Sports

ಮತ್ತೊಮ್ಮೆ ಕೌಶಲದ ಮೇಲೆ ಹೆಚ್ಚಿನ ಕಾರ್ಯ ನಿರ್ವಹಿಸಬೇಕು: ರಿಕಿ ಪಾಂಟಿಂಗ್‌

ಅಬುಧಾಬಿ, ಸೆ 30 – ಸತತ ಎರಡು ಪಂದ್ಯಗಳಲ್ಲಿ ಗೆದ್ದು ಹದಿಮೂರನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ, ತಮ್ಮ ಮೂರನೇ ಪಂದ್ಯದಲ್ಲಿ ಸನ್‌ ರೈಸರ್ಸ್ ಹೈದರಾಬಾದ್‌ ವಿರುದ್ಧ 15 ರನ್‌ಗಳಿಂದ ಸೋಲು ಅನುಭವಿಸಿತು.

ಮೊದಲು ಬ್ಯಾಟಿಂಗ್‌ ಮಾಡಿದ ಸನ್‌ ರೈಸರ್ಸ್ ಹೈದರಾಬಾದ್‌ ನಿಗದಿತ 20 ಓವರ್‌ಗಳಿಗೆ 4ವಿಕೆಟ್‌ಗಳನ್ನು ಕಳೆದುಕೊಂಡು 162 ರನ್‌ಗಳನ್ನು ದಾಖಲಿಸಿತ್ತು. ಡೇವಿಡ್‌ ವಾರ್ನರ್‌ ಹಾಗೂ ಜಾನಿ ಬೈರ್‌ಸ್ಟೋವ್‌ 77 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಉತ್ತಮ ಆರಂಭ ಒದಗಿಸಿಕೊಟ್ಟರು.

ಅತ್ಯುತ್ತಮ ಲಯದಲ್ಲಿರುವ ಜಾನಿ ಬೈರ್‌ಸ್ಟೋವ್‌ ಅರ್ಧಶತಕ ಸಿಡಿಸಿದ ಬಳಿಕ ವಿಕೆಟ್‌ ಒಪ್ಪಿಸಿದರು. ನಂತರ, ಕ್ರೀಸ್‌ನಲ್ಲಿ ಅದ್ಭುತ ಬ್ಯಾಟಿಂಗ್‌ ಮಾಡಿದ ಕೇನ್‌ ವಿಲಿಯಮ್ಸನ್‌ ಕೇವಲ 26 ಎಸೆತಗಳಲ್ಲಿ 41 ರನ್‌ ಗಳಿಸಿ ತಂಡದ ಮೊತ್ತವನ್ನು 160ರ ಗಡಿ ದಾಟಿಸಲು ನೆರವಾದರು. ಕಗಿಸೋ ರಬಾಡ ಡೆಲ್ಲಿ ಪರ ಅದ್ಭುತ ಬೌಲಿಂಗ್‌ ಮಾಡಿದರು. ಮತ್ತೊಮ್ಮೆ ಆಫ್ರಿಕಾ ಸ್ಟಾರ್‌ ವೇಗಿ ನಾಲ್ಕು ಓವರ್‌ಗಳಿಗೆ 21 ರನ್‌ಗಳನ್ನು ನೀಡಿ ಎರಡು ವಿಕೆಟ್‌ಗಳನ್ನು ಕಬಳಿಸಿದರು.

ಗುರಿ ಹಿಂಬಾಲಿಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ನಿಗದಿತ 20 ಓವರ್‌ಗಳಿಗೆ 7 ವಿಕೆಟ್‌ಗಳನ್ನು ಕಳೆದುಕೊಂಡು 147 ರನ್‌ಗಳಿಗೆ ಸೀಮಿತವಾಯಿತು. 34 ರನ್‌ಗಳನ್ನು ಗಳಿಸಿದ ಶಿಖರ್ ಧವನ್‌ ಡೆಲ್ಲಿ ಪರ ವೈಯಕ್ತಿಕ ಗರಿಷ್ಠ ಸ್ಕೋರರ್‌ ಆದರು. ಸನ್‌ ರೈಸರ್ಸ್ ಹೈದರಾಬಾದ್‌ ಪರ ಮ್ಯಾಚ್‌ ವಿನ್ನಿಂಗ್‌ ಪ್ರದರ್ಶನ ತೋರಿದ ರಶೀದ್‌ ನಾಲ್ಕು ಓವರ್‌ಗಳಿಗೆ 14 ರನ್‌ ಗಳನ್ನು ನೀಡಿ 3 ವಿಕೆಟ್‌ಗಳನ್ನು ಕಬಳಿಸಿದರು.

