United Nations

ಸಂಖ್ಯೆ 10 ಲಕ್ಷ ತಲುಪಿರುವುದು ‘ಸಂಕಟ ಮೈಲಿಗಲ್ಲು’- ವಿಶ್ವಸಂಸ್ಥೆ ಮುಖ್ಯಸ್ಥ ಗುಟೇರಸ್

ವಿಶ್ವಸಂಸ್ಥೆ, ಸೆ 29 – ಕೊರೊನಾ ವೈರಸ್ ಸೋಂಕಿನಿಂದ ವಿಶ್ವದಾದ್ಯಂತ ಸಾವಿನ ಸಂಖ್ಯೆ 10 ಲಕ್ಷ ತಲುಪಿರುವುದು ‘ಸಂಕಟದ ಮೈಲಿಗಲ್ಲು’ ಎಂದು ವಿಶ್ವಸಂಸ್ಥೆ ಮಹಾಕಾರ್ಯದರ್ಶಿ ಅಂಟೊನಿಯೊ ಗುಟೆರೆಸ್ ನೋವಿನಿಂದ ಹೇಳಿದ್ದಾರೆ.

ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ನವೀಕೃತ ವರದಿಯಂತೆ ವಿಶ್ವಾದ್ಯಂತ ಕೊವಿಡ್ ಸಾವುಗಳ ಸಂಖ್ಯೆ 10 ಲಕ್ಷ ದಾಟಿದ್ದು, 3 ಕೋಟಿ 30 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ಇದುವರೆಗೆ ದೃಢಪಟ್ಟಿವೆ. ಸೋಂಕಿನಿಂದ ಈವರೆಗೆ 2 ಕೋಟಿ 30 ಲಕ್ಷಕ್ಕೂ ಹೆಚ್ಚು ಜನರು ಚೇತರಿಸಿಕೊಂಡಿದ್ದಾರೆ.

‘ನಮ್ಮ ಪ್ರಪಂಚ ಸಂಕಟದ ಮೈಲಿಗಲ್ಲು ತಲುಪಿದೆ. ಕೊವಿಡ್ ಸಾಂಕ್ರಾಮಿಕ ರೋಗಕ್ಕೆ 10 ಲಕ್ಷಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ. ಇದು ತುಂಬಾ ನೋವಿನ ಸಂಗತಿಯಾಗಿದೆ. ಈ ಕಾಯಿಲೆಯ ತೀವ್ರತೆಯಿಂದ ಹೆಚ್ಚು ನೋವು ತರುತ್ತಿದೆ. ಪ್ರತಿಯೊಬ್ಬರೂ ದೃತಿಗೆಡದೆ, ಜೀವನದ ದೃಷ್ಟಿಯನ್ನು ಎಂದಿಗೂ ಕಳೆದುಕೊಳ್ಳಬಾರದು.’ ಎಂದು ಗುಟೆರೆಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಆತಂಕಕಾರಿ ವಿಷಯವೆಂದರೆ ವೈರಸ್ ಹರಡುವಿಕೆ ಅಂತ್ಯ ಯಾವಾಗ ಎಂದು ಗೊತ್ತಾಗುತ್ತಿಲ್ಲ. ಉದ್ಯೋಗ ನಷ್ಟ, ಶಿಕ್ಷಣಕ್ಕೆತೊಂದರೆ, ಜೀವನದಲ್ಲಿ ತೊಂದರೆ ಮುಂದುವರೆದಿದೆ. ನಾವು ಈ ಸವಾಲನ್ನು ಜಯಿಸಬಹುದು. ಆದರೆ ನಾವು ತಪ್ಪುಗಳಿಂದ ಕಲಿಯಬೇಕು. ಜವಾಬ್ದಾರಿಯುತ ನಾಯಕತ್ವ, ವಿಜ್ಞಾನ, ಸಹಕಾರದಿಂದ ಇದನ್ನು ಸಾಧಿಸಬಹುದಾಗಿದೆ.’

ಕಡ್ಡಾಯವಾಗಿ ಮುಖಗವಸು ಧರಿಸುವುದು, ವ್ಯಕ್ತಿಗತ ಅಂತರ ಮತ್ತು ಕೈ ಯನ್ನು ಆಗಾಗ್ಗೆ ತೊಳೆಯುತ್ತಿರುವಂತೆ ಜನರಿಗೆ ಗುಟೆರೆಸ್ ಕರೆ ನೀಡಿದ್ದಾರೆ.

Leave a Reply

Your email address will not be published. Required fields are marked *

Back to top button
error: Content is protected !!