Bengaluru

ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ; ಕಾಯ್ದೆಯಲ್ಲಿ ಅಗತ್ಯ ಮಾರ್ಪಾಡು ಮಾಡಲು ಸಿದ್ಧ; ಯಡಿಯೂರಪ್ಪ

ಬೆಂಗಳೂರು, ಸೆ‌ 28- ರೈತರಿಂದಾಗಿಯೇ ತಾವು ಇಂದು ಮುಖ್ಯಮಂತ್ರಿ ಸ್ಥಾನದಲ್ಲಿ ಬಂದು ಕುಳಿತಿದ್ದೇನೆ. ತಮ್ಮಿಂದ ಯಾವ ಕಾರಣಕ್ಕೂ ಅನ್ನದಾತರಿಗೆ ಅನ್ಯಾಯವಾಗುವುದಿಲ್ಲ. ಖುದ್ದು ನಾನೇ ರಾಜ್ಯಾದ್ಯಂತ ಪ್ರವಾಸ ಮಾಡಿ ಕಾಯ್ದೆಯಿಂದ ಆಗುವ ಅನುಕೂಲ ಹಾಗೂ ಕಾಂಗ್ರೆಸ್ ನಾಯಕರ ದ್ವಿಮುಖ ನೀತಿ ಬಗ್ಗೆ ರೈತರಿಗೆ ಮನವರಿಕೆ ಮಾಡಿಕೊಡುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರಕಟಿಸಿದ್ದಾರೆ.

ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎಪಿಎಂಸಿ ಕಾಯ್ದೆ ತಿದ್ದುಪಡಿ ಭೂಸುಧಾರಣಾ ಕಾಯ್ದೆ ತಿದ್ದುಪಡಿ ಬಗ್ಗೆ ರೈತ ಸಂಘಟನೆಗಳು, ಕಾಂಗ್ರೆಸ್ ನ ಕೆಲವು ಪಿತೂರಿ ನಡೆಸಿ ಧರಣಿ ಸತ್ಯಾಗ್ರಹ, ಬಂದ್ ಮಾಡುತ್ತಿದ್ದಾರೆ ಎಂದು ಯಡಿಯೂರಪ್ಪ ಅಸಮಾಧಾನ ವ್ಯಕ್ತಪಡಿಸಿದರು..

ರೈತ ಮುಖಂಡರನ್ನು ವಿಧಾನಸೌಧಕ್ಕೆ ಕರೆಸಿ ಈ ಕಾಯ್ದೆಯಿಂದ ಹೇಗೆ ಅನುಕೂಲ ಆಗಲಿದೆ ಎಂದು ಮನವರಿಕೆ ಮಾಡುವ ಪ್ರಯತ್ನ ಮಾಡಿದೆ, ಆದರೆ ಅವರು ಬಂದ್ ಮಾಡಲೇಬೇಕು ಎನ್ನುವ ನಿಶ್ಚಯ ಮಾಡಿ ಬಂದಿದ್ದರು, ಈಗ ಬರೀ ಕಾಫಿ ಟೀ ಕೊಟ್ಟು ಕಳಿಸಿದರು ಚರ್ಚೆಗೆ ಕೊಟ್ಟಿಲ್ಲ ಎನ್ನುತ್ತಿದ್ದಾರೆ. ಬಂದವರಿಗೆ ಕಾಫಿ ಟೀ ಕೊಡಬಾರದಾ? ಚರ್ಚೆಗೆ ಅವಕಾಶ ಕೊಟ್ಟಿದೆ, ಆದರೆ ಅವರು ಏನೂ ಹೇಳಲಿಲ್ಲ ಯಾವ ಸಲಹೆಯನ್ನು ಕೂಡಲಿಲ್ಲ ಹಾಗಾಗಿ ಸಭೆ ವಿಫಲವಾಯಿತು ಎಂದು ಸಮರ್ಥನೆ ನೀಡಿದರು,

