರಿಲೀಸ್ ಗೆ ಎಲ್ಲಾ ತಯಾರಿಗಳನ್ನು ಮಾಡಿಕೊಳ್ಳಲಾಗಿದೆ. ಗಾಂಧಿನಗರದ ನರ್ತಕಿ ಚಿತ್ರಮಂದಿರ ಪ್ರಮುಖ ಚಿತ್ರಮಂದಿರವಾಗಿ ‘ರಣಂ’ ಸಿನಿಮಾ ಸ್ವಾಗತಕ್ಕೆ ಸಜ್ಜಾಗಿದೆ.

‘ರಣಂ’ ಚಿತ್ರದ ಪ್ರಮುಖ ಪಾತ್ರದಲ್ಲಿ ನಟ ಚಿರಂಜೀವಿ ಸರ್ಜಾ ಕಾಣಿಸಿಕೊಳ್ಳುತ್ತಿದ್ದಾರೆ. ಪೊಲೀಸ್ ಪಾತ್ರಕ್ಕೆ ಬಣ್ಣ ಹಚ್ಚಿರುವ ಚಿರು ಅಭಿನಯವನ್ನು ವೀಕ್ಷಿಸಲು ಅಭಿಮಾನಿಗಳು ಕಾಯುತ್ತಿದ್ದಾರೆ.

ಚಿತ್ರದ ಪ್ರಮುಖ ಪಾತ್ರದಲ್ಲಿ ನಟ ಚೇತನ್ ಕಾಣಿಸಿಕೊಂಡಿದ್ದಾರೆ. ವಿಶೇಷ ಅಂದ್ರೆ ‘ರಣಂ’ ಸಿನಿಮಾ ನಟ ಚೇತನ್ ಬದುಕಿಗೆ ತುಂಬ ಹತ್ತಿರವಾದ ಸಿನಿಮಾವಂತೆ. ಚೇತನ್ ನೈಜ ಬದುಕಿನ ಹಾಗೆ ಸಿನಿಮಾದಲ್ಲೂ ಸಾಮಾಜಿಕ ಹೋರಾಟ, ರೈತಪರ ಕಾಳಜಿ ಇರುವಂತಹ ನಾಯಕನ ಪಾತ್ರ ಇದಾಗಿದೆಯಂತೆ.

ಚಿತ್ರದಲ್ಲಿ ಚೇತನ್ ಗೆ ನಾಯಕಿಯಾಗಿ ತಮಿಳು ನಟಿ ವರಲಕ್ಷ್ಮಿ ಶರತ್ ಕುಮಾರ್ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದಲ್ಲಿ ವರಲಕ್ಷ್ಮಿ ಕೂಡ ಖಡಕ್ ಲುಕ್ ನಲ್ಲಿ ಮಿಂಚಿದ್ದಾರೆ. ಈ ಹಿಂದೆ ಕಿಚ್ಚ ಸುದೀಪ್ ಜೊತೆ ‘ಮಾಣಿಕ್ಯ’ ಚಿತ್ರದಲ್ಲಿ ವರಲಕ್ಷ್ಮೀ ಕಾಣಿಸಿಕೊಂಡಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!