Kalaburagi

ಸಂಬರಗಿ ವಿರುದ್ಧ ಕಲಬುರಗಿಯಲ್ಲಿ ದೂರು‌

ಕಲಬುರಗಿ, ಸೆ.28 – ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ, ಸಾಮಾಜಿಕ‌ ಜಾಲತಾಣದಲ್ಲಿ ಸಮುದಾಯ ನಿಂದನೆ ಮಾಡುವ ಮೂಲಕ ಗಲಭೆಗೆ ಪ್ರಚೋದನೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಭೀಮ್ ಆರ್ಮಿ ಜಿಲ್ಲಾಧ್ಯಕ್ಷ, ನ್ಯಾಯವಾದಿ ನಾಗೇಶ್ ಎಂ.ಕೊಳ್ಳಿ ಅವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇಂದು ರೈತರ ಪರವಾಗಿ ಪ್ರತಿಭಟನೆ ನಡೆಸುತ್ತಿದ್ದ ಪರಿಶಿಷ್ಟ ಜಾತಿ, ಪಂಗಡ, ಶೋಷಿತ ಸಮುದಾಯಕ್ಕೆ ಸೇರಿದ್ದ ಸಂಘಟನೆಗಳನ್ನು ಅವಹೇಳನ ಮಾಡುವ ಮೂಲಕ ಗಲಭೆಗೆ ಪ್ರಚೋದನೆ ನೀಡಿದ್ದಾರೆ ಎಂದು ಅವರು ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ‌.

ದಲಿತ ಸಮುದಾಯದ ಭೀಮ್ ಆರ್ಮಿ ಪ್ರತಿಭಟನೆ ನೇತೃತ್ವ ವಹಿಸಿಕೊಂಡಿದೆ ಎಂಬ ಮಾಹಿತಿ ಅರಿಯುತ್ತಿದ್ದಂತೆ ಪ್ರಶಾಂತ್ ಸಂಬರಗಿ, ಈ ಹೋರಾಟವನ್ನು ಪಂಕ್ಚರ್ ಹಾಕೋ ವ್ಯಕ್ತಿಗಳು ಮಾಡುವ ಪ್ರತಿಭಟನೆ ಎಂದು ಜಾತಿ ನಿಂದನೆ ಮಾಡಿದ್ದಾರೆ. ಪಂಕ್ಚರ್ ಅಂಗಡಿಯವನಿಗೂ ಈ ಕೃಷಿ ಮಸೂದೆಗೂ ಏನು ಸಂಬಂಧವಿದೆ ? ನಾನು ಈ ಮುಷ್ಕರ ವನ್ನು ಖಂಡಿಸುತ್ತೇನೆ ಎಂದು ಅವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಇದೊಂದು ಸಮುದಾಯ ವಿರೋಧಿ ನಿಂದನೆ ಆಗಿದೆ ಎಂದು ನ್ಯಾಯವಾದಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಗಲಭೆಗೆ ಸಂಚು ರೂಪಿಸಿರುವ ಪ್ರಶಾಂತ್ ಸಂಬರಗಿ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಅವರು ದೂರಿನಲ್ಲಿ ಆಗ್ರಹಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!