Belagavi

ಆರ್ಥಿಕ ಸಮಸ್ಯೆ, ಮತ್ತೊಬ್ಬ ನೇಕಾರ ನೇಣಿಗೆ ಶರಣು

 

ಬೆಳಗಾವಿ : ನೇಯ್ದ ಉಡುಪಿಗೆ ಮಾರುಕಟ್ಟೆಯಿಲ್ಲ, ನೇಕಾರಿಕೆ ಮುಂದುವರೆಸಲು ಹೊಸ ಆರ್ಡರ್ ಗಳೂ ಇಲ್ಲ, ಹಾಗಾಗಿ ತೀವ್ರ ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದ ಬೆಳಗಾವಿ ವಡಗಾವಿ ದೇವಾಂಗ ನಗರದ ನೇಕಾರರೊಬ್ಬರು ಗುರುವಾರ ಮುಂಜಾನೆ ತಮ್ಮಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ದೇವಾಂಗ ನಗರದ 3 ನೇ ಕ್ರಾಸ್‍ನಲ್ಲಿ ವಾಸವಾಗಿದ್ದ 35 ವರ್ಷದ ಸಂತೋಷ್ ಶಂಕರ್ ಢಗೆ ಮಗ್ಗದ ಬಳಿಯೇ ಗುರುವಾರ ಬೆಳಗ್ಗೆ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಕೊರೋನಾ ಸೋಂಕು ತಡೆ ಲಾಕ್‍ಡೌನ್‍ನಿಂದ ಹಿಡಿದು ಇಲ್ಲಿಯವರೆಗೆ ನೇಕಾರಿಕೆ ಬಂದ್ ಆಗಿ ನೇಕಾರರು ತೀವ್ರ ಪರದಾಡುತ್ತಿದ್ದಾರೆ. ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ನೇಕಾರರು ಜೀವನೋಪಾಯಕ್ಕೆ ಬೇರೆ ಮಾರ್ಗ ಕಾಣದೇ ತೀವ್ರ ಪರದಾಡುತ್ತಿದ್ದಾರೆ. ನೇಕಾರಿಕೆ ನೆಲಕಚ್ಚಿ ತೀವ್ರ ಆರ್ಥಿಕ ತೊಂದರೆಯಿಂದ ಕಂಗೆಟ್ಟಿದ್ದ ಸಂತೋಷ್ ಡಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ನೇಕಾರ ಸಮಾಜ ಹೇಳಿದೆ.

ನೇಕಾರಿಕೆ ನೆಲಕಚ್ಚಿದ್ದರಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ 14 ನೇಕಾರರು ರಾಜ್ಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸರಕಾರಗಳು ನೇಕಾರರ ಆರ್ಥಿಕ ಪುನಸ್ಚೇತನಕ್ಕೆ ಕೂಡಲೇ ಮುಂದಾಗದಿದ್ದರೆ ಸಮಸ್ಯೆ ವಿಷಮ ಸ್ಥಿತಿಗೆ ತಿರುಗಲಿದೆ. ರಾಜ್ಯ ಸರಕಾರ ಆತ್ಮಹತ್ಯೆ ಮಾಡಿಕೊಂಡಿರುವ ನೇಕಾರ ನೆರವಿಗೆ ಬರಬೇಕು. ಕುಟುಂಬಗಳಿಗೆ ಕನಿಷ್ಠ 10 ಲಕ್ಷ ರೂಪಾಯಿ ಪರಿಹಾರ ಕೊಡಬೇಕು ಎಂದು ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘ ಮನವಿ ಮಾಡಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!