San Francisco

36 ಲಕ್ಷ ಎಕರೆಗೆ ವ್ಯಾಪಿಸಿದ ಕಾಡ್ಗಿಚ್ಚು

ಸ್ಯಾನ್ ಫ್ರಾನ್ಸಿಸ್ಕೋ, ಸೆ 27 – ಕ್ಯಾಲಿಫೋರ್ನಿಯಾದಲ್ಲಿ ಕಾಡ್ಗಿಚ್ಚಿನಿಂದ ಈ ವರ್ಷ ಇಲ್ಲಿಯವರೆಗೆ 36 ಲಕ್ಷ ಎಕರೆಗೂ ಹೆಚ್ಚು ಭೂಮಿ ಸುಟ್ಟುಹೋಗಿದ್ದು, 26 ಜನರು ಸಾವನ್ನಪ್ಪಿದ್ದಾರೆ ಎಂದು ಕ್ಯಾಲಿಫೋರ್ನಿಯಾ ಅರಣ್ಯ ಮತ್ತು ಅಗ್ನಿಶಾಮಕ ಇಲಾಖೆ ತಿಳಿಸಿದೆ.

ರಾಜ್ಯದ ಭಾರೀ ಪ್ರಮಾಣದ ಬೆಂಕಿ, ಮೆಂಡೊಸಿನೊ, ಹಂಬೋಲ್ಟ್ ಮತ್ತು ಲೇಕ್ ಕೌಂಟಿಗಳಲ್ಲಿ 41 ದಿನಗಳಿಂದ ಸಕ್ರಿಯವಾಗಿದ್ದು, ಭಾನುವಾರ ಮಧ್ಯಾಹ್ನದ ವೇಳೆಗೆ 8,73,079 ಎಕರೆಗೆ ವ್ಯಾಪಿಸಿದೆ.

ಕಾಡ್ಗಿಚ್ಚಿನಿಂದ 56 ಕಟ್ಟಡಗಳು ಸುಟ್ಟುಹೋಗಿದ್ದು, ಸಾವಿರಾರು ಸ್ಥಳಾಂತರಗೊಂಡಿದ್ದಾರೆ. ಸುಮಾರು 1,750 ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ಶಮನಕ್ಕೆ ಸಾಹಸ ಪಡುತ್ತಿದ್ದಾರೆ.

ಬುಟ್ಟೆ ಮತ್ತು ಪ್ಲುಮಾಸ್ ಕೌಂಟಿಗಳಲ್ಲಿ ಉರಿಯುತ್ತಿರುವ ಅಗ್ನಿಜ್ವಾಲೆಗಳಿಂದ 15 ಜನರು ಸಾವನ್ನಪ್ಪಿದ್ದು, 1,147 ವಸತಿ ಮತ್ತು ವಾಣಿಜ್ಯ ಕಟ್ಟಡಗಳಿಗೆ ಹಾನಿಯಾಗಿದೆ. ಕ್ಯಾಲಿಫೋರ್ನಿಯಾ ಇತಿಹಾಸದಲ್ಲೇ ಐದನೇ ಭಾರೀ ಪ್ರಮಾಣದ ಬೆಂಕಿ ಇದಾಗಿದೆ. ಭಾನುವಾರ ಬೆಳಿಗ್ಗೆ ವೇಳೆಗೆ 3,05,881 ಎಕರೆ ಪ್ರದೇಶ ಸುಟ್ಟುಹೋಗಿದೆ.

ಉತ್ತರ ಕ್ಯಾಲಿಫೋರ್ನಿಯಾದ ನಾಪಾ ಕೌಂಟಿಯಲ್ಲಿ ಭಾನುವಾರ ಬೆಳಿಗ್ಗೆ ಕಾಡ್ಗಿಚ್ಚಿನಿಂದ 1,200 ಎಕರೆ ಭೂಮಿ ಸುಟ್ಟುಹೋಗಿದೆ. ಇದರಿಂದ ಸಾವಿರಾರು ಜನರು ಸ್ಥಳಾಂತರಗೊಂಡಿದ್ದಾರೆ.

ಹೆಚ್ಚಿನ ತಾಪಮಾನ ಮತ್ತು ಸಂಭಾವ್ಯ ಗಾಳಿಯಿಂದ ಮತ್ತೆ ಬೆಂಕಿವ್ಯಾಪಿಸುವ ಎಚ್ಚರಿಕೆಯನ್ನು ಅಧಿಕಾರಿಗಳು ನೀಡಿದ್ದಾರೆ.

Leave a Reply

Your email address will not be published. Required fields are marked *

Back to top button
error: Content is protected !!