Washington

ಜಗತ್ತಿನಾದ್ಯಂತ 33.8 ದಶಲಕ್ಷ ಸೋಂಕು ಪ್ರಕರಣ ದಾಖಲು

ವಾಷಿಂಗ್ಟನ್, ಅ 01 – ಜಾಗತಿಕವಾಗಿ ಕೊರೋನಾ ಸೋಂಕಿತರ ಸಂಖ್ಯೆ 33.8 ದಶಲಕ್ಷ ಮೀರಿದ್ದು, ಮೃತರ ಸಂಖ್ಯೆ ಗುರುವಾರದ ವೇಳೆಗೆ ಸುಮಾರು 1,012,900 ಕ್ಕೆ ಏರಿದೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ತಿಳಿಸಿದೆ.

ಒಟ್ಟು ಪ್ರಕರಣಗಳ ಸಂಖ್ಯೆ 33,874,283 ಮತ್ತು ಸಾವುನೋವು 1,012,894 ಕ್ಕೆ ಏರಿದೆ ಎಂದು ವಿಶ್ವವಿದ್ಯಾಲಯದ ಸೆಂಟರ್ ಫಾರ್ ಸಿಸ್ಟಮ್ಸ್ ಸೈನ್ಸ್ ಅಂಡ್ ಎಂಜಿನಿಯರಿಂಗ್ (ಸಿಎಸ್ಎಸ್ಇ) ತನ್ನ ಇತ್ತೀಚಿನ ನವೀಕರಣದಲ್ಲಿ ಬಹಿರಂಗಪಡಿಸಿದೆ.
ಸಿಎಸ್ಎಸ್ಇ ಪ್ರಕಾರ, ವಿಶ್ವದ ಅತಿ ಹೆಚ್ಚು ಪ್ರಕರಣಗಳು ಮತ್ತು ಸಾವುಗಳನ್ನು ಅಮೆರಿಕ ದೇಶ ಹೊಂದಿದ್ದು, ಕ್ರಮವಾಗಿ 7,229,723 ಮತ್ತು 206,905 ರಷ್ಟಿದೆ. ಪ್ರಕರಣಗಳ ವಿಷಯದಲ್ಲಿ 6,225,763 ರಷ್ಟು ಸೋಂಕಿನೊಂದಿಗೆ ಭಾರತ ಎರಡನೇ ಸ್ಥಾನದಲ್ಲಿದೆ, ದೇಶದ ಸಾವಿನ ಸಂಖ್ಯೆ 97,497 ಕ್ಕೆ ಏರಿದೆ.
ಬ್ರೆಜಿಲ್ 4,810,935, ರಷ್ಯಾ 1,170,799, ಕೊಲಂಬಿಯಾ 829,679, ಪೆರು 811,768 ಮತ್ತು ಸ್ಪೇನ್ 769,188 ಪ್ರಕರಣಗಳನ್ನು ಹೊಂದಿವೆ.
ಬ್ರೆಜಿಲ್ ನಲ್ಲಿ 143,952 ಸೋಂಕಿತರು ಮೃತಪಟ್ಟಿದ್ದು, ಎರಡನೇ ಅತಿ ಹೆಚ್ಚು ಸಾವುನೋವು ಹೊಂದಿರುವ ದೇಶವಾಗಿದೆ. 20,000 ಕ್ಕಿಂತ ಹೆಚ್ಚಿನ ಸಾವಿನ ಸಂಖ್ಯೆ ಹೊಂದಿರುವ ದೇಶಗಳಲ್ಲಿ ಮೆಕ್ಸಿಕೊ 77,646, ಇಂಗ್ಲೆಂಡ್ 42,233, ಇಟಲಿ 35,894, ಪೆರು 32,396, ಫ್ರಾನ್ಸ್ 32,396, ಸ್ಪೇನ್ 31,791 ಮತ್ತು ಇರಾನ್ ದೇಶದಲ್ಲಿ 26,169 ಸೋಂಕಿತರು ಮೃತಪಟ್ಟಿದ್ದಾರೆ.

Leave a Reply

Your email address will not be published. Required fields are marked *

Back to top button
error: Content is protected !!