ಪಂದ್ಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡೆಲ್ಲಿ ಕ್ಯಾಪಿಟಲ್ಸ್ ಮುಖ್ಯ ಕೋಚ್‌ ರಿಕಿ ಪಾಂಟಿಂಗ್‌, “ಸನ್‌ ರೈಸರ್ಸ್ ಹೈದರಾಬಾದ್‌ ಎಲ್ಲಾ ವಿಭಾಗಗಳಲ್ಲೂ ನಮ್ಮನ್ನು ಮೀರಿದ ಪ್ರದರ್ಶನ ತೋರಿದೆ. ಆದ್ದರಿಂದ ಮತ್ತೊಮ್ಮೆ ನಾವು ಕೌಶಲದ ಮೇಲೆ ಇನ್ನಷ್ಟು ಕಾರ್ಯನಿರ್ವಹಿಸುವ ಅಗತ್ಯವಿದೆ,” ಎಂದು ಹೇಳಿದ್ದಾರೆ.

ಹೈದರಾಬಾದ್‌ ಐದನೇ ಬೌಲರ್‌ ಅಭಿಷೇಕ್‌ ಶರ್ಮಾ ಅವರ ಮೇಲೆ ದಾಳಿ ಮಾಡುವಲ್ಲಿ ನಾವು ಎಲ್ಲಿ ವಿಫಲವಾದೆವು ಎಂದು ಬಗ್ಗೆ ರಿಕಿ ಪಾಂಟಿಂಗ್‌ ವಿವರಿಸಿದರು.

ಪಂದ್ಯದಲ್ಲಿ ನಾವು ಅಭಿಷೇಕ್‌ ವರ್ಮಾ ಅವರನ್ನು ಗುರಿ ಮಾಡಲಾಗಿತ್ತು. ಆದರೆ, ನಮ್ಮ ನಿರೀಕ್ಷೆ ತಲೆ ಕೆಳಗಾಯಿತು. ರಶೀದ್‌ ಖಾನ್‌ ಎಂಟನೇ ಓವರ್‌ನಲ್ಲಿ ಶ್ರೇಯಸ್‌ ಅಯ್ಯರ್‌ ಅವರ ವಿಕೆಟ್‌ ಅನ್ನು ಕಬಳಿಸಿದರು. ಇದರಿಂದಾಗಿ ಮುಂದಿನ ಓವರ್‌ ಬೌಲಿಂಗ್‌ ಮಾಡಿದ ಅಭಿಷೇಕ್‌ ಶರ್ಮಾ ಬಚಾವ್ ಆದರು. ಅಭಿಷೇಕ್‌ ವರ್ಮಾ ಅವರ 3 ಹಾಗೂ 4ನೇ ಓವರ್‌ಗಳ ಮೇಲೆ ನಾವು ಗುರಿ ಮಾಡಲಾಗಿತ್ತು. ಆದರೆ, ಅವರ ಮೂರನೇ ಓವರ್‌ನಲ್ಲಿ ಹೆಚ್ಚಿನ ರನ್‌ಗಳನ್ನು ಗಳಿಸಲು ಸಾಧ್ಯವಾಗಲಿಲ್ಲ. ನಾವು ನಿರೀಕ್ಷೆ ಮಾಡಿದ ಪ್ರದರ್ಶನ ತೋರಲು ಸಾಧ್ಯವಾಗಲಿಲ್ಲ, ಹಾಗಾಗಿ, ಮತ್ತೊಮ್ಮೆ ನಮ್ಮ ಕೌಶಲದ ಕಡೆ ಹೆಚ್ಚಿನ ಗಮನ ಹರಿಸಬೇಕಾಗಿದೆ,” ಎಂದು ತಿಳಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!