New DelhiEntertainment

ಸುಶಾಂತ್ ಸಾವಿನ ಕುರಿತು ಏಮ್ಸ್ ಮಹತ್ವದ ವರದಿ

ನವದೆಹಲಿ, ಸೆ 29- ಬಾಲಿವುಡ್ ನಟ ಸುಶಾಂತ್ ಸಿಂಗ್ ರಾಜಪೂತ್ ಆತ್ಮಹತ್ಯೆ ಪ್ರಕರಣ ಸಂಬಂಧ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಏಮ್ಸ್) ತನ್ನ ವರದಿ ಸಲ್ಲಿಸಿದೆ.

ಸುಶಾಂತ್ ಸಂಶಯಾಸ್ಪದ ಸಾವನ್ನು ಸುದೀರ್ಘವಾಗಿ ಪರಿಶೀಲಿಸಿರುವ ಏಮ್ಸ್ ವೈದ್ಯರು ಮಂಗಳವಾರ ತಮ್ಮ ಅಂತಿಮ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಸುಶಾಂತ್ ದೇಹದಲ್ಲಿ ಯಾವುದೇ ವಿಷ ಕಂಡು ಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಆತನ ಸಾವಿಗೆ ನೇಣು ಹಾಕಿಕೊಂಡಿರುವುದು ಕಾರಣ ಎಂದು ಏಮ್ಸ್ ಮೂಲಗಳು ದೃಢಪಡಿಸಿವೆ. ಸುಶಾಂತ್ ಡಿ ಎನ್‌ ಎ ಯನ್ನು ಕೂಲಂಕಷವಾಗಿ ಪರಿಶೀಲಿಸಿದ ನಂತರವೇ ವರದಿಯನ್ನು ಸಲ್ಲಿಸಿದ್ದೇವೆ. ಇದರಲ್ಲಿ ಯಾವುದೇ ಅನುಮಾನಗಳು ಇಲ್ಲ ಎಂದು ಹೇಳಿದ್ದಾರೆ. ಈ ಹಿಂದೆ ಮಹಾರಾಷ್ಟ್ರ ವೈದ್ಯರ ವರದಿಯಲ್ಲಿ ಕಂಡು ಬಂದ ಅಂಶಗಳು ತಮ್ಮ ಪರಿಶೀಲನೆಯಲ್ಲಿ ಕಂಡುಬಂದಿವೆ ಎಂದು ಅವರು ವಿವರಿಸಿದ್ದಾರೆ. ಮಾನಸಿಕ ಒತ್ತಡದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ವೈದ್ಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಜೂನ್ 14 ರಂದು ಮುಂಬೈನ ತಮ್ಮ ನಿವಾಸದಲ್ಲಿ ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ವರದಿಯಾಗಿತ್ತು. . ಆದರೆ, ಸುಶಾಂತ್ ಸಾವಿನ ಬಗ್ಗೆ ಆರಂಭದಲ್ಲಿ ಹಲವು ಅನುಮಾನಗಳು ವ್ಯಕ್ತವಾಗಿದ್ದವು. ತನ್ನ ಮಗನನ್ನು ಯಾರೋ ಕತ್ತು ಹಿಸುಕಿ ಹತ್ಯೆ ನಡೆಸಿದ್ದಾರೆ ಎಂದು ಸುಶಾಂತ್ ತಂದೆ ಬಿಹಾರ ಪೊಲೀಸರಿಗೆ ದೂರು ನೀಡಿದ್ದರು, ಹಲವು ವಿವಾದಗಳು ಹಾಗೂ ಆರೋಪಗಳ ನಡುವೆ ಸುಶಾಂತ್ ಪ್ರಕರಣದ ಬಗ್ಗೆ ಸಿಬಿಐ ತನಿಖೆಗೆ ಕೇಂದ್ರ ಸರ್ಕಾರ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿಯೇ ಏಮ್ಸ್ ತನ್ನ ವರದಿಯನ್ನು ಸಲ್ಲಿಸಿದೆ.

ಮತ್ತೊಂದೆ ಕಡೆ ಸುಶಾಂತ್ ಸಾವಿನ ಪ್ರಕರಣದ ನಂತರ ನಂತರ ಬೆಳಕಿಗೆ ಬಂದಿರುವ ಡ್ರಗ್ಸ್ ಪ್ರಕರಣ ತನಿಖೆ ಹಂತದಲ್ಲಿದೆ. ಈ ಪ್ರಕರಣದಲ್ಲಿ ಮೊದಲಿನಿಂದಲೂ ಆರೋಪ ಎದುರಿಸುತ್ತಿರುವ ನಟಿ ರಿಯಾ ಚಕ್ರವರ್ತಿ ನೀಡಿದ್ದ ಹೇಳಿಕೆ ಆಧರಿಸಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ತನಿಖೆ ನಡೆಸುತ್ತಿದೆ. ಮತ್ತೊಂದೆಡೆ ಸಿಬಿಐ ಕೂಡ ತನಿಖೆ ನಡೆಸುತ್ತಿದೆ.

ಕತ್ತು ಹಿಸುಕಿ ಸುಶಾಂತ್ ಸಿಂಗ್ ರಾಜ್ ಪುತ್ ಕೊಲೆ ಮಾಡಲಾಗಿದೆ ಎಂದು ಸುಶಾಂತ್ ಕುಟುಂಬದ ವಕೀಲ ವಿಕಾಸ್ ಸಿಂಗ್ ಆರೋಪಿಸಿದ್ದಾರೆ. ತಾವು ಕಳುಹಿಸಿದ್ದ ಸುಶಾಂತ್ ಮೃತ ದೇಹದ ಚಿತ್ರಗಳನ್ನು ನೋಡಿದ ಏಮ್ಸ್ ಹಿರಿಯರು ವೈದ್ಯರು ಈ ವಿಷಯ ಸ್ಪಷ್ಟಪಡಿಸಿದ್ದರು. ಈ ಪ್ರಕರಣದಲ್ಲಿ ಸಿಬಿಐ ನೆಡಸುತ್ತಿರುವ ತನಿಖೆಯಲ್ಲಿನ ವಿಳಂಬ ಬೇಸರ ತಂದಿದೆ. ಸುಶಾಂತ್ ಸಂಶಯಾಸ್ಪದ ಸಾವಿನ ತನಿಖೆಯನ್ನು ಬದಿಗಿಟ್ಟು, ಎನ್ ಸಿ ಬಿ ಡ್ರಗ್ಸ್ ಕೇಸಿನ ಬಗ್ಗೆ ಹೆಚ್ಚಿನ ದೃಷ್ಟಿ ಹರಿಸುತ್ತಿದೆ ಎಂದು ಅವರು ಅಸಮಧಾನ ವ್ಯಕ್ತಪಡಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!