Sports

ಎರಡು ರನ್‌ಗಳನ್ನು ಸುಲಭವಾಗಿ ಗಳಿಸುವ ಕಾರಣದಿಂದ ತಾನು, ಎಬಿಡಿ ಕ್ರೀಸ್‌ಗೆ ಹೋದೆವು :ಕೊಹ್ಲಿ

ದುಬೈ, ಸೆ 29- ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ ರೋಚಕ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಗೆಲುವಿನ ಬಳಿಕ ಪ್ರತಿಕ್ರಿಯಿಸಿದ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್‌ ಕೊಹ್ಲಿ, ಸೂಪರ್ ಓವರ್‌ನಲ್ಲಿ ಎಬಿ ಡಿವಿಲಿಯರ್ಸ್ ಹಾಗೂ ತಾವು ಬ್ಯಾಟಿಂಗ್‌ ಮಾಡುವ ಹಿಂದೆ ಇದ್ದ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ.

ಸೋಮವಾರ ರಾತ್ರಿ ಆರ್‌ಸಿಬಿ ಹಾಗೂ ಮುಂಬೈ ಇಂಡಿಯನ್ಸ್ ಎರಡೂ ತಂಡಗಳು 201 ರನ್‌ಗಳನ್ನು ಗಳಿಸಿದ ಬಳಿಕ ಪಂದ್ಯ ಸೂಪರ್‌ ಓವರ್‌ಗೆ ತಲುಪಿತ್ತು. ಬಳಿಕ ಸೂಪರ್‌ ಓವರ್‌ನಲ್ಲಿ ಮುಂಬೈ ನೀಡಿದ್ದ 8 ರನ್‌ಗಳ ಗುರಿಯನ್ನು ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ಸುಲಭವಾಗಿ ಮುಟ್ಟಿದರು. ಎಬಿ ಡಿವಿಲಿಯರ್ಸ್ ಹಾಗೂ ತಾವು ಸೂಪರ್ ಓವರ್‌ನಲ್ಲಿ ಎರಡು ರನ್‌ಗಳನ್ನು ಪಡೆಯುವುದಲ್ಲಿ ಉತ್ತಮವಾಗಿದ್ದೇವೆ ಎಂದು ಕೊಹ್ಲಿ ಪಂದ್ಯದ ಬಳಿಕ ತಿಳಿಸಿದರು.

“ಈ ರೋಚಕ ಪಂದ್ಯದ ಬಗ್ಗೆ ಮಾತನಾಡಲು ನನ್ನಲ್ಲಿ ಪದಗಳಿಲ್ಲ. ನಾವು ಅತ್ಯುತ್ತಮವಾಗಿ ಬ್ಯಾಟಿಂಗ್‌ ಮಾಡಿ 200 ರನ್‌ಗಳನ್ನು ಗಳಿಸಿದೆವು. ಅದರಂತೆ ಬೌಲಿಂಗ್‌ನಲ್ಲಿಯೂ ಉತ್ತಮ ಆರಂಭ ಕಂಡಿದ್ದೆವು. ಆದರೆ, ಮಧ್ಯಮ ಓವರ್‌ಗಳಲ್ಲಿ ಮುಂಬೈ ಇಂಡಿಯನ್ಸ್ ಉತ್ತಮವಾಗಿ ಆಡಿತು. ಆದರೆ, ಮಂಜು ನಮ್ಮ ಬೌಲಿಂಗ್‌ ಪ್ರದರ್ಶನದ ಮೇಲೆ ಗಂಭೀರ ಪರಿಣಾಮವನ್ನು ಉಂಟಮಾಡಿತು. ಕೊನೆಯ ಐದು ಓವರ್‌ಗಳಲ್ಲಿ 90 ರನ್‌ ನೀಡಿದ್ದರಿಂದ ನಾವು ಕೆಲಸವನ್ನು ಉತ್ತಮವಾಗಿ ಮುಗಿಸಿದ್ದೇವೆ ಎಂದು ಭಾವಿಸುವುದಿಲ್ಲ,” ಎಂದು ವಿರಾಟ್‌ ಕೊಹ್ಲಿ ತಿಳಿಸಿದರು.

“ಫೀಲ್ಡಿಂಗ್‌ ವಿಭಾಗದಲ್ಲಿ ನಾವು ಇನ್ನಷ್ಟು ಪರಿಶ್ರಮ ಪಡುವ ಅಗತ್ಯವಿದೆ. ಸಿಕ್ಕ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡಿದ್ದರೆ, ನಾವು ಇನ್ನಷ್ಟು ಬೇಗ ಜಯ ಸಾಧಿಸುತ್ತಿದ್ದೆವು. ಸೂಪರ್‌ ಓವರ್‌ನಲ್ಲಿ ಫೀಲ್ಡಿಂಗ್‌ ವೈಫಲ್ಯದಿಂದ ಒಂದು ಬೌಂಡರಿ ಬಿಟ್ಟದ್ದು, ಈ ಬಗ್ಗೆ ನಾವು ಹೆಚ್ಚಿನ ತರಬೇತಿ ಪಡೆಯಬೇಕಾಗಿದೆ. ಜಸ್ಪ್ರಿತ್‌ ಬುಮ್ರಾ ಬೌಲಿಂಗ್‌ನಲ್ಲಿ ಬೌಂಡರಿಗಳಲ್ಲಿ ಫೀಲ್ಡಿಂಗ್‌ ನಿಲ್ಲಿಸಿಕೊಳ್ಳುವುದರಿಂದ, ಎರಡೆರಡು ರನ್‌ಗಳನ್ನು ಪಡೆದುಕೊಳ್ಳಲು ನಾನು ಮತ್ತು ಡಿವಿಲಿಯರ್ಸ್ ಉತ್ತಮ ಆಯ್ಕೆ,” ಎಂದು ವಿರಾಟ್‌ ಕೊಹ್ಲಿ ತಿಳಿಸಿದರು.

ಇದಕ್ಕೂ ಮುನ್ನ ಆರೋನ್‌ ಫಿಂಚ್‌, ದೇವದತ್‌ ಪಡಿಕ್ಕಲ್‌ ಹಾಗೂ ಎಬಿ ಡಿವಿಲಿಯರ್ಸ್ ತಲಾ ಅರ್ಧಶತಕಗಳನ್ನು ಸಿಡಿಸಿದ್ದರು. ಆ ಮೂಲಕ ಆರ್‌ಸಿಬಿ 201 ರನ್‌ಗಳನ್ನು ದಾಖಲಿಸಿತ್ತು. ಶಿವಂ ದುಬೆ ಕೂಡ ಅದ್ಭುತವಾಗಿ ಬ್ಯಾಟಿಂಗ್‌ ಮಾಡಿದ್ದರು. ಅವರು ಕೇವಲ 10 ಎಸೆತಗಳಲ್ಲಿ 27 ರನ್‌ಗಳನ್ನು ಗಳಿಸಿದ್ದರು. ಮುಂಬೈ ಇಂಡಿಯನ್ಸ್ ಪರ ಇಶಾನ್‌ ಕಿಶಾನ್‌ 99 ರನ್‌ಗಳು ಹಾಗೂ ಕೀರನ್‌ ಪೊಲಾರ್ಡ್ 24 ಎಸೆತಗಳಲ್ಲಿ ಅಜೇಯ 60 ರನ್‌ಗಳನ್ನು ಸಿಡಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!