Belagavi

ಬೆಳಗಾವಿ ಲೋಕಸಭಾ ಉಪಚುನಾವಣೆಗೆ ಸ್ಪಧಿ೯ಲು ಕಾಂಗ್ರೆಸ್ ಇನ್ನೂ ಸಿದ್ಧತೆ ನಡೆಸಿಲ್ಲ

 

ಬೆಳಗಾವಿ : ಬೆಳಗಾವಿ ಬಿಜೆಪಿ ಸಂಸದ, ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ನಿಧನದಿಂದ ತೆರವಾಗಿರುವ ಕ್ಷೇತ್ರಕ್ಕೆ ಪಕ್ಷದಿಂದ ಸ್ಪರ್ಧಿಸಲು ಯಾರೂ ಆಸಕ್ತಿ ತೋರಿಸಿಲ್ಲವೆಂದು ಶಾಸಕ ಸತೀಶ ಜಾರಕಿಹೊಳಿ ಹೇಳಿದ್ದಾರೆ.

ಪತ್ರಕರ್ತರೊಂದಿಗೆ ಗುರುವಾರ ಮಾತನಾಡಿದ ಅವರು, ಬೆಳಗಾವಿ ಉಪಚುನಾವಣೆ ಕುರಿತು ಪಕ್ಷದಲ್ಲಿ ಇನ್ನೂ ಚರ್ಚೆಯೇ ಆಗಿಲ್ಲ, ಅದಕ್ಕಿನ್ನೂ ಸಮಯವಿದೆ, 15 ದಿನಗಳಲ್ಲಿ ಈ ಕಾರ್ಯಕ್ಕೆ ಚಾಲನೆ ದೊರೆಯಲಿದೆ, ಪಕ್ಷದಿಂದ ಅನೇಕರು ಸ್ಪರ್ಧೆಮಾಡಲು ಆಸಕ್ತಿ ತೋರಿಸುವ ಸಾಸ್ಯತೆಯಿದೆ, ಎಲ್ಲರೂ ಸೇರಿ ಸೂಕ್ತ ಅಭ್ಯರ್ಥಿಯನ್ನು ನಿಲ್ಲಿಸಲಾಗುವದು ಎಂದು ಅವರು ತಿಳಿಸಿದರು.

ರಾಜ್ಯ ವಿಧಾನಸಭೆಗೆ ಆರ್ ಆರ್ ಆರ್ ನಗರ ಹಾಗು ಶಿರಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗೆ ಪಕ್ಷ ಸಮರ್ಥ ಅಭ್ಯರ್ಥಿಗಳನ್ನು ನಿಲ್ಲಿಸಿ ಎರಡೂ ಕ್ಷೇತ್ರ ಗೆಲ್ಲಲಿದೆ, ಶಿರಾದಲ್ಲಿ ಪಕ್ಷದ ಆಂತರಿಕ ವಿಷಯದಿಂದ ಸಮಸ್ಯೆಯಾಗಿತ್ತು, ಈಗೆಲ್ಲ ಸರಿಯಾಗಿದೆ ಎಂದು ಅವರು ತಿಳಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!