New Delhi

ಶೇ. 4 ರಷ್ಟು ಜಿ.ಎಸ್.ಟಿ ಪ್ರಗತಿ: 95,480 ಕೋಟಿ ಸಂಗ್ರಹ

ನವದೆಹಲಿ, ಅ 1 –  ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಿಗೆ ಹೋಲಿಸಿದರೆ ಹಿಂದಿನ ತಿಂಗಳಲ್ಲಿ ಶೇಕಡ ೪ ರಷ್ಟು ಹೆಚ್ಚು ಜಿ.ಎಸ್.ಟಿ. ಆರ್ಥಿಕ ಸಂಪನ್ಮೂಲ ಬೊಕ್ಕಸಕ್ಕೆ ಹರಿದುಬಂದಿದೆ.

ಸೆಪ್ಟೆಂಬರ್ ನಲ್ಲಿ ದೇಶದಲ್ಲಿ ೯೫,೪೮೦ ಕೋಟಿ ರೂಪಾಯಿ ಸರಕು ಮತ್ತು ಸೇವಾ ತೆರಿಗೆ- ಜಿಎಸ್‌ಟಿ ಸಂಗ್ರಹವಾಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಸಂಗ್ರಹವಾದ ಅಧಿಕ ತೆರಿಗೆ ಮೊತ್ತ ಇದಾಗಿರುವುದು ವಿಶೇಷವಾಗಿದೆ.

ಈ ಕುರಿತು ಹಣಕಾಸು ಸಚಿವಾಲಯ ಹೇಳಿಕೆ ಬಿಡುಗಡೆ ಮಾಡಿದ್ದು, ಕೇಂದ್ರ ಜಿಎಸ್‌ಟಿ ವಲಯದಲ್ಲಿ ೩೯ ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಮತ್ತು ರಾಜ್ಯ ಜಿಎಸ್‌ಟಿ ವಲಯದಲ್ಲಿ ೪೦, ೧೨೮ ಕೋಟಿ ರೂಪಾಯಿ ಸಂಗ್ರಹಗೊಂಡಿದೆ.

ತೆರಿಗೆ ವರ್ಗೀಕರಣದಲ್ಲಿ ಕೇಂದ್ರ ಜಿಎಸ್‌ಟಿ ಪಾಲು ೧೭,೭೪೧ ಕೋಟಿ ರೂಪಾಯಿ, ರಾಜ್ಯ ಜಿಎಸ್‌ಟಿ ೨೩, ೧೩೧ ಕೋಟಿ ರೂಪಾಯಿ, ಸಮಗ್ರ ಜಿಎಸ್‌ಟಿ ವಲಯದಲ್ಲಿ ೪೭,೪೮೪ ಕೋಟಿ ಹಾಗೂ ಸೆಸ್ ಮೂಲಕ ೭,೧೨೪ ಕೋಟಿ ರೂಪಾಯಿ ಹರಿದು ಬಂದಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!