Mathura

ಕೃಷ್ಣ ಜನ್ಮಭೂಮಿ ಅರ್ಜಿ ವಜಾಗೊಳಿಸಿದ ಮಥುರಾ ಕೋರ್ಟ್ : ಹೈಕೋರ್ಟ್ ಗೆ ಮೊರೆ ಹೋಗಲು ನಿರ್ಧಾರ

ಮಥುರ,ಸೆ 30 – ಕೃಷ್ಣ ಜನ್ಮ ಭೂಮಿ ಅರ್ಜಿಯನ್ನು ಮಥುರ ಸಿವಿಲ್ ನ್ಯಾಯಾಲಯ ವಜಾಗೊಳಿಸಿದೆ. ಈ ಬಗ್ಗೆ ಅಲಹಾಬಾದ್ ಹೈಕೋರ್ಟ್ ಮೊರೆ ಹೋಗಲು ಅರ್ಜಿದಾರರು ನಿರ್ಧರಿಸಿದ್ದಾರೆ.

ಕೃಷ್ಣ ಜನ್ಮ ಭೂಮಿ ಪಕ್ಕದಲ್ಲಿರುವ ಶಾಹಿ ಈದ್ಗಾ ಮಸೀದಿ ತೆರವುಗೊಳಿಸಿ ಒಟ್ಟು ಭೂಮಿಯನ್ನು ಹಸ್ತಾಂತರಿಸಬೇಕು ಎಂದು “ಭಗವಾನ್ ಶ್ರೀ ಕೃಷ್ಣ ವಿರಾಜಮಾನ್” ಪರ ವಕೀಲರಾದ ಹರಿಶಂಕರ್,ವಿಷ್ಣು ಜೈನ್ ಮಥುರಾ ನ್ಯಾಯಾಲಯಕ್ಕೆ ಈ ತಿಂಗಳ 25 ರಂದು ಅರ್ಜಿಸಲ್ಲಿಸಿದ್ದರು.

ಅವರ ಆರ್ಜಿಯ ಪ್ರಕಾರ, “ರಾಯಲ್ ಈದ್ಗಾ ಮಸೀದಿ ಇರುವ ಪ್ರದೇಶ ಶ್ರೀ ಕೃಷ್ಣ ಜನಿಸಿದ ಜೈಲಾಗಿತ್ತು. ಈ ಭೂಮಿಯ ಪ್ರತಿ ಅಂಗುಲವೂ .. ಶ್ರೀ ಕೃಷ್ಣ ಭಕ್ತರರಿಗೆ, ಹಿಂದೂ ಸಮಾಜಕ್ಕೆ ಪರಮ ಪವಿತ್ರವಾದದ್ದು ಎಂದು ಭಗವಾನ್ ಶ್ರೀ ಕೃಷ್ಣ ವಿರಾಜಮಾನ್ ಹೇಳಿಕೊಳ್ಳುತ್ತಿದೆ. ಮೊಘಲ್ ದೊರೆ ಔರಂಗಜೇಬನ ಸೇನೆ ಕೃಷ್ಣ ಜನ್ಮ ಸ್ಥಳ ಎಂದು ‘ನಂಬಿರುವ ಸ್ಥಳ’ ಕೆಲ ಭಾಗವನ್ನು ಧ್ವಂಸಗೊಳಿಸಿದ್ದರು ಎಂದು ಆರ್ಜಿಯಲ್ಲಿ ಹೇಳಿಕೊಂಡಿದ್ದಾರೆ.

ಮಸೀದಿ ತೆರವುಗೊಳಿಸಿ ಆ ಸ್ಥಳವನ್ನು ತಮಗೆ ಹಸ್ತಾಂತರಿಸಬೇಕು ಎಂದು ಆರ್ಜಿದಾರರು ಕೋರಿದ್ದಾರೆ. ಯಾವುದೇ ಧಾರ್ಮಿಕ ಸ್ಥಳಗಳಲ್ಲಿ 1947ರ ಯಥಾಸ್ಥಿತಿಯನ್ನು ಬದಲಾವಣೆ ನಿಷೇಧ ಕಾಯ್ದೆ ಉಲ್ಲೇಖಿಸಿ ನ್ಯಾಯಾಲಯ ಆರ್ಜಿ ವಿಚಾರಣೆಗೆ ಅಂಗೀಕರಿಸಲು ನಿರಾಕರಿಸಿ ವಜಾಗೊಳಿಸಿದೆ. ಪೂಜಾ ಸ್ಥಳಗಳು( ವಿಶೇಷ ನಿಬಂಧನೆಗಳು) ಕಾಯ್ದೆ 1991 ಆಯೋಧ್ಯೆಯ ಭೂ ಮಾಲಿಕತ್ವ ವಿವಾದಕ್ಕೆ ವಿನಾಯಿತಿ ಕಲ್ಪಿಸಿದೆ. ಆಯೋಧ್ಯೆಯಲ್ಲಿ ರಾಮ ಜನ್ಮ ಭೂಮಿ ವಿವಾದ ಪರಿಹಾರಗೊಂಡನಂತರ ಹಿಂದೂತ್ವ ಸಂಘಟನೆಗಳು ಶ್ರೀ ಕೃಷ್ಣ ಜನ್ಮ ಭೂಮಿಯ ಬಗ್ಗೆ ದೃಷ್ಟಿ ಹರಿಸಿವೆ.

