Bengaluru

400 ಗ್ರಾಂ ಮೀಥಾಕ್ವಾಲೋನ್ ಮಾತ್ರೆ ವಶಕ್ಕೆ

ಬೆಂಗಳೂರು,ಸೆ.30- ಸಿಲಿಕಾನ್ ಸಿಟಿ ಕಸ್ಟಮ್ಸ್ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ಲೆದರ್ ಬ್ಯಾಗ್ನ ತಳದಲ್ಲಿ ಬಚ್ಚಿಟ್ಟಿದ್ದ ಮಾದಕ ವಸ್ತು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ನಗರದ ಹೊರವಲಯ ದೇವನಹಳ್ಳಿ ಬಳಿ ಇರುವ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕೊರಿಯರ್ ಸೆಂಟರ್ಗೆ ಬಂದಿದ್ದ ಸುಮಾರು 20 ಲಕ್ಷ ರೂ. ಮೌಲ್ಯದ ಮೀಥಾಕ್ವಾಲೋನ್ ಮಾತ್ರೆ ವಶಪಡಿಸಿಕೊಂಡಿದ್ದಾರೆ.

ಲೆದರ್ ಬ್ಯಾಗ್ನ ತಳದಲ್ಲಿ 400 ಗ್ರಾಂ ಮಾತ್ರೆಗಳನ್ನು ಬಚ್ಚಿಡಲಾಗಿತ್ತು.
ಇದೇ ಕೇಂದ್ರದಲ್ಲಿ ಈ ಹಿಂದೆ 1.988 ಕೆ.ಜಿ. ಎಕ್ಸ್ಟಸಿ ಮಾತ್ರೆಗಳು ಪತ್ತೆಯಾಗಿದ್ದ ಪ್ರಕರಣದಲ್ಲಿ ಈಗಾಗಲೇ ಬಂಧಿತನಾಗಿರುವ ನೈಜೀರಿಯನ್ ಪ್ರಜೆ ಹೆಸರಿಗೆ ಮೀಥಾಕ್ವಾಲೋನ್ ಪಿಲ್ಸ್ ಆಮದಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!