ರೈತನ ಮಗನಾಗಿ ನಾಲ್ಕನೇ ಬಾರಿ ಮುಖ್ಯಮಂತ್ರಿ ಆಗಿದ್ದೇನೆ, ತಮ್ಮಿಂದ ಅನ್ನ ಕೊಡುವ ಅನ್ನದಾತರಿಗೆ ಯಾವುದೇ ರೀತಿ ಅನ್ಯಾಯವಾಗಲು ಬಿಡುವುದಿಲ್ಲ. ಅಧಿಕಾರಕ್ಕೆ ಅಂಟಿಕೊಂಡು ಕೂರುವುದಿಲ್ಲ. ರೈತರ ಪರ ಇರುವವನು ನಾನು, ನಾಡಿನ ಅನ್ನದಾತನ ಭವಿಷ್ಯದ ದೃಷ್ಟಿಯಿಂದ, ವಿಧಾನಮಂಡಲದಲ್ಲಿ ಸಾಕಷ್ಟು ವರ್ಷ ನಡೆಸಿ ತಿದ್ದುಪಡಿ ತರಲಾಗಿದೆ ಎಂದು ಕಾಯ್ದೆಯನ್ನು ಸಮರ್ಥಿಸಿಕೊಂಡರು.

ತಮ್ಮ ಮೇಲೆ ಎಪಿಎಂಸಿ ಕೇಸ್ ಇವೆ: ನನ್ನ ಬೆಳೆ ನನ್ನ ಹಕ್ಕು ಎನ್ನುವ ಕಾಯ್ದೆ ತಿದ್ದುಪಡಿಯಿಂದ ರೈತರು ತಮ್ಮ ಬೆಳೆಗಳನ್ನು ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು, ಎಪಿಎಂಸಿ ಅಥವಾ ನೇರವಾಗಿ ದೇಶದ ಯಾವುದೇ ಭಾಗಕ್ಕೆ ಹೋಗಿ ಮಾರಾಟ ಮಾಡಬಹುದು, ರೈತರಿಗೆ ಈ ಅವಕಾಶ ಸಿಗಬೇಕು ಎಂದು ಹೋರಾಟ ಮಾಡಿಕೊಂಡು ಬಂದವನು ನಾನು, ಒಂದು ಕಾಲದಲ್ಲಿ ಬೇರೆ ಜಿಲ್ಲೆಗೆ ಹೋಗಿ ಮಾರಾಟ ಮಾಡಿದರೆ ಕೇಸ್ ಹಾಕುತ್ತಿದ್ದರು, ನನ್ನ ಮೇಲೆ ಕೇಸ್ ಹಾಕಿದ್ದಾರೆ, ಈಗಲೂ ಕೇಸ್ ಗಳು ಇವೆ, ಆದರೆ ಇನ್ಮುಂದೆ ಇಂತಹ ಕೇಸು ರೈತರ ಮೇಲೆ ಹಾಕಲು ಅವಕಾಶವಿಲ್ಲ ಎಂದರು.

ಎಪಿಎಂಸಿಗೆ ಆರ್ಥಿಕ ಸಮಸ್ಯೆ ಆದರೆ ಭರಿಸಲು ಸರ್ಕಾರ ಸಿದ್ಧ; ಎಲ್ಲಿ ಬೇಕೋ ಅಲ್ಲಿ ಖುಷಿ ಬಂದ ಕಡೆ ಮಾರಾಟ ಮಾಡುವ ‘ಸ್ವಾತಂತ್ರ್ಯ ರೈತರಿಗೆ ಕೊಡಲಾಗಿದೆ ಇದು ಐತಿಹಾಸಿಕ ನಿರ್ಣಯ,ಇದರ ಬಗ್ಗೆ ತಪ್ಪು ಕಲ್ಪನೆ ಬೇಡ,ಈವರೆ ಎಪಿಎಂಸಿಗಳಲ್ಲಿ ದಲ್ಲಾಳಿಗಳ ಹಾವಳಿಯಿತ್ತು. ನಾನು ಎಪಿಎಂಸಿ ಅಧ್ಯಕ್ಷನಾಗಿದ್ದವನು, ಅಲ್ಲದೆ ನನ್ನ ಉತ್ಪನ್ನವನ್ನು ನಾನು ಎಪಿಎಂಸಿ ಕೊಟ್ಟಿದ್ದೇನೆ ಹಾಗಾಗಿ ನನಗೆ ಎಲ್ಲ ಗೊತ್ತಿದೆ. ಎಪಿಎಂಸಿ ಬಾಗಿಲು ಮುಚ್ಚಲ್ಲ ಈಗಲೂ ಹೋಗಿ ಮಾರಾಟ ಮಾಡಬಹುದು, ಒಂದು ವೇಳೆ ವಹಿವಾಟು ಕಡಿಮೆಯಾಗಿ ಆರ್ಥಿಕ ಸಮಸ್ಯೆ ಎದುರಾದರೆ ವೇತನ, ಸಾರಿಗೆ ವೆಚ್ಚಕ್ಕೆ ಕೊರತೆಯಾದರೆ ಅದನ್ನು ತುಂಬಿಕೊಡಲು ಸರ್ಕಾರ ಸಿದ್ಧವಿದೆ ಎಂದು ಸಿಎಂ ಭರವಸೆ ನೀಡಿದರು,

