Bengaluru

‘ಗಾಂಧಿ ಮತ್ತು ನೋಟು’ ಚಿತ್ರೀಕರಣ ಪೂರ್ಣ

ಬೆಂಗಳೂರು, ಅ 01 -ಬಿ ಎಸ್ ಸುಧೀಂದ್ರ ಅವರ ಆಶೀರ್ವಾದದೊಂದಿಗೆ, ಭಾವನ ಕಂಬೈನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ, ಪಿ.ಕೆ.ಮುರುಗನ್ ಅರ್ಪಿಸುವ ‘ಗಾಂಧಿ ಮತ್ತು ನೋಟು’ ಚಿತ್ರದ ಚಿತ್ರೀಕರಣ ಬಹುತೇಕ ಪೂರ್ಣವಾಗಿದೆ.

ಗಾಂಧೀಜಿಯವರ ತತ್ವ,ಸಿದ್ಧಾಂತ,ಮೌಲ್ಯಗಳನ್ನು ಮಾಪನ ಮಾಡಲು ಯತ್ನಿಸುತ್ತಿರುವ ಕಥೆ. ಪ್ರಸಕ್ತ ಸಾಮಾಜಿಕ ಬದುಕಲ್ಲಿ ಜಗತ್ತು ಗಾಂಧಿಜಿಯವರನ್ನ ಹೇಗೆ ನೋಡುತ್ತಿದೆ? ಮತ್ತು ಗಾಂಧೀಜಿಯವರ ಮೌಲ್ಯಗಳು ಅದರ ಅಥ೯ ಮತ್ತು ಶಕ್ತಿಯನ್ನ ಹುಡುಕೋ ಒಂದು ಪ್ರಯತ್ನವೇ ಈ ಚಿತ್ರ.

ಖ್ಯಾತ ಚಿತ್ರ ಸಾಹಿತಿ ಡಾ. ವಿ ನಾಗೇಂದ್ರ ಪ್ರಸಾದ್ ಅವರ ಪುತ್ರಿ ದಿವಿಜಾ ನಾಗೇಂದ್ರ ಪ್ರಸಾದ್ ಪ್ರಮುಖ ಪಾತ್ರದಲ್ಲಿದ್ದಾರೆ. ಇವರೊಂದಿಗೆ ಸಾಕಷ್ಟು ರಂಗಭೂಮಿ ಕಲಾವಿದರ ಅಭಿನಯ ಕೂಡ ಈ ಚಿತ್ರದಲ್ಲಿದೆ.
ಇತ್ತೀಚೆಗೆ ದಿವಿಜಾ ಅವರ ಹುಟ್ಟುಹಬ್ಬದ ಪ್ರಯುಕ್ತ ಚಿತ್ರತಂಡ ವಿಭಿನ್ನ ಪೋಸ್ಟರ್ ಸಹ ಬಿಡುಗಡೆ ಮಾಡಿದೆ.
ಸುಧಾರಣಿ ಹೆಚ್ ಆರ್ ಮೇಲುಕೋಟೆ, ಹೆಚ್.ಕೆ.ವೀಣಾಪದ್ಮನಾಭ ಮತ್ತು ಮಂಜುನಾಥ್ ಬಿ.ಎನ್ ಈ ಚಿತ್ರದ ನಿರ್ಮಾಪಕರು.

ಯೋಗಿ ದೇವಗಂಗೆ ನಿರ್ದೇಶನದ ಈ ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದ್ದು, ಕ್ಲೈಮ್ಯಾಕ್ಸ್ ಭಾಗದ ಚಿತ್ರೀಕರಣ ಮಾತ್ರ ಬಾಕಿಯಿದೆ. ವಾಣಿ ಹರಿಕೃಷ್ಣ ಅವರ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ
ಅಚ್ಚು ಸುರೇಶ್ ಛಾಯಾಗ್ರಹಣ, ವಸಂತಕುಮಾರ್ ಸಂಕಲನವಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!