New Delhi

ಅ. 15 ರಿಂದ ಚಿತ್ರಮಂದಿರ, ಮಲ್ಟಿಪ್ಲಕ್ಸ್ ತೆರೆಯಲು ಅನುಮತಿ

ನವದೆಹಲಿ, ಸೆ 30- ಕಂಟೈನ್ಮೆಂಟ್ ವಲಯಗಳ ಹೊರಗೆ ಸಾಮಾನ್ಯ ಚಟುವಟಿಕೆಗಳನ್ನು ಹೆಚ್ಚಿಸಲು ಅಕ್ಟೋಬರ್ 15 ರಿಂದ ಸಿನಿಮಾ ಹಾಲ್ ಗಳು, ಮಲ್ಟಿಪ್ಲೆಕ್ಸ್ ಗಳು, ಕ್ರೀಡಾಪಟುಗಳಿಗೆ ತರಬೇತಿ ನೀಡುವ ಈಜು ಕೊಳಗಳು ಹಾಗೂ ಮನರಂಜನಾ ಪಾರ್ಕ್ ಗಳನ್ನು ತರೆಯಲು ಎಂದು ಕೇಂದ್ರ ಗೃಹ ಸಚಿವಾಲಯ ರಾಜ್ಯಗಳಿಗೆ ಅನುಮತಿ ಕಲ್ಪಿಸಿದೆ.

ಈ ಸಂಬಂಧ ಬುಧವಾರ ಕೇಂದ್ರ ಗೃಹ ಸಚಿವಾಲಯ ಕಾರ್ಯದರ್ಶಿ ಎಲ್ಲ ರಾಜ್ಯಗಳಿಗೆ ಆದೇಶ ಹೊರಡಿಸಿದ್ದಾರೆ.

ಆದರೆ, ಶಾಲೆಗಳನ್ನು ತೆರೆಯುವ ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳ ವಿವೇಚನೆಗೆ ಬಿಟ್ಟುಕೊಟ್ಟಿದೆ.

ಅಕ್ಟೋಬರ್ 15 ರ ನಂತರ ಶಾಲೆಗಳನ್ನು ತರೆಯುವ ಬಗ್ಗೆ ರಾಜ್ಯಗಳು ನಿರ್ಧಾರ ಕೈಗೊಳ್ಳಬಹುದಾಗಿದೆ. ಆದರೆ, ಯಾವುದೇ ನಿರ್ಣಯ ಕೈಗೊಳ್ಳುವ ಮುನ್ನ ವಿದ್ಯಾರ್ಥಿಗಳ ತಂದೆ ತಾಯಿಯರ ಒಪ್ಪಿಗೆ ಅಗತ್ಯವೆಂದು ಸ್ಪಷ್ಟಪಡಿಸಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!