New Delhi

ದೇಶದಲ್ಲಿ ಇನ್ನೂ ನಿಂತಿಲ್ಲ ನಕಲಿ ನೋಟುಗಳ ಹಾವಳಿ

ನವದೆಹಲಿ, ಸೆ 28- ದೇಶದಲ್ಲಿ ನೋಟ್ ಬ್ಯಾನ್ ಆದ ಬಳಿಕ ಬ್ಯಾಂಕ್ ಗಳಲ್ಲಿ ನಕಲಿ ನೋಟುಗಳ ಚಲಾವಣೆ ನಿಂತೇ ಹೋಗಿದೆ ಎಂಬ ಭಾವನೆ ಸಹಜವಾಗಿ ಎಲ್ಲ ಕಡೆ ಕೇಳಿ ಬಂದಿತ್ತು.

ಆದರೆ ಅಸಲಿ ಕತೆಯೆ ಬೇರೆಯಾಗಿದೆ. ನೋಟು ಬ್ಯಾನ್ ಬಳಿಕವೂ ದೇಶದಲ್ಲಿ ಬರೋಬರಿ 1 ಕೋಟಿ ರೂಪಾಯಿ ಮೌಲ್ಯದ ನಕಲಿ ನೋಟುಗಳು ದೇಶದ ವಿವಿಧ ಬ್ಯಾಂಕುಗಳಲ್ಲಿ ಜಮೆಯಾಗಿದ್ದು, ನಂತರ ಇವು ಆರ್ ಬಿಐ ಮಡಿಲು ಸೇರಿದೆ ಎನ್ನಲಾಗಿದೆ.

ವಿವಿಧ ಬ್ಯಾಂಕ್ಗಳಿಂದ ಆರ್ಬಿಐಗೆ ಜಮಾವಣೆಯಾಗಿರುವ ನಕಲಿ ನೋಟುಗಳಲ್ಲಿ. 9,753 ನೋಟುಗಳು 500 ರೂಪಾಯಿ ಮುಖಬೆಲೆಯವಾಗಿದ್ದರೆ, 5,783 ನೋಟುಗಳು 1 ಸಾವಿರ ರೂ. ಮುಖಬೆಲೆ ಹೊಂದಿವೆ.

ಇವೆರೆಡು ಸೇರಿ ಒಟ್ಟು 1.05 ಕೋಟಿ ರೂ. ಮೌಲ್ಯದ ನಕಲಿ ನೋಟುಗಳು ಆರ್ಬಿಐನಲ್ಲಿ ಪತ್ತೆಯಾಗಿವೆ. ಈ ಹಿನ್ನೆಲೆ ಲಕ್ನೌದಲ್ಲಿನ ರಿಸರ್ವ್ ಬ್ಯಾಂಕ್ ಆಪ್ ಇಂಡಿಯಾದ ಸಹಾಯಕ ಮ್ಯಾನೇಜರ್ ರೊಬ್ಬರು ಮರವಿ ನಗರದ ಪೊಲೀಸ್ ಠಾಣೆಯೊಂದರಲ್ಲಿ ದೂರು ದಾಖಲಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!