New Delhi

ಬಾಬರಿ ಮಸೀದಿ ತೀರ್ಪು: ಆಡ್ವಾಣಿ, ಜೋಶಿ, ಉಮಾ ಭಾರತಿ ಗೈರು

ನವದೆಹಲಿ, ಸೆ 30- ಅಯೋಧ್ಯೆಯ ವಿವಾದಿತ ಬಾಬರಿ ಮಸೀದಿ ಧ್ವಂಸ ಪ್ರಕರಣ ಅಂತಿಮ ತೀರ್ಪು ಇನ್ನು ಕೆಲವೆ ನಿಮಿಷದಲ್ಲಿ ಸಿಬಿಐ ವಿಶೇಷ ನ್ಯಾಯಾಲಯದಿಂದ ಪ್ರಕಟವಾಗಲಿದ್ದು, ದೇಶಾದ್ಯಂತ ಕುತೂಹಲ, ಆತಂಕ ಹೆಚ್ಚಾಗಿದೆ.

ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಧೀಶ ಎಸ್ ಕೆ ಯಾದವ್ ಕೋರ್ಟ್ ಹಾಜರಾಗಿದ್ದು ತೀರ್ಪಿನ ಕ್ಷಣಗಣನೆ ಆರಂಭವಾಗಿದೆ.

ಸುಮಾರು 28 ವರ್ಷಗಳ ಹಿಂದಿನ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ತೀರ್ಪಿನ ಬಗ್ಗೆ ಇಡೀ ದೇಶಾದ್ಯಂತ ಕುತೂಹಲ ಹೆಚ್ಚಾಗಿದೆ. ದಿಂದ ಕಾಯುತ್ತಿದ್ದು, ಮುಂದೇನು ಎಂಬುದು ಕೋರ್ಟ್ ತೀರ್ಪಿನ ನಂತರ ತಿಳಿಯಲಿದೆ.

ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಕೆಲವು ಆರೋಪಿಗಳು ಹಾಜರಾಗಿದ್ದಾರೆ. ಕೋರ್ಟ್ ಗೆ ವಿನಯ್ ಕಟಿಯಾರ್, ಧರ್ಮದಾಸ್, ಲಲ್ಲೂ ಸಿಂಗ್, ಪವನ್ ಪಾಂಡೆ, ಸಾಕ್ಷಿ ಮಹಾರಾಜ್, ರಾಮಮಂದಿರ ಕಾರ್ಯದರ್ಶಿ ಚಂಪತ್ ರಾಯ್ ಆಗಮಿಸಿರುವುದಾಗಿ ವರದಿಯಾಗಿದೆ.

ಪ್ರಕರಣದ ಪ್ರಮುಖ ಆರೋಪಿಗಳಾದ ಬಿಜೆಪಿ ಹಿರಿಯ ಮುಖಂಡ ಎಲ್ ಕೆ ಆಡ್ವಾಣಿ, ಮುರಳಿ ಮನೋಹರ ಜೋಶಿ, ಉಮಾ ಭಾರತಿ ಸೇರಿದಂತೆ ಹಲವರು ಗೈರು ಹಾಜರಾಗಿದ್ದಾರೆ. ಇದರಲ್ಲಿ ಕೋವಿಡ್ 19 ದೃಢಪಟ್ಟಿರುವ ಕಲ್ಯಾಣ್ ಸಿಂಗ್ ಮತ್ತು ಉಮಾ ಭಾರತಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!