Belagavi

ಕುಡಿದ ಮತ್ತಿನಲ್ಲೇ ಗೋವಾದಿಂದ ಬೆಳಗಾವಿಗೆ ಬಸ್ ಓಡಿಸಿದ ಗೋವಾ ಡ್ರೈವರ್

 

ಬೆಳಗಾವಿ : ಕುಡಿದ ಮತ್ತಿನಲ್ಲಿ ಗೋವಾದ ರಾಜಧಾನಿ ಪಣಜಿಯಿಂದ ಗೋವಾ ಸಾರಿಗೆ “ಕದಂಬ ಬಸ್” ನ್ನು ಬೆಳಗಾವಿಯವರೆಗೂ ಚಲಾಯಿಸಿದ ಚಾಲಕನನ್ನು ಬೆಳಗಾವಿ ತಲುಪುತ್ತಲೇ ಪ್ರಯಾಣಿಕರು ಹಿಗ್ಗಾಮುಗ್ಗಾ ಥಳಿಸಿರುವ ಪ್ರಕರಣ ಇಂದು ಗುರುವಾರ ನಡೆದಿದೆ.

ಡ್ರೈವರ್ ಗೋವಾದಲ್ಲಿ ಬಸ್ ಹತ್ತಿದಾಗಲೇ ಟೈಟ್ ಆಗಿದ್ದ, ಇದು ಪ್ರಯಾಣಿಕರ ಗಮನಕ್ಕೆ ಬಂದಿರಲಿಲ್ಲ, ಆದರೆ ಯಾವಾಗ ರಸ್ತೆಯಲ್ಲಿ ಅಡ್ಡಾದಿಡ್ಡಿ ಬಸ್ ಚಲಿಸಲು ಪ್ರಾರಂಭಿಸಿತೋ ಆಗಲೇ ವಿಷಯ ಗೊತ್ತಾದದ್ದು. ಅನೇಕ ಪ್ರಯಾಣಿಕರು ಬಸ್ ನಿಲ್ಲಿಸಲು ಆದೇಶಿಸಿದರು ಕೇಳುವ ಸ್ಥಿತಿಯಲ್ಲಿ ಆತನಿರಲಿಲ್ಲ.ಕಂಡಕ್ಟರ್ ಕೂಡ ಅಸಹಾಯಕನಿಗಿದ್ದ, ಪಣಜಿಯ ಕಚೇರಿಗೆ ಮಾಹಿತಿ ಕೊಡಬೇಕೆನ್ನುವ ಅವರ ಪ್ರಯತ್ನ ನಡೆಯಲಿಲ್ಲ.

ಈ ವೇಳೆ ಪ್ರಯಾಣಿಕರು ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಕುಳಿತಿದ್ದಾರೆ. ಬೆಳಗಾವಿ ಕೇಂದ್ರ ಬಸ್ ನಿಲ್ದಾಣಕ್ಕೆ ಬಸ್ ಬರುತ್ತಿದ್ದಂತೆ ನಿಟ್ಟುಸಿರಿಟ್ಟ ಪ್ರಯಾಣಿಕರು ಚಾಲಕನನ್ನು ಥಳಿಸಿದ್ದಾರೆ.

ಚಿಕ್ಕಮಕ್ಕಳು, ವೃದ್ಧರು ಸೇರಿ 51ಕ್ಕೂ ಹೆಚ್ಚು ಪ್ರಯಾಣಿಕರು ಬಸ್‍ನಲ್ಲಿ ಪ್ರಯಾಣಿಸುತ್ತಿದ್ದರು. ಕಂಠಪೂರ್ತಿ ಕುಡಿದು ಬಸ್ ಚಲಾಯಿಸಿದ ಚಾಲಕನಿಗೆ ಸರಿಯಾಗಿ ನಿಲ್ಲಲು ಕೂಡ ಆಗುತ್ತಿರಲಿಲ್ಲ. ಅಂತಹದರದಲ್ಲಿ ಬಸ್‍ನ್ನು ಪಣಜಿಯಿಂದ ಬೆಳಗಾವಿವರೆಗೂ ತಂದಿದ್ದಾನೆ. ಈ ಮಾರ್ಗ ಮಧ್ಯೆ ಏನಾದ್ರು ಅನಾಹುತ ಸಂಭವಿಸಿದ್ದರೆ ಯಾರು ಹೊಣೆ ಎಂದು ಪ್ರಯಾಣಿಕರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಬೆಳಗಾವಿಯ ವಕೀಲ ಓರ್ವರಿಗೆ ಪಣಜಿಯಿಂದ ಬಂದಿದ್ದ ಪಾರ್ಸಲ್ ಕೊಡುವುದಿಲ್ಲ ಎಂದು ಈ ಕುಡುಕ ಡ್ರೈವರ್ ಕಿರಿಕ್ ಮಾಡಿದ್ದಾನೆ. ಈ ವೇಳೆ ಆಕ್ರೋಷಗೊಂಡ ನ್ಯಾಯವಾದಿ ಕೂಡ ಡ್ರೈವರ್ನನ್ನು ಥಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!