Bengaluru

ಗಾಂಧಿ ಜಯಂತಿ : ರಮೇಶ ಅರವಿಂದ, ಪ್ರಕಾಶ ರಾಜ್ ಹೇಳಿದ್ದೇನು?

ಬೆಂಗಳೂರು, ಅ 02- ದೇಶಾದ್ಯಂತ ಗಾಂಧಿ ಜಯಂತಿ ಆಚರಿಸಲಾಗುತ್ತಿದ್ದು, ಸಿನಿರಂಗದ ನಟ, ನಟಿಯರು ಟ್ವಿಟರ್ ಮೂಲಕ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.

ನಟ ರಮೇಶ್ ಅರವಿಂದ್, “ಹೆಚ್ಚಿನ ಪುರುಷರು ಮೃಗಗಳಾಗುವುದರಲ್ಲಿ ನಿರತರಾಗಿರುವಾಗ ಒಬ್ಬ ಮನುಷ್ಯ ಮಹಾತ್ಮನಾದನು” ಎಂದು ಟ್ವೀಟ್ ಮಾಡಿದ್ದಾರೆ.

ಯಾರು ಮೃಗೀಯ ವರ್ತನೆಯನ್ನು ಬಾಹ್ಯವಾಗಿ ಹಾಗೂ ಆಂತರಿಕವಾಗಿ ತೊರೆದಿರುತ್ತಾರೆಯೋ ಅವರು ಮಾತ್ರ ಮಹಾತ್ಮ ಎನಿಸಿಕೊಳ್ಳಲು ಸಾಧ್ಯ ಎಂಬ ಅನಿಸಿಕೆಯನ್ನು ಅವರು ವ್ಯಕ್ತಪಡಿಸಿದ್ದಾರೆ.

ನಟ ಪ್ರಕಾಶ್ ರಾಜ್‍, “ಗಾಂಧಿ ಜಯಂತಿಯ ಈ ದಿನ ನಾವು ಮಕ್ಕಳಿಗೆ ಏನು ಹೇಳಬೇಕು ? ಗಾಂಧಿ ಹುಟ್ಟಿದ ನಾಡಲ್ಲಿ ಜನಿಸಿದ್ದಕ್ಕೆ ಹೆಮ್ಮೆ ಎನ್ನಬೇಕೋ ಅಥವಾ ಗೋಡ್ಸೆ ಜನಿಸಿದ ನಾಡಲ್ಲಿರುವುದಕ್ಕೆ.. . ಹಾಗೇ ಸುಮ್ಮನೆ ಕೇಳುತ್ತಿರುವೆ” ಎಂದು ಟ್ವೀಟ್ ಮಾಡಿದ್ದಾರೆ

Related Articles

Leave a Reply

Your email address will not be published. Required fields are marked *

Back to top button
error: Content is protected !!