Vijayapur

ಆಸ್ಪತ್ರೆ ಶೌಚಾಲಯ ತೊಳೆದು ಗಾಂಧಿ ಜಯಂತಿ ಆಚರಿಸಿದ ಜಿಪಂ ಅಧ್ಯಕ್ಷೆ

ವಿಜಯಪುರ, ೨- ವಿಜಯಪುರ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಸುಜಾತಾ ಕಳ್ಳಿಮನಿ ಸವರು ಸರಕಾರಿ ಆಸ್ಪತ್ರೆಯ ಶೌಚಾಲಯ ಸ್ವಚ್ಛ ಮಾಡುವ ಮೂಲಕ ಮಹಾತ್ಮಾ ಗಾಂಧಿ ಜಯಂತಿಯನ್ನು ವಿಶಿಷ್ಟವಾಗಿ ಆಚರಿಸಿ ಮಾದರಿಯಾಗಿದ್ದಾರೆ.

ಮಹಾತ್ಮಾ ಗಾಂಧಿ ಜಯಂತಿ ಹಿನ್ನೆಲೆಯಲ್ಲಿ
ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಕಾಳಗಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗುರುವಾರ ರಾತ್ರಿ ವಾಸ್ತವ್ಯ ಹೂಡಿದ್ದ ಸುಜಾತಾ ಬೆಳಿಗ್ಗೆಯೆದ್ದು, ಪ್ಲಾಸ್ಟಿಕ್ ಹೊದಿಕೆ ಹೊದ್ದು, ಕಸಪೊರಕೆ ತೆಗೆದುಕೊಂಡು ಶೌಚಾಲಯ ಕ್ಲೀನ್ ಮಾಡಿದರು.

ಅಧ್ಯಕ್ಷರ ಈ ಕಾರ್ಯ ಪ್ರಶಂಸೆಗೆ ಕಾರಣವಾಗಿದೆ. ಉಳಿದ ಜನಪ್ರತಿನಿಧಿಗಳೂ ಇಂತಹ ಕಾರ್ಯಕೈಗೊಳ್ಳಬೇಕೆಂದು ವಿಜಯಪುರ ಜಿಲ್ಲಾ ಪಂಚಾಯತ್ ಸದಸ್ಯರಾದ ಪ್ರೇಮಾಬಾಯಿ ಚವ್ಹಾಣ, ಪದ್ಮಾವತಿ ವಾಲೀಕಾರ ಹೇಳಿದರು.

Leave a Reply

Your email address will not be published. Required fields are marked *

Back to top button
error: Content is protected !!