New Delhi

ಸಿವಿಲ್ಸ್ ಪರೀಕ್ಷೆ ಮುಂದೂಡಲು ಕೋರಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

ನವದೆಹಲಿ, ಸೆ 30- ಕೇಂದ್ರ ಲೋಕಸೇವಾ ಆಯೋಗ(ಯು ಪಿ ಎಸ್ ಸಿ) ನಾಗರೀಕ ಸೇವೆಗಳ ಪೂರ್ವಭಾವಿ ಪರೀಕ್ಷೆ ಅಕ್ಟೋಬರ್ 4 ರಂದು ನಿಗದಿಯಂತೆ ನಡೆಯಲಿದ್ದು, ಈ ಪರೀಕ್ಷೆಯನ್ನು ಮುಂದೂಡಬೇಕೆಂದು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಬುಧವಾರ ವಜಾಗೊಳಿಸಿದೆ.

ಕೋವಿಡ್ 19 ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಪರೀಕ್ಷೆ ನಡೆಸಬೇಕೆಂದು ಯು ಪಿ ಎಸ್ ಸಿಗೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಅದೇ ರೀತಿ ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೂ ಮಹತ್ವದ ಸೂಚನೆ ನೀಡಿದೆ. ಕೊರೊನಾ ಕಾರಣದಿಂದ ಪರೀಕ್ಷೆ ಹಾಜರಾಗಲು ಸಾಧ್ಯವಾಗದವರಿಗೆ ಮತ್ತೊಮ್ಮೆ ಅವಕಾಶ ಕಲ್ಪಿಸಬೇಕೆಂಬ ಅಂಶವನ್ನು ಪರಿಶೀಲಿಸುವಂತೆ ಯು ಪಿ ಎಸ್ ಸಿ ಗೆ ನ್ಯಾಯಾಲಯ ತಾಕೀತು ಮಾಡಿದೆ.

ಸಿವಿಲ್ಸ್ ಪ್ರಿಲಿಮಿನರಿ ಪರೀಕ್ಷೆಯನ್ನು ಮುಂದೂಡಬೇಕೆಂದು ಕೋರಿ 20 ಮಂದಿ ಯು ಪಿ ಎಸ್ ಸಿ ಅಭ್ಯರ್ಥಿಗಳು ಸುಪ್ರೀಂ ಕೋರ್ಟ್ ಗೆ ಆರ್ಜಿ ದಾಖಲಿಸಿದ್ದರು. ಆದರೆ, ಪರಿಕ್ಷೆಯನ್ನು ಮತ್ತೆ ಮುಂದೂಡುವ ಯಾವುದೇ ಆಲೋಚನೆ ಇಲ್ಲ ಎಂದು ಯು ಪಿ ಎಸ್ ಸಿ ತನ್ನು ಪ್ರಮಾಣ ಪತ್ರದಲ್ಲಿ ಸ್ಪಷ್ಟಪಡಿಸಿತ್ತು. ಈ ವರ್ಷ ಪರೀಕ್ಷೆಗಳನ್ನು ಮುಂದೂಡಿದರೆ ಅದರ ಪ್ರಭಾವ ಬರುವ ವರ್ಷ ನಡೆಯಲಿರುವ ಪರೀಕ್ಷೆಗಳ ಮೇಲೆ ಉಂಟಾಗಲಿದೆ ಎಂದು ಅದು ತಿಳಿಸಿದೆ. ಯು ಪಿ ಎಸ್ ಸಿ ವಾದವನ್ನು ಒಪ್ಪಿದ ಸುಪ್ರೀಕೋರ್ಟ್ ಪರೀಕ್ಷೆ ಮುಂದೂಡಿಕೆ ಕೋರಿ ಸಲ್ಲಿಸಿದ್ದ ಆರ್ಜಿಯನ್ನು ವಜಾಗೊಳಿಸಿದೆ. ಅಕ್ಟೋಬರ್ 4ರಂದು ನಡೆಯುವ ಪರೀಕ್ಷೆಗೆ ಯು ಪಿ ಎಸ್ ಸಿ ಎಲ್ಲ ವ್ಯವಸ್ಥೆಗಳನ್ನು ಕೈಗೊಂಡಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!