Sports

ತಂಡ ಹಲವು ವಿಭಾಗಗಳಲ್ಲಿ ಸುಧಾರಿಸಬೇಕಿದೆ: ದಿನೇಶ್ ಕಾರ್ತಿಕ್

ರಾಜಸ್ಥಾನ್ ರಾಯಲ್ಸ್ ವಿರುದ್ಧ ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ಜಯ ಗಳಿಸಿದ ಬಳಿಕ ನಾಯಕ ದಿನೇಶ್ ಕಾರ್ತಿಕ್ ತಮ್ಮ ತಂಡ ಹಲವು ವಿಭಾಗಗಳಲ್ಲಿ ಸುಧಾರಣೆ ಮಾಡಿಕೊಳ್ಳುವ ಅಗತ್ಯ ಇದೆ ಎಂದು ಹೇಳಿದರು.

ಕೋಲ್ಕತಾ 20 ಓವರ್‌ಗಳಲ್ಲಿ ಆರು ವಿಕೆಟ್‌ಗಳಿಗೆ 174 ರನ್ ಗಳಿಸಿತು. ಯುವ ಆಟಗಾರ ಶುಭ್ ಮನ್ ಗಿಲ್ (47), ಇಯಾನ್ ಮಾರ್ಗಾನ್ (ಅಜೇಯ 34), ಆಂಡ್ರೆ ರಸ್ಸೆಲ್ (24) ಮತ್ತು ನಿತೀಶ್ ರಾಣಾ (22) ತಂಡಕ್ಕೆ ನೆರವಾದರು. ಗುರಿಯನ್ನು ಬೆನ್ನಟ್ಟಿದ ರಾಜಸ್ಥಾನ ತಂಡವು 20 ಓವರ್‌ಗಳಲ್ಲಿ ಒಂಬತ್ತು ವಿಕೆಟ್‌ಗಳಿಗೆ 137 ರನ್ ಗಳಿಸಲು ಮಾತ್ರ ಸಾಧ್ಯವಾಯಿತು ಮತ್ತು ಕೋಲ್ಕತಾ ಪಂದ್ಯವನ್ನು 37 ರನ್‌ಗಳಿಂದ ಗೆದ್ದುಕೊಂಡಿತು.

ಇದು ಮೂರು ಪಂದ್ಯಗಳಲ್ಲಿ ಕೋಲ್ಕತ್ತಾದ ಎರಡನೇ ಗೆಲುವು ಮತ್ತು ಮೂರು ಪಂದ್ಯಗಳಲ್ಲಿ ರಾಜಸ್ಥಾನದ ಮೊದಲ ಸೋಲು. ರಾಜಸ್ಥಾನ ವಿರುದ್ಧದ ಗೆಲುವಿನ ಹೊರತಾಗಿಯೂ, ಕೆಕೆಆರ್ ನಾಯಕ ಕಾರ್ತಿಕ್ ತಂಡದ ಸಾಧನೆ ಬಗ್ಗೆ ಹೆಚ್ಚು ಸಂತೋಷ ವ್ಯಕ್ತ ಪಡಿಸಲಿಲ್ಲ. ಮತ್ತು ತಂಡವು ಇನ್ನೂ ಅನೇಕ ವಿಭಾಗಗಳಲ್ಲಿ ಸುಧಾರಣೆಯಾಗಬೇಕಿದೆ ಎಂದು ಹೇಳಿದರು.

“ನಾನು ಇದನ್ನು ಉತ್ತಮ ಪ್ರದರ್ಶನ ಎಂದು ಹೇಳುವುದಿಲ್ಲ. ನಾವು ಸುಧಾರಿಸಬೇಕಾದ ವಿಭಾಗಗಳು ಹಲವು ಇವೆ. ಇದು ಉತ್ತಮ ಪಂದ್ಯವಾಗಿತ್ತು. ಗಿಲ್, ರಸ್ಸೆಲ್ ಇನ್ನಿಂಗ್ಸ್ ಮತ್ತು ಮಾರ್ಗಾನ್ ಜವಾಬ್ದಾರಿ ವಹಿಸಿಕೊಂಡ ರೀತಿ ಅದ್ಭುತವಾಗಿದೆ. ಉತ್ತಮ ವಿಷಯವೆಂದರೆ ಯುವ ಆಟಗಾರರು ಕ್ಯಾಚ್ ಅನ್ನು ಉತ್ತಮ ರೀತಿಯಲ್ಲಿ ಹಿಡಿಯುತ್ತಿದ್ದಾರೆ. ನನ್ನ ಪ್ರಕಾರ ಜೋಫ್ರಾ ಆರ್ಚರ್ ಚೆನ್ನಾಗಿ ಬೌಲಿಂಗ್ ಮಾಡಿದರು” ಎಂದು ದಿನೇಶ್ ಹೇಳಿದ್ದಾರೆ.

“ಈ ಪಿಚ್‌ನಲ್ಲಿ ಅನೇಕ ಆಟಗಾರರು ಉತ್ತಮ ಪ್ರದರ್ಶನ ನೀಡಿದರು. ಟಾಸ್ ಗೆದ್ದ ನಂತರ ನಾವು ಮೊದಲು ಬ್ಯಾಟಿಂಗ್ ಮಾಡೋಣ ಎಂದು ಭಾವಿಸಿದ್ದೆವು. ನಾವು ಟಾಸ್ ಗೆಲ್ಲಲು ಸಾಧ್ಯವಾಗದಿದ್ದರೂ ನಮಗೆ ಬೇಕಾದಂತೆ ಮಾಡಲು ಸಾಧ್ಯವಾಯಿತು” ಎಂದಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!