Lucknow

ಉತ್ತರ ಪ್ರದೇಶ ಹತ್ರಾಸ್ ಅತ್ಯಾಚಾರ ಪ್ರಕರಣ: ಸಂತ್ರಸ್ತೆ ದಲಿತ ಯುವತಿ ಸಾವು

ಲಕ್ನೋ, ಸೆ.29- ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ದಲಿತ ಯುವತಿ ಇಂದು ಬೆಳಗ್ಗೆ ದೆಹಲಿಯ ಆಸ್ಪತ್ರೆಯ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ.

ಉತ್ತರ ಪ್ರದೇಶದ ಹತ್ರಾಸ್ ಎಂಬಲ್ಲಿ ಹತ್ತೊಂಬತ್ತು ವರ್ಷದ ದಲಿತ ಯುವತಿಯ ಮೇಲೆ ನಾಲ್ವರು ಮೇಲ್ವರ್ಗದ ಯುವಕರು ಅತ್ಯಾಚಾರ ವೆಸಗಿ ಕೊಲೆಯತ್ನ ನಡೆಸಿದ್ದರು.
ಕಳೆದ ಮೂರು ದಿನಗಳಿಂದ ಅಲಿಘಢ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ವೆಂಟಿಲೇಟರ್ ಸಹಾಯದಿಂದ ಚಿಕಿತ್ಸೆ ಪಡೆಯುತ್ತಿದ್ದ ಯುವತಿಯನ್ನು ನಿನ್ನೆ ದಹೆಲಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಬೆಳಗ್ಗೆ ಹುಡುಗಿ ಅಲ್ಲಿ ಕೊನೆಯುಸಿರೆಳೆದಿದ್ದಾಳೆ.

ಜಾನುವಾರುಗಳಿಗೆ ಮೇವು ಸಂಗ್ರಹಿಸಲು ಹೋಗಿದ್ದಾಗ ಸೆಪ್ಟಂಬರ್ 14ರಂದು ನಾಲ್ವರು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಅತ್ಯಾಚಾರ ವೆಸಗಿದ ಬಳಿಕ ಆಕೆಯ ಬೆನ್ನು ಮೂಳೆಯನ್ನು ದುಷ್ಕರ್ಮಿಗಳು ಮುರಿದು, ನಾಲಗೆ ಕತ್ತರಿಸಿ, ಕೊಲೆಯತ್ನ ನಡೆಸಿದ್ದರು ಎಂಬುದು ವೈದ್ಯಕೀಯ ಪರೀಕ್ಷೆಯಿಂದ ದೃಢಪಟ್ಟಿದೆ.

ಸೆಪ್ಟೆಂಬರ್ 14 ರಂದು ಈ ಘಟನೆ ನಡೆದಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹತ್ರಾಸ್ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಾಂತ್ ವೀರ್ ತಿಳಿಸಿದ್ದಾರೆ. ಸಂತ್ರಸ್ತೆ ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದವಳಾಗಿದ್ದು, ಅತ್ಯಾಚಾರಿಗಳು ಮೇಲ್ವರ್ಗಕ್ಕೆ ಸೇರಿದವರು ಎಂದು ತಿಳಿದುಬಂದಿದೆ.

ತಾಯಿ, ಸಹೋದರಿ ಮತ್ತು ಅಣ್ಣ ಹುಲ್ಲು ತರಲು ಹೊಲಕ್ಕೆ ಹೋಗಿದ್ದರು. ನನ್ನ ಸಹೋದರ ದೊಡ್ಡ ಬಂಡಲ್ ಹುಲ್ಲಿನೊಂದಿಗೆ ಮೊದಲು ಮನೆಗೆ ಆಗಮಿಸಿದ್ದಾನೆ. ಆದರೆ ನನ್ನ ತಾಯಿ ಮತ್ತು ಸಹೋದರಿ ಇನ್ನೂ ಹುಲ್ಲು ಕತ್ತರಿಸುತ್ತಲೇ ಇದ್ದರು. ಅವರಿಬ್ಬರೂ ಸ್ವಲ್ಪ ದೂರದಲ್ಲಿದ್ದರು. ಹಿಂದಿನಿಂದ ಬಂದ ನಾಲ್ಕೈದು ಜನ ನನ್ನ ತಂಗಿಯ ದುಪಟ್ಟಾವನ್ನು ಅವಳ ಕುತ್ತಿಗೆಗೆ ಬಿಗಿದು ಬಜ್ರಾ ಮೈದಾನದೊಳಗೆ ಎಳೆದೊಯ್ದರು ಎಂದು ಮೃತ ಹುಡುಗಿಯ ಸಹೋದರ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!