Hyderabad

ಬಾಬ್ರಿ ಮಸೀದಿ ತನ್ನಷ್ಟಕ್ಕೇ ತಾನೇ ಕುಸಿದು ಬಿತ್ತೆ? -ಅಸದುದ್ದೀನ್ ಒವೈಸಿ ಪ್ರಶ್ನೆ

ಹೈದರಾಬಾದ್, ಸೆ 30- ಸುಮಾರು ಮೂರು ದಶಕಗಳ ಕಾಲ ನಡೆದ ಬಾಬ್ರಿ ಮಸೀದಿ ದ್ವಂಸಗೊಳಿಸಿದ್ದ ಪ್ರಕರಣದಲ್ಲಿ ಬಿಜೆಪಿ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಸೇರಿ 32 ಮಂದಿಯನ್ನು ಲಕ್ನೋ ಸಿಬಿಐ ವಿಶೇಷ ನ್ಯಾಯಾಲಯ ನಿರ್ದೋಷಿಗಳೆಂದು ನೀಡಿರುವ ತೀರ್ಪಿಗೆ ಎಂಐಎಂ ಅಧ್ಯಕ್ಷ, ಹೈದ್ರಾಬಾದ್ ಸಂಸದ ಅಸದಿದ್ದೀನ್ ಒವೈಸಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ಭಾರತದ ನ್ಯಾಯ ಇತಿಹಾಸದಲ್ಲಿ ಇಂದು ಕರಾಳ ದಿನ ಎಂದು ಅಸದುದ್ದೀನ್ ವ್ಯಾಖ್ಯಾನಿಸಿದ್ದಾರೆ.

ಬಾಬ್ರಿ ಮಸೀದಿ ದ್ವಂಸಕ್ಕೆ ಕಾರಣರಾದ ವ್ಯಕ್ತಿಗಳನ್ನು ನಿರ್ದೋಷಿಗಳೆಂದು ಘೋಷಿಸಿರುವುದು ಸರಿಯಾದ ತೀರ್ಮಾನವಲ್ಲ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬಾಬ್ರಿ ಮಸೀದಿ ದ್ವಂಸಗೊಳಿಸಿದ ಘಟನೆಯಿಂದ ಲಾಭ ಪಡೆದ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಗೃಹ ಸಚಿವರಾಗಿ, ಮಾನವ ಸಂಪನ್ಮೂಲ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಅಂತವರನ್ನು ದೋಷಿಗಳೆಂದು ಘೋಷಿಸಬೇಕು ಎಂದು ಒವೈಸಿ ಒತ್ತಾಯಿಸಿದ್ದಾರೆ.

ಬಾಬ್ರಿ ಮಸೀದಿ ದ್ವಂಸ ಉದ್ದೇಶಪೂರ್ವಕವಾಗಿ ನಡೆಯಲಿಲ್ಲ, ಯೋಜನೆ ರೂಪಿಸಿ ದ್ವಂಸಗೊಳಿಸಲಾಯಿತು ಎಂಬುದಕ್ಕೆ ಆಧಾರಗಳು ಇಲ್ಲ ಎಂದು ಹೇಳಲು ಇಷ್ಟು ಸಮಯ ಬೇಕಾಯಿತೆ..? ಎಂದು ಅಸದುದ್ದೀನ್ ಪ್ರಶ್ನಿಸಿದ್ದಾರೆ.

ಈಗಲೂ ಪ್ರಕರಣಕ್ಕೆ ಸಂಬಂಧಿಸಿದ ಕೆಲವು ವ್ಯಕ್ತಿಗಳು ರಾಜಕೀಯ ಲಾಭ, ಸಹಕಾರ ಪಡೆದುಕೊಳ್ಳುತ್ತಿದ್ದಾರೆ. ಬಾಬ್ರಿ ಮಸೀದಿ ದ್ವಂಸ ಪ್ರಕರಣದಲ್ಲಿ ಯಾವುದೇ ನ್ಯಾಯ ಸಿಗಲಿಲ್ಲ, ಮಸೀದಿಯನ್ನು ಯಾರೂ ಕೆಡವದಿದ್ದರೆ ಮಸೀದಿ ಹೇಗೆ ದ್ವಂಸ ಗೊಂಡಿತು ..? ಎಂಬುದನ್ನು ತಮಗೆ ಯಾರಾದರೂ ಹೇಳಬೇಕು ಎಂದು ಖುದ್ದು ವಕೀಲರೂ ಆಗಿರುವ ಒವೈಸಿ ಕೋರಿದ್ದಾರೆ. ನಂತರ ಮಾಧ್ಯಮಗಳೊಂದಿಗೆ ಮಾತನಾಡಿ ಭಾರತ ನ್ಯಾಯ ಇತಿಹಾಸದಲ್ಲಿ ಈ ದಿನ ದುರ್ದಿನ, ದೋಷಿಗಳಿಗೆ ಶಿಕ್ಷೆಯಾಗಲಿಲ್ಲ.. ನಿರ್ದೋಷಿಗಳೆಂದು ತೀರ್ಪು ಬಂದಿದೆ ಎಂದರು.

Leave a Reply

Your email address will not be published. Required fields are marked *

Back to top button
error: Content is protected !!