Bengaluru

ರಾಜ್ಯದಲ್ಲಿ ಮುಂದುವರಿದ ಕೋವಿಡ್‌ ಪ್ರಕರಣಗಳ ಏರಿಕೆ; 1.10 ಲಕ್ಷ ತಲುಪಿದ ಸಕ್ರಿಯ ಪ್ರಕರಣಗಳು

 

ಬೆಂಗಳೂರು, ಅ 1- ರಾಜ್ಯದಲ್ಲಿ ಕೋವಿಡ್‌ ಪ್ರಕರಣಗಳ ದಾಖಲೆಯ ಏರಿಕೆ ಮುಂದುವರಿದಿದೆ. ಕಳೆದ 24 ಗಂಟೆಗಳಲ್ಲಿ ಕೂಡ ರಾಜ್ಯದಲ್ಲಿ 10 ಸಾವಿರ ಪ್ರಕರಣಗಳು ವರದಿಯಾಗಿವೆ.

ಇದು ರಾಜ್ಯದ ಜನತೆಯನ್ನು ಆತಂಕಕ್ಕೆ ದೂಡಿದೆ. ಗುರುವಾರ ರಾಜ್ಯದಲ್ಲಿ 10070 ಪ್ರಕರಣಗಳು ವರದಿಯಾಗಿದ್ದು, 130 ಮಂದಿ ಮೃತಪಟ್ಟಿದ್ದಾರೆ. ಇದರಿಂದ ಒಟ್ಟು ಸೋಂಕಿತರ ಸಂಖ್ಯೆ 6.11 ಲಕ್ಷಕ್ಕೇರಿಕೆಯಾಗಿದೆ.

ಈ ನಡುವೆ ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 7144 ಮಂದಿ ಗುಣಮುಖರಾಗಿದ್ದಾರೆ. ಇದರಿಂದ ಒಟ್ಟು ಸೋಂಕಿತರ ಸಂಖ್ಯೆ 4.92 ಲಕ್ಷ ಚೇತರಿಸಿಕೊಂಡಿದ್ದಾರೆ.

ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಕೂಡ 1.10 ಲಕ್ಷಕ್ಕೇರಿಕೆಯಾಗಿದೆ. ಇದು ಇಲ್ಲಿಯವರೆಗೆ ದಾಖಲಾಗಿರುವ ಅತಿ ಹೆಚ್ಚು ಸಕ್ರಿಯ ಪ್ರಕರಣಗಳು ವರದಿಯಾಗಿವೆ.

ಜೊತೆಗೆ, ಇಲ್ಲಿಯವರೆಗೆ ಸೋಂಕಿಗೆ ಬಲಿಯಾದವರ ಸಂಖ್ಯೆ 9000 ದಾಟಿದೆ. ಒಟ್ಟು 9013 ಮಂದಿ ಮೃತಪಟ್ಟಿದ್ದಾರೆ. ಸಕ್ರಿಯ ಪ್ರಕರಣಗಳ ಪೈಕಿ 811 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಂಗಳೂರು ನಗರದಲ್ಲಿ 4853 ಪ್ರಕರಣಗಳು ವರದಿಯಾಗಿದ್ದು, 41 ಮಂದಿ ಮೃತಪಟ್ಟಿದ್ದಾರೆ. ಇದರಿಂದ ಒಟ್ಟು ಸೋಂಕಿತರ ಸಂಖ್ಯೆ 2.37 ಲಕ್ಷ ತಲುಪಿದೆ.

ಬಾಗಲಕೋಟೆಯಲ್ಲಿ 336, ಬಳ್ಳಾರಿಯಲ್ಲಿ 486, ಬೆಳಗಾವಿಯಲ್ಲಿ 115, ಬೆಂಗಳೂರು ಗ್ರಾಮಾಂತರದಲ್ಲಿ 169, ಚಾಮರಾಜನಗರದಲ್ಲಿ 116, ಚಿಕ್ಕಮಗಳೂರಿನಲ್ಲಿ 184, ದಕ್ಷಿಣ ಕನ್ನಡದಲ್ಲಿ 493, ದಾವಣಗೆರೆಯಲ್ಲಿ 148, ಧಾರವಾಡದಲ್ಲಿ 153, ಗದಗದಲ್ಲಿ 146, ಹಾಸನದಲ್ಲಿ 383, ಹಾವೇರಿಯಲ್ಲಿ 155, ಕಲಬುರಗಿಯಲ್ಲಿ 219, ಕೊಪ್ಪಳದಲ್ಲಿ 103, ಮಂಡ್ಯದಲ್ಲಿ 266, ಮೈಸೂರಿನಲ್ಲಿ 101, ಶಿವಮೊಗ್ಗದಲ್ಲಿ 138, ತುಮಕೂರಿನಲ್ಲಿ 274, ಉಡುಪಿಯಲ್ಲಿ 275, ವಿಜಯಪುರದಲ್ಲಿ 257, ಯಾದಗಿರಿಯಲ್ಲಿ 159 ಪ್ರಕರಣಗಳು ವರದಿಯಾಗಿವೆ.

ಬೀದರ್‌ನಲ್ಲಿ 64, ಚಿಕ್ಕಬಳ್ಳಾಪುರದಲ್ಲಿ 44, ಚಿತ್ರದುರ್ಗದಲ್ಲಿ 82, ಕೊಡಗಿನಲ್ಲಿ 58, ಕೋಲಾರದಲ್ಲಿ 53, ರಾಯಚೂರಿನಲ್ಲಿ 79, ರಾಮನಗರದಲ್ಲಿ 74, ಉತ್ತರಕನ್ನಡದಲ್ಲಿ 87 ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!