New Delhi

ದೇಶದ ಕೋವಿಡ್ ಸೋಂಕು ಪ್ರಕರಣ 63 ಲಕ್ಷಕ್ಕೂ ಅಧಿಕ! 98 ಸಾವಿರ ಮೀರಿದ ಸಾವಿನ ಸಂಖ್ಯೆ

ನವದೆಹಲಿ, ಅ 01- ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ ಹೊಸದಾಗಿ 86,821 ಕೋವಿಡ್ ಪ್ರಕರಣಗಳನ್ನು ದಾಖಲಿಸಿದ್ದು, ಸೋಂಕಿತರ ಒಟ್ಟು ಸಂಖ್ಯೆ 63 ಲಕ್ಷ ಗಡಿ ದಾಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ಗುರುವಾರ ಬೆಳಿಗ್ಗೆ ತಿಳಿಸಿದೆ.

ಪ್ರಸ್ತುತ ರಾಷ್ಟ್ರದ ಒಟ್ಟು ಪ್ರಕರಣಗಳ ಸಂಖ್ಯೆ ಆರಂಭದಿಂದ ಇಲ್ಲಿಯವರೆಗೆ 63,12,585 ರಷ್ಟಿದೆ.
ಕಳೆದ ಒಂದು ದಿನದಲ್ಲಿ ಗುಣಮುಖರಾಗಿ ಬಿಡುಗಡೆಯಾದವರ ಸಂಖ್ಯೆ 85,376 ರಷ್ಟಿದ್ದು, ಇಲ್ಲಿಯವರೆಗೆ 52,73,201 ಸೋಂಕಿತರು ಚೇತರಿಸಿಕೊಂಡಿದ್ದಾರೆ. ಏತನ್ಮಧ್ಯೆ, ಬುಧವಾರದಿಂದ 1,181 ಸಾವುಗಳು ಸಂಭವಿಸಿವೆ, ಇಲ್ಲಿಯವರೆಗಿನ ಸಾವಿನ ಸಂಖ್ಯೆ 98,678 ಕ್ಕೆ ತಲುಪಿದೆ.
ಪ್ರಸ್ತುತ ಭಾರತವು ಕೋವಿಡ್ ಸೋಂಕಿನ 9,40,705 ಸಕ್ರಿಯ ಪ್ರಕರಣಗಳಿಗೆ ನೆಲೆಯಾಗಿದೆ.
ಶೇಕಡಾವಾರು ಪ್ರಕಾರ, ಸಕ್ರಿಯ ಪ್ರಕರಣಗಳು ಶೇಕಡಾ 14.90, ಚೇತರಿಕೆ ಶೇಕಡಾ 83.53, ಮತ್ತು ಸಾವುಗಳು ಶೇಕಡಾ 1.56 ರಷ್ಟಿದೆ.
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಪ್ರಕಾರ, ಕಳೆದ 24 ಗಂಟೆಗಳಲ್ಲಿ 14,23,052 ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಸಾಂಕ್ರಾಮಿಕ ರೋಗದ ಪ್ರಾರಂಭದಿಂದ ಸೋಮವಾರದವರೆಗೆ ಪರೀಕ್ಷಿಸಿದ ಒಟ್ಟು ಮಾದರಿಗಳ ಸಂಖ್ಯೆ 7,56,19,781ರಷ್ಟಿದೆ.
ಗರಿಷ್ಠ ಸಕ್ರಿಯ ಪ್ರಕರಣಗಳ ವಿಷಯದಲ್ಲಿ ಮಹಾರಾಷ್ಟ್ರವು ಅತ್ಯಂತ ಪೀಡಿತ ರಾಜ್ಯವಾಗಿ ಮುಂದುವರೆದಿದೆ.
ಜಾಗತಿಕವಾಗಿ, ಅಮೆರಿಕ ಹೆಚ್ಚು ಸೋಂಕಿಗೆ ಒಳಗಾಗಿದೆ, ನಂತರದ ಸ್ಥಾನದಲ್ಲಿ ಭಾರತ ಮತ್ತು ಬ್ರೆಜಿಲ್ ದೇಶಗಳಿವೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!