Bengaluru

ಒಂದೇ ದಿನದಲ್ಲಿ 10 ಸಾವಿರಕ್ಕೂ ಹೆಚ್ಚು ಕೋವಿಡ್‌ ಪ್ರಕರಣ; ಒಟ್ಟು ಸಂಖ್ಯೆ 5.92 ಲಕ್ಷಕ್ಕೇರಿಕೆ

ಬೆಂಗಳೂರು, ಸೆ 29- ರಾಜ್ಯದಲ್ಲಿ ಒಂದೇ ದಿನದಲ್ಲಿ 10 ಸಾವಿರ ಕೋವಿಡ್‌ ಪ್ರಕರಣಗಳು ವರದಿಯಾಗಿದೆ. ಇದು ಇಲ್ಲಿಯವರೆಗೆ ದಾಖಲಾಗಿರುವ ಅತಿ ಹೆಚ್ಚಿನ ಪ್ರಕರಣಗಳಾಗಿವೆ.

ಮಂಗಳವಾರ ರಾಜ್ಯದಲ್ಲಿ 10453 ಪ್ರಕರಣಗಳು ವರದಿಯಾಗಿದ್ದು, 136 ಮಂದಿ ಮೃತಪಟ್ಟಿದ್ದಾರೆ. ಇದರಿಂದ ಇಲ್ಲಿಯವರೆಗೆ ಒಟ್ಟು ಸೋಂಕಿತರ ಸಂಖ್ಯೆ 5.92 ಲಕ್ಷಕ್ಕೇರಿಕೆಯಾಗಿದೆ.

ಈ ನಡುವೆ, ಕಳೆದ 24 ಗಂಟೆಗಳಲ್ಲಿ 6628 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಇಲ್ಲಿಯವರೆಗೆ 4.76 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.

ಸದ್ಯ ರಾಜ್ಯದಲ್ಲಿ 1.07 ಲಕ್ಷ ಸಕ್ರಿಯ ಪ್ರಕರಣಗಳಿದ್ದು, 8796 ಮಂದಿ ಮೃತಪಟ್ಟಿದ್ದಾರೆ. 815 ಮಂದಿಯ ಸ್ಥಿತಿ ಗಂಭೀರವಗಿದ್ದು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ಮಂಗಳವಾರ ಪ್ರಕಟಣೆಯಲ್ಲಿ ತಿಳಿಸಿದೆ.

ಬೆಂಗಳೂರು ನಗರದಲ್ಲಿ 4868 ಕೋವಿಡ್‌ ಪ್ರಕರಣಗಳು ವರದಿಯಾಗಿದ್ದು, 67 ಮಂದಿ ಮೃತಪಟ್ಟಿದ್ದಾರೆ. ಇದರಿಂದ ನಗರದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2.28 ಲಕ್ಷ ತಲುಪಿದೆ.

ಬಾಗಲಕೋಟೆಯಲ್ಲಿ 128, ಬಳ್ಳಾರಿಯಲ್ಲಿ 313, ಬೆಳಗಾವಿಯಲ್ಲಿ 128, ಬೆಂಗಳೂರು ಗ್ರಾಮಾಂತರದಲ್ಲಿ 305, ಚಾಮರಾಜನಗರದಲ್ಲಿ 122, ಚಿಕ್ಕಬಳ್ಳಾಪುರದಲ್ಲಿ 141, ಚಿಕ್ಕಮಗಳೂರಿನಲ್ಲಿ 177, ಚಿತ್ರದುರ್ಗದಲ್ಲಿ 186, ದಕ್ಷಿಣ ಕನ್ನಡದಲ್ಲಿ 362, ದಾವಣಗೆರೆಯಲ್ಲಿ 288, ಧಾರವಾಡದಲ್ಲಿ 145, ಗದಗದಲ್ಲಿ 111, ಹಾಸನದಲ್ಲಿ 475, ಕಲಬುರಗಿಯಲ್ಲಿ 161, ಕೊಪ್ಪಳದಲ್ಲಿ 143, ಮಂಡ್ಯದಲ್ಲಿ 259, ಮೈಸೂರಿನಲ್ಲಿ 414, ರಾಯಚೂರಿನಲ್ಲಿ 100, ಶಿವಮೊಗ್ಗದಲ್ಲಿ 347, ತುಮಕೂರಿನಲ್ಲಿ 297, ಉಡುಪಿಯಲ್ಲಿ 319, ಉತ್ತರಕನ್ನಡದಲ್ಲಿ 125, ವಿಜಯಪುರದಲ್ಲಿ 138, ಯಾದಗಿರಿಯಲ್ಲಿ 117 ಪ್ರಕರಣಗಳು ವರದಿಯಾಗಿವೆ.
ಬೀದರ್‌ನಲ್ಲಿ 70, ಹಾವೇರಿಯಲ್ಲಿ 75, ಕೊಡಗಿನಲ್ಲಿ 57, ಕೋಲಾರದಲ್ಲಿ 72, ರಾಮನಗರದಲ್ಲಿ 10 ಪ್ರಕರಣಗಳು ವರದಿಯಾಗಿವೆ ಎಂದು ಇಲಾಖೆ ತಿಳಿಸಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!