ಭೂ ಸುಧಾರಣಾ ಕಾಯ್ದೆ ತಿದ್ದುಪಡಿ 54 ಎಕರೆ ಸೀಮಿತವಾಗಿದೆ, ನೀರಾವರಿ ಭೂಮಿ ಕೊಂಡುಕೊಂಡರೆ ಅದನ್ನು ನೀರಾವರಿಗೆ ಬಳಸಬೇಕು ಎನ್ನುವ ಷರತ್ತು ಹಾಕಲಾಗಿದೆ, ಎಸ್ಸಿಎಸ್ಟಿ ಜಮೀನು ಕೊಳ್ಳಲು ಯಾರಿಗೂ ಅಧಿಕಾರ ಇಲ್ಲ, ಸಣ್ಣ ಅತಿಸಣ್ಣ ರೈತರಿಗೆ ಸಮಸ್ಯೆಯಾಗಿ ರೀತಿ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. 18-20 ಲಕ್ಷ ಎಕರೆ ಭೂಮಿ ಸಾಗುವಳಿ ಆಗದ ಬಂಜರು ಭೂಮಿಯಾಗಿ, ಉಳಿದಿದೆ,ಈಗ ಈ ಕಾಯ್ದೆಯಿಂದ ಆ ಭೂಮಿಯಲ್ಲಿ ಕೃಷಿ ಮಾಡಬಹುದು, ಕೈಗಾರಿಕೆಗೆ ಭೂಮಿ ಅಗತ್ಯ ಕೈಗಾರಿಕೆಗಳು ಬಂದಾಗ ನಿರೋದ್ಯೋಗ ಸಮಸ್ಯಗೆ ಪರಿಹಾರವಾಗಲಿದೆ, ಇದೆಲ್ಲಾ ಮನಸ್ಸಿನಲ್ಲಿ ಇಟ್ಟುಕೊಂಡು ತಿದ್ದುಪಡಿ ತರಲಾಗಿದೆ ಎಂದು ಕಾಯ್ದೆಯನ್ನು ಸಮರ್ಥಿಸಿಕೊಂಡರು.

ರೈತ ಸಂಘಟನೆಗಳು ಅನಾವಶ್ಯಕವಾಗಿ ರೈತರನ್ನು ಗೊಂದಲಕ್ಕೆ ಸಿಲುಕಿಸಬಾರದು, ದೇಶದ ರೈತ ಸಮೂಹಕ್ಕೆ ಅನುಕೂಲ ಆಗಲಿ ಎಂದು ಮೋದಿ ಈ ಕಾಯ್ದೆ ತಂದಿದ್ದಾರೆ. ರೈತ ಸಮುದಾಯ ಈ ರೀತಿ ಅಡ್ಡ ದಾರಿಗೆ ತರುವವರಿಂದ ‘ಮರುಳಾಗಬೇಡಿ,ನಾನು ನಿಮ್ಮೊಂದಿಗಿದ್ದೇನೆ ನಿಮ್ಮ ಹಿತಕ್ಕೆ ದಕ್ಕೆಯಾಗಲು ಬಿಡುವುದಿಲ್ಲ ಎನ್ನುವ ಭರವಸೆ ಕೊಡಲಿದ್ದೇನೆ ಎಂದು.

Related Articles

Leave a Reply

Your email address will not be published. Required fields are marked *

Back to top button
error: Content is protected !!