New Delhi

ಬಿಜೆಪಿ ಅನ್ಯಾಯದಿಂದ ರೈತರನ್ನು ಬಚಾವ್ ಮಾಡಿ: ಸೋನಿಯಾ

ನವದೆಹಲಿ, ಸೆ 28- ದೇಶದಾದ್ಯಂತ ರೈತರ ಆಕ್ರೋಶಕ್ಕೆ ಗುರಿಯಾಗಿರುವ ಕೃಷಿ ಕಾಯಿದೆಗಳನ್ನು ನಿರ್ಬಂಧಿಸಲು ಪರ್ಯಾಯ ಕ್ರಮ ಕೈಗೊಳ್ಳಬೇಕೆಂದು ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಿಗೆ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಸೂಚಿಸಿದ್ದಾರೆ.

ಈ ವಿಚಾರವಾಗಿ ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕ ಕೆ.ಸಿ.ವೇಣುಗೋಪಾಲ್, ‘ಕೇಂದ್ರದ ಕೃಷಿ ಕಾನೂನುಗಳಿಗೆ ಕಡಿವಾಣ ಹಾಕುವ ಸಾಧ್ಯತೆಗಳ ಬಗ್ಗೆ ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳು ಪರಾಮರ್ಶೆ ಮಾಡಬೇಕು ಎಂದು ಹೇಳಿದ್ದಾರೆ.

ಕನಿಷ್ಠ ಬೆಂಬಲ ಬೆಲೆ ರದ್ದತಿಗಳಂತಹ ರೈತ ವಿರೋಧಿ ನೀತಿಗಳು ಈ ಕೃಷಿ ಕಾನೂನಿನಲ್ಲಿದೆ. ಇವುಗಳ ಮೇಲೆ ನಿರ್ಬಂಧ ಹಾಕಿ ಕಾಂಗ್ರೆಸ್ ಆಡಳಿತದ ರಾಜ್ಯಗಳಲ್ಲಿ ಬಿಜೆಪಿ ರೈತ ಸಮುದಾಯಕ್ಕೆ ಮಾಡುತ್ತಿರುವ ಭಾರಿ ಅನ್ಯಾಯ, ವಂಚನೆಯಿಂದ ರೈತರನ್ನು ಬಚಾವ್ ಮಾಡಬೇಕು ಎಂದೂ ಸೋನಿಯಾ ಕಿವಿಮಾತು ಹೇಳಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!