Belagavi

ಉತ್ತರ ಪ್ರದೇಶದಲ್ಲಿ ಜಂಗಲ್ ರಾಜ್; ಮುಖ್ಯಮಂತ್ರಿ ಯೋಗಿ ಒಬ್ಬ ರೋಗಿ – ಸಿದ್ದರಾಮಯ್ಯ ಟೀಕೆ

ಬೆಳಗಾವಿ : ಉತ್ತರ ಪ್ರದೇಶದಲ್ಲಿರುವದು ಬಿಜೆಪಿಯ ಜಂಗಲ್ ರಾಜ್ ಆಡಳಿತ, ಅಲ್ಲಿ ಈ ದೇಶದ ಕಾನೂನು ಅನ್ವಯಿಸದು, ಅಲ್ಪಸಂಖ್ಯಾತರು ಮಹಿಳೆಯರು ಅಲ್ಲಿ ಸುರಕ್ಷಿತವಾಗಿಲ್ಲ, ಹೀಗೆಂದು ಅಭಿಪ್ರಾಯಪಟ್ಟರು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ.

ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ನಡೆದ ಯುವತಿಯ ಅತ್ಯಾಚಾರ, ಹತ್ಯೆಗೆ ಸಂಬಂಧಿಸಿದಂತೆ
ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ರಾಜ್ಯವಾಳಲು ಅಸಮರ್ಥರಾಗಿದ್ದಾರೆ, ಅಪರಾಧಗಳ ಸಂಖ್ಯೆ ಮಿತಿಮೀರಿದೆ, ಮಹಿಳೆಯರು, ಅಲ್ಪಸಂಖ್ಯಾತರು ಸುರಕ್ಷಿತರಾಗಿಲ್ಲ, ಯೋಗಿ ಕಾನೂನು ಸುವ್ಯವಸ್ಥೆ ಹಾಳು ಮಾಡಿದ್ದಾರೆ.

ಉತ್ತರಪ್ರದೇಶದಲ್ಲಿನ ಜಂಗಲ್ ರಾಜ್ ದಲ್ಲಿ ಕಾನೂನು ಇಲ್ಲ, ಪೊಲೀಸರು ಸರ್ವಾಧಿಕಾರಿ ರೀತಿಯಲ್ಲಿ ವರ್ತನೆ ಮಾಡ್ತಿದ್ದಾರೆ. ಸಂತ್ರಸ್ತೆ ಹೆಣ್ಣು ಮಗಳ ಮನೆಗೆ ಹೋಗಿ ಸಾಂತ್ವನ ಹೇಳಲು ಹೋಗುತ್ತಿದ್ದ ರಾಹುಲ್ ಗಾಂಧಿಯವರನ್ನು ತಡೆದು ದಬ್ಬಾಳಿಕೆ ಮಾಡಿದ್ದಾರೆ. ನಾಗರಿಕ ಹಕ್ಕು ಅಲ್ಲಿ ಹರಣವಾಗಿದೆಯೆಂದು ಸಿದ್ದರಾಮಯ್ಯ ಹೇಳಿದರು.

ಈ ದೇಶ ಬಿಜೆಪಿ ಆಸ್ತಿ ಅಲ್ಲ, ಯೋಗಿ ಆದಿತ್ಯನಾತ್ ಆಸ್ತಿಯೂ ಅಲ್ಲ ಎಂದು ಯೋಗಿ, ಬಿಜೆಪಿಯ ವಿರುದ್ಧ ಕಿಡಿ ಕಾರಿದರು.

ಬಿಜೆಪಿಗೆ ನೈತಿಕತೆಯಿದ್ದರೆ ಕೂಡಲೇ
ಯೋಗಿ ಆದಿತ್ಯನಾತ್ ರಾಜೀನಾಮೆ ಪಡೆಯಲಿ, ಯಾಕಂದರೆ ಆತ “ಯೋಗಿಯಲ್ಲ ರೋಗಿ” ಎಂದು ಸಿದ್ರಾಮಯ್ಯ ಲೇವಡಿ ಮಾಡಿದ್ರು

ಕರ್ನಾಟಕದಲ್ಲಿ ನೆರೆ ಸಂತ್ರಸ್ತರಿಗೆ ಮನೆ ಕಟ್ಟಿಕೊಟ್ಟಿಲ್ಲ, ಪರಿಹಾರವನ್ನೂ ಕೊಟ್ಟಿಲ್ಲ. ಈ ಸಾರಿ ಪ್ರವಾಹ ಬಂದಾಗ ಒಂದೇ ಒಂದು ಪೈಸೆ ಖರ್ಚು ಮಾಡಿಲ್ಲ. ಮೆಡಿಕಲ್ ಸಾಮಾಗ್ರಿಗಳ ಹಗರಣ ಆಗಿದೆ ಅಂದಾಗ ಒಪ್ಪಲಿಲ್ಲ. ನಾಲ್ಕು ಸಾವಿರ ಕೋಟಿಯಲ್ಲಿ ಎರಡು ಸಾವಿರ ಕೋಟಿ ಲಂಚ ಹೊಡೆದಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪ ಚೆಕ್ ಮೂಲಕ ತೆಗೆದುಕೊಂಡ್ರೇ ಮೊಮ್ಮಗ ಆರ್‌ಟಿಜಿಎಸ್ ಮೂಲಕ ಪಡೆಯುತ್ತಿದ್ದಾರೆ. ಎಂದು ಸಿದ್ರಾಮಯ್ಯ ಆರೋಪಿಸಿದರು.

ಸಿದ್ದರಾಮಯ್ಯ ಬ್ರಿಟಿಷರಗಿಂತ ಕೆಟ್ಟದಾಗಿ ಆಡಳಿತ ನಡೆಸಿದ್ದರು ಎಂಬ ನಳಿನ್ ಕುಮಾರ್ ಕಟೀಲ್ ಹೇಳಿಕೆ‌ಗೆ ಪ್ರತಿಕ್ರಿಯಿಸಿದ ಸಿದ್ರಾಮಯ್ಯ ಕಟೀಲ್ ಯಕಶ್ಚಿತ್ ರಾಜಕಾರಣಿ, ತಮ್ಮ ಆಡಳಿತದಲ್ಲಿ ಒಂದೇ ಒಂದು ಚೆಕ್ ಬೌನ್ಸ್ ಆಗಿಲ್ಲ ಆದರೆ ಇವರ ಕಾಲದಲ್ಲಿ ನೌಕರರಿಗೆ ಸಂಬಳ ಕೊಡಲೂ ದುಡಿಲ್ಲ ಎಂದು ಆರೋಪಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!