New Delhi

ರಕ್ತಸಿಕ್ಕ ಅಧ್ಯಾಯದಿಂದ, ಭೂಮಿ ಪೂಜೆಯವರೆಗಿನ ವೃತ್ತಾಂತ…!!

ನವದೆಹಲಿ, ಸೆ 30- 1885ರಿಂದ ಆರಂಭವಾದ ಬಾಬ್ರಿ ಮಸೀದಿ ವಿವಾದ ಇಂದಿನ ತನಕ ಪರಿಹಾರ ಕಾಣದಂತೆ ನಡೆದುಕೊಂಡು ಬಂದಿತ್ತು. ರಕ್ತಸಿಕ್ಕ ಅಧ್ಯಾಯದಿಂದ, ಭೂಮಿ ಪೂಜೆಯವರೆಗೆ ನಡೆದಿರುವ ವೃತ್ತಾಂತ ದೇಶದ ಪಾಲಿಗೆ, ಮರೆಯಲಾಗದ ಮನ ಕಲಕುವ ಘಟನೆಗಳ ಸರಮಾಲೆಯೇ ಸರಿ.

1992ರ ಡಿಸೆಂಬರ್ 6ರಂದು ವಿಎಚ್ ಪಿ, ಶಿವ ಸೇನೆ, ಬಿಜೆಪಿ ಕರಸೇವಕರಿಂದ ಮಸೀದಿ ಧ್ವಂಸ. ಕರಸೇವಕರ ಪಾಲಿಗೆ ಶೌರ್ಯ ದಿವಸವಾಗಿದ್ದರೆ, ಮುಸ್ಲಿಂ ಸಂಘಟನೆಗಳಿಗೆ ಕಪ್ಪು ದಿನವಾಗಿತ್ತು .
ಈ ಘಟನೆಯು ರಾಷ್ಟ್ರವ್ಯಾಪಿ ಹಿಂದೂ -ಮುಸ್ಲಿಂ ಕೋಮು ಗಲಭೆಗೆ ನಾಂದಿ ಹಾಡಿ ಎರಡು ಸಾವಿರಕ್ಕೂ ಹೆಚ್ಚು ಜನರನ್ನು ಬಲಿ ಪಡೆಯಲಾಗಿತ್ತು . ಪಾಕಿಸ್ತಾನ ಹಾಗೂ ಬಾಂಗ್ಲಾದೇಶದಲ್ಲೂ ಹಿಂಸಾಚಾರ ಹಬ್ಬಿ, ಆ ದೇಶಗಳಲ್ಲಿ ಹಿಂದೂ ದೇಗುಲಗಳು ಧ್ವಂಸವಾಗಿದ್ದವು.

1992ರಲ್ಲಿ ಅಯೋಧ್ಯೆಯಲ್ಲಿದ್ದ 16ನೇ ಶತಮಾನದ ಬಾಬ್ರಿ ಮಸೀದಿ ಕೆಡವಿದ ಪ್ರಕರಣದಲ್ಲಿ ಅಡ್ವಾಣಿ, ಮುರಳಿ ಮನೋಹರ ಜೋಶಿ ಇತರ ಹನ್ನೆರಡು ಮಂದಿ ವಿರುದ್ಧದ ಸಂಚು ರೂಪಿಸಿದ ಆರೋಪವನ್ನು ರಾಯ್ ಬರೇಲಿ ಕೋರ್ಟ್ ತಳ್ಳಿಹಾಕಿ ಖುಲಾಸೆಗೊಳಿಸಿತ್ತು.

2010ರಲ್ಲಿ ಅಲಹಾಬಾದ್ ಹೈ ಕೋರ್ಟ್ ಕೆಳಹಂತದ ನ್ಯಾಯಾಲಯದ ತೀರ್ಪನ್ನೇ ಎತ್ತಿ ಹಿಡಿದಿತ್ತು. ನಂತರ ಸಿಬಿಐ ಹೈಕೋರ್ಟ್ ಆದೇಶ ಪ್ರಶ್ನಿಸಿ, ಸುಪ್ರೀಂ ಕೋರ್ಟ್ ಗೆ ಮನವಿ ಸಲ್ಲಿಸಿತ್ತು. ಮಸೀದಿ ಧ್ವಂಸ ಪ್ರಕರಣಕ್ಕೂ ಮೊದಲು ಗೌಪ್ಯ ಸಭೆಯೊಂದು ಬಿಜೆಪಿ ನಾಯಕ ವಿನಯ್ ಕಟಿಯಾರ್ ಮನೆಯಲ್ಲಿ ನಡೆದು ಈ ಸಭೆಯಲ್ಲಿ ಮಸೀದಿ ಧ್ವಂಸಕ್ಕೆ ಸಂಚು ರೂಪಿಸಲಾಗಿತ್ತು ಎಂದು ಸಿಬಿಐ ತನ್ನ ಜಾರ್ಜ್ ಶೀಟ್ ನಲ್ಲಿ ಆರೋಪಿಸಿತ್ತು ಹೀಗೆ ಕೋರ್ಟ್ ನಿಂದ ಕೋರ್ಟ್ ಗೆ ಪ್ರಕರಣ ವರ್ಗಾವಣೆಯಾಗುತ್ತಲೇ ಇತ್ತು.

ಸುಪ್ರಿಂಕೋರ್ಟ್ ನಿವೇಶನ ವಿವಾದಕ್ಕೂ ಮಂಗಳ ಹಾಡಿ, ಮಂದಿರ ಮತ್ತು ಮಸೀದಿ ಕಟ್ಟಲು ಅವಕಾಶ ಮಾಡಿಕೊಟ್ಟು ವಿವಾದಕ್ಕೆ ಶಾಶ್ವತ ತೆರೆ ಎಳೆಯಿತು. ಈಗಾಗಲೇ ಮಂದಿರ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಭೂಮಿ ಪೂಜೆ ಸಹ ನೆರವೇರಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!