Bengaluru

ಹಲವು ಸಚಿವರು ಗೈರು; ಒಂದೇ ತಾಸಲ್ಲಿ ಮುಗಿದ ಸಂಪುಟ ಸಭೆ

ಬೆಂಗಳೂರು,ಅ 01- ಇಂದು ನಡೆದ ಸಂಪುಟ ಸಭೆಗೆ ಹಲವು ಸಚಿವರು ಗೈರಾಗಿದ್ದಾರೆ.ಕೆಲವರು ಕೋವಿಡ್ ನಿಂದಾಗಿ ಗೈರಾಗಿದ್ದರೆ,ಇನ್ನು ಕೆಲವರು ಕೋವಿಡ್ ಇಲ್ಲದಿದ್ರೂ ಸಂಪುಟ ಸಭೆಗೆ ಗೈರಾಗುವ ಮೂಲಕ ಅಶ್ಚರ್ಯ ಮತ್ತು ಗೊಂದಲಗಳಿಗೆ ಕಾರಣವಾಗಿದ್ದಾರೆ.

ಡಿಸಿಎಂ ಗೋವಿಂದ ಕಾರಜೋಳ, ಸಚಿವರಾದ ಜೆ.ಸಿ ಮಾಧುಸ್ವಾಮಿ, ಶಶಿಕಲಾ ಜೊಲ್ಲೆ,ಪ್ರಭು ಚೌಹಾಣ್ ಕೋ ವಿಡ್ ನಿಂದಾಗಿ ಸಂಪುಟ‌ ಸಭೆಗೆ ಗೈರಾದರು.ಆದರೆ ಡಿಸಿಎಂ ಲಕ್ಷ್ಮಣ ಸವದಿ,ಸಚಿವರಾದ ಬಸವರಾಜ ಬೊಮ್ಮಾ ಯಿ,ಕೆ.ಎಸ್.ಈಶ್ವರಪ್ಪ,ಆನಂದ್ ಸಿಂಗ್,ಆರ್.ಅಶೋಕ್,ಶ್ರೀಮಂತ ಪಾಟೀಲ್,ಕೆ.ಗೋಪಾಲಯ್ಯ ಕೋವಿಡ್ ಇಲ್ಲದಿದ್ದರೂ ಸಂಪುಟ ಸಭೆಗೆ ಗೈರಾಗಿದ್ದರು.

ಹಲವರ ಸಚಿವರ ಅನುಪಸ್ಥಿತಿಯಲ್ಲಿ ನಡೆದ ಸಂಪುಟ ಸಭೆ ಕೇವಲ ಒಂದು ತಾಸುಗಳ ಕಾಲ‌ ನಡೆಯಿತು.ಸಂಪು ಟದ ಮುಂದೆ ಚರ್ಚೆಗೆ ಹೆಚ್ಚಿನ ಏಜೆಂಡಾಗಳು ಇದ್ದಿಲ್ಲ.ಸಂಪುಟ ಸಭೆಯಲ್ಲಿ ವಿಧೇಯಕಗಳ ಸಂಬಂಧ ಸುಗ್ರೀ ವಾಜ್ಞೆ ಹೊರಡಿಸುವ ಸಂಬಂಧ ಪ್ರಮುಖ ತೀರ್ಮಾನ‌ ಕೈಗೊಳ್ಳಲಾಯಿತು.

ಕಾನೂನು ಮತ್ತು ಸಂಸದೀಯ ಸಚಿವರು,ಗೃಹ ಸಚಿವರು,ಕಂದಾಯ ಸಚಿವರ ಗೈರು ಹಾಜರಿಯಲ್ಲಿ ಸುಗ್ರೀವಾ ಜ್ಞೆ ಜಾರಿಗೊಳಿಸುವ ತೀರ್ಮಾನ ಕೈಗೊಳ್ಳಲಾಗಿದೆ.ಭೂಕಂದಾಯ ತಿದ್ದಪಡಿ ವಿಧೇಯಕ, ಎಪಿಎಂಸಿ ತಿದ್ದುಪಡಿ ಕಾಯ್ದೆ,ಕೈಗಾರಿಕ ತಿದ್ದುಪಡಿ ವಿಧೇಯಕಕ್ಕೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.ಈ ಮೂ ರು ವಿಧೇಯಕಗಳಲ್ಲಿ ಕಾರ್ಮಿಕರ ಹೆಚ್ಚಿನ ಅವಧಿ ದುಡಿಯುವ ಕೈಗಾರಿಕಾ ವಿವಾದಗಳು ಮತ್ತು ಇತರೆ ತಿದ್ದು ಪಡಿ ವಿಧೇಯಕ ವಿಧಾನ ಪರಿಷತ್ ನಲ್ಲಿ ಅನುಮೋದನೆ ಪಡೆಯುವಲ್ಲಿ ವಿಫಲವಾಗಿದೆ.ಅಂತೆಯೇ ಕರ್ನಾಟಕ ಭೂ ಸುಧಾರಣಾ ತಿದ್ದುಪಡಿ ವಿಧೇಯಕ ಚೆರ್ಚೆಯಾದರೂ ಅನುಮೋದನೆಯಾಗಲಿದೆ.ಅಂತೆಯೇ ಎಪಿಎಂಸಿ ಕಾಯ್ದೆಯೂ ಸದನದಲ್ಲಿ ಮಂಡನೆಯಾದರೂ ಚೆರ್ಚೆ ಆಗಲಿಲ್ಲ ಅನುಮೋದನೆಯೂ ಆಗದೆ ಕಲಾಪ ಅನಿರ್ದಿ ಷ್ಟಾವಧಿ ಮುಂದೂಡಿಕೆ ಹಿನ್ನಲೆಯಲ್ಲಿ ಸುಗ್ರೀವಾಜ್ಞೆಗೆ ತರಬೇಕಾದ ಅನಿವಾರ್ಯತೆಯಲ್ಲಿ ಸಂಪುಟದಲ್ಲಿ ಒಪ್ಪಿಗೆ ಪಡೆದು ರಾಜ್ಯಪಾಲರಿಗೆ ರವಾನಿಸಲಾಗಿದೆ

Related Articles

Leave a Reply

Your email address will not be published. Required fields are marked *

Back to top button
error: Content is protected !!