Shahjahanpur

ಉತ್ತರ ಪ್ರದೇಶದಲ್ಲಿ ಉದ್ರಿಕ್ತ ಗುಂಪಿನಿಂದ ಪೊಲೀಸರ ಮೇಲೆ ಹಲ್ಲೆ

ಶಹಜಹಾನ್ಪುರ್, ಅ 2- ಇಲ್ಲಿನ ನಿಗೋಹಿ ಪೊಲೀಸ್ ಠಾಣೆ ಮೇಲೆ ಉದ್ರಿಕ್ತ ಗುಂಪೊಂದು ಗುರುವಾರ ತಡರಾತ್ರಿ ನಡೆಸಿದ ದಾಳಿಯಲ್ಲಿ ನಾಲ್ವರು ಪೊಲೀಸರು ಗಾಯಗೊಂಡಿದ್ದು, ಎಸ್‌ಎಚ್‌ಒ ಅವರ ಅಧಿಕೃತ ಮೊಬೈಲ್ ಫೋನ್ ಕಸಿದುಕೊಳ್ಳಲಾಗಿದೆ.

ವಿದ್ಯುತ್ ಉಪಕೇಂದ್ರವೊಂದರಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಉದ್ರಿಕ್ತ ಗುಂಪನ್ನು ಸಮಾಧಾನಪಡಿಸಲು ಪೊಲೀಸರು ಯತ್ನಿಸುತ್ತಿದ್ದಾಗ ಮಧ್ಯರಾತ್ರಿಯ ನಂತರ ಈ ಘಟನೆ ನಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ದಾಳಿಯಲ್ಲಿ ಎಸ್‌ಎಚ್‌ಒ ಮತ್ತು ಮೂವರು ಕಾನ್‌ಸ್ಟೆಬಲ್‌ಗಳು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ದಾಳಿಯ ನಂತರ ಎಸ್‌ಎಚ್‌ಒನ ಅಧಿಕೃತ ಮೊಬೈಲ್ ಫೋನ್ ಉದ್ರಿಕ್ತ ಗುಂಪು ಕಸಿದು ಕೊಂಡು ಪರಾರಿಯಾಗಿದೆ.
ಇದಕ್ಕೂ ಅಲ್ಲಿ ಉದ್ರಿಕ್ತ ಗುಂಪು ಮೋಟಾರ್ ಸೈಕಲ್‌ಗೆ ಬೆಂಕಿ ಹಚ್ಚಿ ವಿದ್ಯುತ್ ಕೇಂದ್ರವನ್ನು ಧ್ವಂಸ ಮಾಡಿದ ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ವಿದ್ಯುತ್ ಉಪಕೇಂದ್ರಕ್ಕೆ ಧಾವಿಸಿದ್ದಾರೆ. ಪೊಲೀಸರು ವಿದ್ಯುತ್ ಕೇಂದ್ರದಲ್ಲಿ ಈ ಬಗ್ಗೆ ತನಿಖೆ ನಡೆಸುತ್ತಿದ್ದಂತೆ ಅತ್ತ, ಉದ್ರಿಕ್ತಗುಂಪು ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿದೆ.

ಲಾಠಿಗಳು ಮತ್ತು ಇತರ ಮಾರಕಾಯುಧಗಳನ್ನು ಹೊಂದಿದ್ದ ಉದ್ರಿಕ್ತಗುಂಪು ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಿ, ಧ್ವಂಸ ಮಾಡಿದೆ ಎಂದು ಘಟನೆಯಲ್ಲಿ ಗಾಯಗೊಂಡಿರುವ ಎಸ್‌ಎಚ್‌ಒ ಗೋವಿಂದ್ ಸಿಂಗ್ ಹೇಳಿದ್ದಾರೆ. ಪೊಲೀಸರು ಗುಂಪನ್ನು ತಡೆಯಲು ಯತ್ನಿಸಿದಾಗ ಥಳಿಸಲಾಗಿದೆ. ಬಳಿಕ ಎಸ್‌ಎಚ್‌ಒ ಅಧಿಕೃತ ಮೊಬೈಲ್ ಫೋನ್‌ ಕಸಿದ ಗುಂಪು ಪರಾರಿಯಾಗಿದೆ.

ನಂತರ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಂಜಯ್ ಕುಮಾರ್ ಹೆಚ್ಚುವರಿ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಧಾವಿಸಿದ್ದರು.

ಕುಮಾರ್ ಅವರು ವಿದ್ಯುತ್ ಕೇಂದ್ರದಲ್ಲಿ ಮತ್ತು ಪೊಲೀಸ್ ಠಾಣೆಯಲ್ಲಿ ಘಟನೆಯ ಸಂಪೂರ್ಣ ವಿಡಿಯೋ ಚಿತ್ರೀಕರಿಸಿದ್ದಾರೆ. ಅಪರಾಧದಲ್ಲಿ ಭಾಗಿಯಾಗಿರುವ ಜನರನ್ನು ಗುರುತಿಸಲಾಗುತ್ತಿದ್ದು, ಖಂಡಿತಾ ಅವರಿಗೆ ಶಿಕ್ಷೆಯಾಗುತ್ತದೆ ಎಂದು ಅವರು ಹೇಳಿದ್ದಾರೆ.

Leave a Reply

Your email address will not be published. Required fields are marked *

Back to top button
error: Content is protected !!