Mumbai

ಹೋಟೆಲ್ ಬಳಿ ಗುಂಡಿ ಹಾರಿಸಿ ಮೂವರಿಂದ ಲೂಟಿ

ಪಾಲ್ಘರ್, ಅ 01 – ಮುಂಬೈ-ಅಹಮದಾಬಾದ್ ರಸ್ತೆಯ ಹೋಟೆಲ್‌ವೊಂದರಲ್ಲಿ ಮೂರು ಡಕಾಯಿತರು ಗುಂಡು ಹಾರಿಸಿ ಲೂಟಿ ಮಾಡಿರುವ ಘಟನೆ ನಡೆದಿದೆ.

ಗುರುವಾರ ನಸುಕಿನ 03.30ರ ಸುಮಾರಿಗೆ ಈ ದರೋಡೆ ನಡೆದಿದ್ದು, 1.10 ಲಕ್ಷ ರೂ. ಲೂಟಿಯಾಗಿದೆ.
“ಕಾರಿನಲ್ಲಿ ಬಂದ ಮೂವರು ಆರೋಪಿಗಳು ಹೆದ್ದಾರಿಯಲ್ಲಿರುವ ಅಂಬೋಲಿ ಬಳಿಯ ದುಂಡಲ್ವಾಡಿಯ ಆಕಾಶ್ ಹೋಟೆಲ್ ಬಳಿ ಗುಂಡು ಹಾರಿಸಿ ನಗದು ಲೂಟಿ ಮಾಡಿದ್ದಾರೆ” ಎಂದು ಪೊಲೀಸರು ತಿಳಿಸಿದ್ದಾರೆ.
ನಂತರ ಅವರು ಕಾರನ್ನು ತ್ಯಜಿಸಿ ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ.
ಸುದ್ದಿ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದು ಲೂಟಿಕೋರರಿಗಾಗಿ ಬಲೆ ಬೀಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!