Chandigarh

ಕೃಷಿ ವಿಧೇಯಕಗಳನ್ನು ಹಿಂಪಡೆಯುವರೆಗೂ ಹೋರಾಟ

 

ಚಂಡಿಗಢ, ಅ 1- ದೇಶದ ಕೃಷಿ ವಲಯ ಸುಧಾರಣೆ ಉದ್ದೇಶದ ಹೊಸ ಕಾಯ್ದೆಗಳನ್ನು ಕೇಂದ್ರ ಸರ್ಕಾರ ವಾಪಸ್ಸು ಪಡೆದು ಕೊಳ್ಳುವವರೆಗೆ ತಮ್ಮ ಪಕ್ಷ ಇಂದಿನಿಂದ ಸುದೀರ್ಘ ಹೋರಾಟ ನಡೆಸಲಿದೆ ಎಂದು ಶಿರೋಮಣಿ ಅಕಾಲಿ ದಳ ನಾಯಕಿ ಹರ್ ಸಿಮ್ರತ್ ಕೌರ್ ಬಾದಲ್ ಗುರುವಾರ ಪ್ರಕಟಿಸಿದ್ದಾರೆ.

ರೈತರ ಕುತ್ತಿಗೆ ಹಿಚುಕುವಂತಹ ಕಾಯ್ದೆಗಳನ್ನು ತಂದಿರುವುದಕ್ಕಾಗಿ ಕೇಂದ್ರ ಸರ್ಕಾರವನ್ನು, ಸಚಿವ ಸ್ಥಾನವನ್ನೂ, ಮೈತ್ರಿಕೂಟವನ್ನೂ, ಕೊನೆಗೆ ಬಂಧುತ್ವವನ್ನೂ ಕಡಿದುಕೊಂಡಿದ್ದೇನೆ ಎಂದು ಅವರು ಹೇಳಿದರು.

ಸರ್ಕಾರ ತಂದಿರುವ ಈ ಕರಾಳ ಕಾಯ್ದೆಗಳಿಂದಾಗಿ ಎಲ್ಲವನ್ನೂ ಕಳೆದುಕೊಂಡಿರುವುದಾಗಿ ಹೇಳಿದರು. ರಾಜಭವನ ಬಳಿ ಅಕಾಲಿ ದಳ ಆಯೋಜಿಸಿದ್ದ ರೈತರ ಪ್ರತಿಭಟನಾ ಮೆರವಣಿಗೆಯ ನೇತೃತ್ವವನ್ನು ಅವರು ವಹಿಸಿದ್ದರು.

ಇದಕ್ಕೂ ಮೊದಲು ಬಟಿಂಡಾ ತಲ್ವಂಡಿ ಸಾಬ್ ನಲ್ಲಿರುವ ತಖ್ತ್ ಶ್ರೀ ದಮ್ದಾಮಾ ಸಾಹಿಬ್ ಗೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಕೃಷಿ ವಿಧೇಯಕಗಳನ್ನು ವಿರೋಧಿಸಿ ಕೇಂದ್ರ ಸಚಿವ ಸ್ಥಾನಕ್ಕೆ ಹರ್ ಸಿಮ್ರತ್ ಕೌರ್ ಬಾದಲ್ ರಾಜೀನಾಮೆ ನೀಡಿದ್ದು, ಕೇಂದ್ರ ಸರ್ಕಾರದ ಎನ್ ಡಿ ಎ ಮೈತ್ರಿ ಕೂಟದಿಂದಲೂ ಶಿರೋಮಣಿ ಅಕಾಲಿದಳ ಹೊರಬಂದಿದೆ.

Leave a Reply

Your email address will not be published. Required fields are marked *

Back to top button
error: Content is protected !!