BengaluruEntertainment

‘90 ಹೊಡಿ ಮನೀಗ್ ನಡಿ’ ಬಿರಾದಾರ್ ಅಭಿನಯದ 500ನೇ ಚಿತ್ರ

ಬೆಂಗಳೂರು, ಸೆ 29 – ವೈಜನಾಥ್ ಬಿರಾದಾರ್ ತಮ್ಮ ಅಮೋಘ ಅಭಿನಯದ ಮೂಲಕ ಜನರ ಮೆಚ್ಚುಗೆಗೆ ಪಾತ್ರರಾಗಿರುವ ನಟ.

‘ಕನಸೆಂಬ ಕುದುರೆಯನೇರಿ’ ಚಿತ್ರದ ಅಭಿನಯಕ್ಕಾಗಿ ಅಂತರರಾಷ್ಟ್ರೀಯ ಪ್ರಶಸ್ತಿ ಪಡೆದಿರುವ, ಬಿರಾದಾರ್ ಎಂದೇ ಕನ್ನಡ ಚಿತ್ರರಂಗದಲ್ಲಿ ಪರಿಚಿತರಾಗಿರುವ ಇವರು, ಈಗ ’90 ಹೊಡಿ ಮನೀಗ್ ನಡಿ’ ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದು ಇವರ ಅಭಿನಯದ 500ನೇ ಚಿತ್ರ.

ಮದ್ಯಪಾನದಿಂದಾಗುವ ದುಷ್ಪರಿಣಾಮಗಳನ್ನು ಮನೋರಂಜನೆಯ ಮೂಲಕ‌ ಉತ್ತಮ ಸಂದೇಶ ಹೇಳುವ ಕಥಾಹಂದರ ಈ ಚಿತ್ರಕ್ಕಿದೆ. ಅಮ್ಮ ಟಾಕೀಸ್ ಬಾಗಲಕೋಟೆ ಸಂಸ್ಥೆ ಲಾಂಛನದಲ್ಲಿ ರತ್ನಮಾಲ ಬಾದರದಿನ್ನಿ‌ ಈ ಚಿತ್ರ‌ ನಿರ್ಮಿಸುತ್ತಿದ್ದಾರೆ.

ಉಮೇಶ್ ಬಾದರದಿನ್ನಿ‌‌ ಹಾಗೂ ನಾಗರಾಜ್ ಅರೆಹೊಳೆ ಜಂಟಿಯಾಗಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಕಥೆ ಹಾಗೂ ಸಂಭಾಷಣೆ ಉಮೇಶ್ ಬಾದರದಿನ್ನಿ ಅವರದ್ದು. ಚಿತ್ರಕಥೆಯನ್ನು ಇಬ್ಬರು ನಿರ್ದೇಶಕರು ಸೇರಿ ರಚಿಸಿದ್ದಾರೆ. ಈ ಹಿಂದೆ ‘ಬಿಡಲಾರೆ ಎಂದೂ ನಿನ್ನ’ ಚಿತ್ರ ನಿರ್ದೇಶಿಸಿದ್ದ ಉಮೇಶ ಬಾದರದಿನ್ನಿ ಅವರಿಗೆ ಇದು ಎರಡನೇ ಚಿತ್ರ.
‘ಹಾರೋ ಹಕ್ಕಿ’ ಹಾಗೂ ‘ಕೀಟ್ಲೆ ಕೃಷ್ಣ’ ಎಂಬ ಮಕ್ಕಳ ಚಿತ್ರಗಳನ್ನು ನಿರ್ದೇಶಿಸಿದ್ದ ಅನುಭವ ನಾಗರಾಜ್ ಅರೆಹೊಳೆ ಅವರಿಗಿದೆ.

ಈವರೆಗೂ ಅರ್ಧಭಾಗದಷ್ಟು ಚಿತ್ರೀಕರಣ ಬಾಗಲಕೋಟೆಯಲ್ಲಿ ನಡೆದಿದೆ. ಮುಂದಿನ ಭಾಗದ ಚಿತ್ರೀಕರಣ ಬೆಂಗಳೂರು, ಬಿಡದಿ ಮುಂತಾದ ಕಡೆ ನಡೆಯಲಿದೆ.
ಮೂರು ಹಾಡುಗಳಿದ್ದು, ಕಿರಣ್ ಶಂಕರ್ – ಶಿವು ಭೇರಗಿ ಸಂಗೀತ ನಿರ್ದೇಶನವಿದೆ.
ಡಾ. ವಿ.ನಾಗೇಂದ್ರ ಪ್ರಸಾದ್ ಎರಡು ಹಾಡುಗಳನ್ನು ಹಾಗೂ ಶಿವು ಭೇರಗಿ ಒಂದು ಹಾಡನ್ನು ಬರೆದಿದ್ದಾರೆ.

ಕೃಷ್ಣ ನಾಯ್ಕರ್ ಛಾಯಾಗ್ರಹಣ, ವೆಂಕಿ ಸಂಕಲನ, ರಾಜಾರಮೇಶ್ ಸಾಹಸ ನಿರ್ದೇಶನ ಹಾಗೂ ಭೂಷಣ್ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ವೈಜನಾಥ್ ಬಿರಾದಾರ್, ಕರಿಸುಬ್ಬು, ಧರ್ಮ, ನೀತು, ಪೂಜಾ, ಅಭಯ್ ವೀರ್, ಪ್ರಶಾಂತ್ ಸಿದ್ದಿ, ಆರ್ ಡಿ ಬಾಬು, ವಿವೇಕ್ ಜಂಬಗಿ ಮುಂತಾದವರ ತಾರಾಬಳಗವಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!