“ಈ ಭೂಮಿಯ ಪ್ರತಿ ಅಂಗಲವೂ ಶ್ರೀ ಕೃಷ್ಣ, ಹಿಂದೂ ಸಮಾಜ ಭಕ್ತರಿಗೆ ಅತ್ಯಂತ ಪವಿತ್ರವಾದದ್ದು” ಎಂದು ನ್ಯಾಯವಾದಿ ವಿಷ್ಣು ಜೈನ್ ತಮ್ಮ ಆರ್ಜಿಯಲ್ಲಿ ಹೇಳಿದ್ದು, 13.37 ಎಕರೆಗಳ ‘ಶ್ರೀ ಕೃಷ್ಣ ಜನ್ಮಭೂಮಿ” ಪಕ್ಕದಲ್ಲಿಯೇ ಇರುವ ಶಾಹಿ ಈದ್ಗಾ ಮಸೀದಿ ತೆರವುಗೊಳಿಸಬೇಕೆಂದು ಒತ್ತಾಯಿಸಿದ್ದು, ಒಟ್ಟು ಭೂಮಿಯನ್ನು ಶ್ರೀ ಕೃಷ್ಣ ಮಂದಿರಕ್ಕೆ ಹಸ್ತಾಂತರಿಸಬೇಕು ಎಂದು ಕೋರಿದ್ದಾರೆ. ಮುಂದಿನ ತಿಂಗಳ 15 ರಂದು ಬೃಂದಾವನದಲ್ಲಿ ನಡೆಸಲಿರುವ ಅಖಾರ ಪರಿಷತ್ ಸಮಾವೇಶದಲ್ಲಿ ಭವಿಷ್ಯದ ಕಾರ್ಯಾಚರಣೆ ಬಗ್ಗೆ ನಿರ್ಣಯಿಸಲಾಗುವುದು ಎಂದು ಅಧ್ಯಕ್ಷ ಮಹಂತ್ ನರೇಂದ್ರ ಗಿರಿ ಹೇಳಿದ್ದಾರೆ.

ಆಯೋಧ್ಯೆಯಲ್ಲಿ ರಾಮಜನ್ಮ ಭೂಮಿ ನಂತರ ಮಥುರ, ಕಾಶಿಗಳನ್ನೂ ಅತಿಕ್ರಮಣಗಳಿಂದ ಬಿಡುಗಡೆಗೊಳಿಸುವ ಅಗತ್ಯ ಇದೆ ಎಂದು ಬಿಜೆಪಿ ನಾಯಕ ವಿನಯ್ ಕಟಿಹಾರ್ ಹೇಳಿದ್ದಾರೆ. ಅಗತ್ಯವಾದರೆ ಈದ್ಗಾ ಆಕ್ರಮಣವನ್ನು ತೊಲಗಿಸಿ, ಶ್ರೀ ಕೃಷ್ಣಭೂಮಿಯನ್ನು ಮತ್ತೆ ಪಡೆದುಕೊಳ್ಳಲು ಹೋರಾಟ ಆರಂಭಿಸಬೇಕು ಎಂದು ಹೇಳಿದ್ದಾರೆ. ಈ ನಡುವೆ, ಭಗವಾನ್ ಶ್ರೀ ಕೃಷ್ಣ ವಿರಾಜಾಮಾನ್ ದಾಖಲು ಮಾಡಿದ್ದ ಸಿವಿಲ್ ದಾವೆ ಅಸಂಬದ್ದವಾದದ್ದು ಎಂದು ಮುಸ್ಲಿಂ ನಾಯಕ ಹಾಜಿ ಮೆಹಬೂಬ್ ಹೇಳಿದ್ದಾರೆ. ಮತ್ತೊಂದು ಕಡೆ, ಈ ಆರ್ಜಿಗೂ, ತಮಗೂ, ಟ್ರಸ್ಟ್ ಗೂ ಯಾವುದೇ ಸಂಬಂಧ ಇಲ್ಲ ಎಂದು ಶ್ರೀ ಕೃಷ್ಣ ಜನ್ಮಸ್ಥಾನ ಸೇವಾ ಸಂಸ್ಥೆ ಟ್ರಸ್ಟ್( ಶ್ರೀಕೃಷ್ಣ ಜನ್ಮಭೂಮಿ ನ್ಯಾಸ್) ಕಾರ್ಯದರ್ಶಿ ಕಪಿಲ್ ಶರ್ಮಾ ಸ್ಪಷ್ಟಪಡಿಸಿದ್ದಾರೆ.

Leave a Reply

Your email address will not be published. Required fields are marked *

Back to top button
error: Content is protected !!